ಬ್ರೇಕಿಂಗ್ ನ್ಯೂಸ್
15-07-22 02:06 pm Mangalore Correspondent ಕರಾವಳಿ
ಸುಳ್ಯ, ಜುಲೈ 15: ಐದು ಬಾರಿ ಶಾಸಕನಾಗಿ ಈ ಬಾರಿ ಸಚಿವರಾದ್ರೂ ಸುಳ್ಯ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ರಸ್ತೆ, ಸೇತುವೆ ಇಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಮಾಧ್ಯಮಗಳ ವರದಿ, ಸಾರ್ವಜನಿಕ ಟೀಕೆಯ ಬಗ್ಗೆ ಸುಳ್ಯ ಶಾಸಕ, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಬೇಕಾದ್ದನ್ನು ಬರೆಯೋದಿಲ್ಲ ಎಂದು ಹರಿಹಾಯ್ದಿದ್ದಾರೆ.
ಹರಿಹರ ಪಳ್ಳತ್ತಡ್ಕದಲ್ಲಿ ಮಳೆಹಾನಿ ಪ್ರದೇಶಗಳ ವೀಕ್ಷಣೆ ಸಂದರ್ಭದಲ್ಲಿ ಅಂಗಾರ ಮಾತನಾಡಿದ್ದು, ಮಾಧ್ಯಮಗಳು ಸೇತುವೆ ಇಲ್ಲ, ರಸ್ತೆ ಇಲ್ಲ ಎಂದು ಟೀಕಿಸಿ ವರದಿ ಮಾಡುತ್ತಾರೆ. ಆದರೆ ಸುಳ್ಯ ಕ್ಷೇತ್ರ ಗುಡ್ಡಗಾಡಿನಿಂದ ಕೂಡಿದ 76 ಗ್ರಾಮಗಳನ್ನು ಹೊಂದಿದೆ. ಎಲ್ಲ ಕಡೆಯೂ ಸಮಸ್ಯೆ ಇದೆ. ಇಷ್ಟೆಲ್ಲದರ ಮಧ್ಯೆ ಪ್ರತೀ ಗ್ರಾಮದಲ್ಲಿ ಸರಕಾರದ ಅಭಿವೃದ್ಧಿ ಕಾರ್ಯ ಆಗಿದೆ. ಎಲ್ಲೋ ಒಂದ್ಕಡೆ ಉಳಿದಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಾರೆ.
ಉಪ್ಪುಕಳದಲ್ಲಿ ಒಂದು ಕಡೆ ಸೇತುವೆ ಇಲ್ಲ. ಅದರ ಆಸುಪಾಸಿನಲ್ಲಿ ಮೂರು ಸೇತುವೆ ಮಾಡಲಾಗಿದೆ, ಅದರ ಕಾಮಗಾರಿ ಆಗುತ್ತಾ ಇದೆ, ಅದನ್ನು ಬರೆಯೋದಿಲ್ಲ. ಮಾಧ್ಯಮದ ಮಂದಿಯೂ ಬರೆದು ವಾಟ್ಸಪ್, ಫೇಸ್ಬುಕ್ ನಲ್ಲಿ ಹಾಕುತ್ತಾರೆ. ಯಾಕೆ ಕಾಮಗಾರಿ ಆಗಿರುವುದನ್ನು ಬರೆಯೋದಿಲ್ಲ ಎಂದು ಸಚಿವರು ಹರಿಹಾಯ್ದಿದ್ದಾರೆ. ಪೆರುವಾಜೆಯಲ್ಲಿ ಕಳೆದ ಬಾರಿ ಜನರು ಚುನಾವಣೆ ಬಹಿಷ್ಕಾರ ಮಾಡಿದ್ದರು. ನಮ್ಮ ಒಬ್ಬ ಕಾರ್ಯಕರ್ತ ಮಾತ್ರ ಓಟು ಹಾಕಲು ಬಂದಿದ್ದ. ಅಲ್ಲಿ ಅಭಿವೃದ್ಧಿ ಕಾರ್ಯ ಆಗಿದ್ದರೆ, ಅದು ಆತನ ಕಾರಣಕ್ಕೆ ಎಂದು ಹೇಳಬೇಕಾಗುತ್ತದೆ. ಚುನಾವಣೆ ವೇಳೆ ಬಹಿಷ್ಕಾರ ಮಾಡಿದ ಮಾತ್ರಕ್ಕೆ ಅಭಿವೃದ್ಧಿ ಆಗಲ್ಲ. ಸರಕಾರ ಜನರ ಬಳಿ ಬರುತ್ತದೆ, ಎಲ್ಲವೂ ಒಂದೇ ಬಾರಿಗೆ ಆಗಬೇಕು ಅಂದ್ರೆ ಆಗಲ್ಲ. ಅಪಪ್ರಚಾರ ಮಾಡುವವರು ಮಾಡುತ್ತಾರೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಂಗಾರ ಹೇಳಿದ್ದಾರೆ.
