ಬ್ರೇಕಿಂಗ್ ನ್ಯೂಸ್
19-07-22 02:21 pm Mangalore Correspondent ಕರಾವಳಿ
ಮಂಗಳೂರು, ಜುಲೈ 19: ಎರಡು ವರ್ಷಗಳ ಹಿಂದೆ ಆಡಳಿತಾಧಿಕಾರಿ ಇದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದ ನೀರಿನ ದರ ಪರಿಷ್ಕರಣೆಗೆ ಕೊನೆಗೂ ರಾಜ್ಯ ಸರಕಾರ ಕತ್ತರಿ ಹಾಕಿದ್ದು, ಈ ಹಿಂದಿನ ದರವೇ ಜಾರಿಗೆ ಬರಲಿದೆ. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಸತತ ಪ್ರಯತ್ನದ ಬಳಿಕ ನಗರಾಭಿವೃದ್ಧಿ ಇಲಾಖೆಯಿಂದ ಆಗಸ್ಟ್ 1ರಿಂದ ಪರಿಷ್ಕೃತ ಆದೇಶ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.
ಗೃಹ ಬಳಕೆ ನೀರಿನ ದರ ಪರಿಷ್ಕರಣೆ ಕುರಿತು ಕಳೆದ ಮೇ 31ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಪಾಲಿಕೆಯ ನಿರ್ಣಯಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಬಿಜೆಪಿ ಅವಧಿಯಲ್ಲಿ ಜನಸಾಮಾನ್ಯರ ಗೃಹ ಬಳಕೆಯ ನೀರಿನ ದರ ಹೆಚ್ಚಿದ್ದರಿಂದ ವಿಪಕ್ಷಗಳು ಮತ್ತು ಸಾಮಾನ್ಯ ಜನರಿಂದಲೂ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರಾಜ್ಯ ಸರಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಪಾಲಿಕೆಗೆ ಆದಾಯ ಕೊರತೆ ಆಗದಂತೆ ