ಮಹಾತ್ಮ ಗಾಂಧಿಯನ್ನು ಕೊಂದವರೇ ದೇಶದ ಆಡಳಿತ ನಡೆಸುತ್ತಿದ್ದಾರೆ: ಯು.ಟಿ ಖಾದರ್ ಟೀಕೆ

02-10-20 02:25 pm       Mangalore Correspondent   ಕರಾವಳಿ

ಮಹಾತ್ಮ ಗಾಂಧಿಯವರನ್ನು ಕೊಂದ ವರ್ಗದವರೆ ಇವತ್ತು ದೇಶವನ್ನು ಆಳುತ್ತಿದ್ದಾರೆ. ಯು.ಟಿ ಖಾದರ್ ಹೇಳಿದರು ತೀವ್ರ ವಾಗ್ದಾಳಿ.

ಮಂಗಳೂರು, ಅಕ್ಟೋಬರ್ 2: ಮಹಾತ್ಮ ಗಾಂಧಿಯವರನ್ನು ಕೊಂದ ವರ್ಗದವರೆ ಇವತ್ತು ದೇಶವನ್ನು ಆಳುತ್ತಿದ್ದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ದೇಶದಲ್ಲೆಡೆ ಅಂಗೀಕರಿಸುವ ಮೂಲಕ ಜನವಿರೋಧಿ ಆಡಳಿತ ನಡೆಸುತ್ತಿದ್ದಾರೆಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಅಂಗೀಕರಿಸಿದ ಕೃಷಿ ಕಾಯ್ದೆಗಳು, ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ಬಿಜೆಪಿ ಸರಕಾರ ನಡೆಸಿದ ಹಲ್ಲೆ, ಅತ್ಯಾಚಾರ ಆರೋಪಿಗಳ ರಕ್ಷಣೆ ವಿರುದ್ಧ ಶುಕ್ರವಾರ ಕಲ್ಲಾಪಿನಲ್ಲಿ ನಡೆದ ರಸ್ತೆ (ಪ್ರತಿಭಟನೆ) ತಡೆ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ರಸ್ತೆ ತಡೆಗೂ ಮೊದಲು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಮುಖಂಡರಾದ ಸುರೇಶ್ ಭಟ್ನಗರ, ಉಸ್ಮಾನ್ ಕಲ್ಲಾಪು, ಈಶ್ವರ್ ಉಳ್ಳಾಲ್, ಮುಸ್ತಾಫ ಹರೇಕಳ, ಇಸ್ಮಾಯಿಲ್ ಯು.ಹೆಚ್, ದಿನೇಶ್ ರೈ, ಎನ್ .ಎಸ್ ಕರೀಂ, ನಝರ್ ಷಾ ಪಟ್ಟೋರಿ, ಪುರುಷೋತ್ತಮ ಶೆಟ್ಟಿ,ಆಲ್ವಿನ್ ಡಿ ಸೋಜಾ, ಸುರೇಖ ಚಂದ್ರಹಾಸ್ ,ಸಪ್ನ ಹರೀಶ್ ಮೊದಲಾದವರು ಇದ್ದರು.