ಸುಳ್ಯ ಕ್ಷೇತ್ರದ ಪೆರುವಾಜೆ, ಉಪ್ಪುಕಳ, ಗುತ್ತಿಗಾರು, ಕೊಲ್ಲಮೊಗ್ರ ಸೇರಿದಂತೆ ಮೂಲೆ ಮೂಲೆಯಲ್ಲಿರುವ ಗ್ರಾಮಗಳು ಇವತ್ತಿಗೂ ಕುಗ್ರಾಮದ ರೀತಿಯಲ್ಲೇ ಇವೆ. ಅಲ್ಲಿ ಪ್ರತಿ ಮಳೆಗಾಲದಲ್ಲಿ ಹೊಳೆಗಳು ತುಂಬಿ ಹರಿಯುವಾಗ ಜನರು ದಾಟಿ ಹೋಗಲು ಕಷ್ಟ ಪಡುತ್ತಾರೆ. ಸೇತುವೆ ಇಲ್ಲದೆ, ನೂರಾರು ಜನರು ಕಷ್ಟ ಪಡುತ್ತಾರೆ. ಈ ಬಗ್ಗೆ ಕಾದು ಕಾದು ಸುಸ್ತಾದ ಜನರು ಈಗ ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಶಾಸಕರನ್ನು ಟೀಕಿಸುತ್ತಿದ್ದಾರೆ. ಅಂಗಾರ ಸಚಿವನಾದ್ರೂ ಚೊಂಬೇ ಗತಿ ಎಂದು ಟ್ರೋಲ್ ಮಾಡುತ್ತಾರೆ. ಇದರಿಂದ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಸೇರಿದಂತೆ ಶಾಸಕರೆಲ್ಲ ತೀವ್ರ ಇರಿಸು ಮುರಿಸಿಗೆ ಒಳಗಾಗಿದ್ದಾರೆ. ಇದರ ಲಾಭ ಎತ್ತಲು ಕಾಂಗ್ರೆಸ್ ನಾಯಕರು ಮುಂದಾಗಿಲ್ಲ. ಬದಲಿಗೆ, ಬಿಜೆಪಿಯಲ್ಲಿ ಅಭಿವೃದ್ಧಿ ಆಗಿಲ್ಲವೆಂದು ಅತೃಪ್ತಿ ಹೊಂದಿರುವ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರೇ ಟೀಕಿಸತೊಡಗಿದ್ದಾರೆ. ಪರೋಕ್ಷವಾಗಿ ಹೊಸತಾಗಿ ಬಂದಿರುವ ಆಮ್ ಆದ್ಮಿ ಇನ್ನಿತರ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಸುಳ್ಯ ಕ್ಷೇತ್ರದ ಬಿಜೆಪಿ ಪಾಲಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಧೃತಿಗೆಟ್ಟ ಶಾಸಕ ಎಸ್.ಅಂಗಾರ ಮಾಧ್ಯಮಗಳನ್ನೇ ಟೀಕಿಸಲು ಮುಂದಾಗಿದ್ದಾರೆ.
Minister Angara angry over media for telecasting negative about Sullia often.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm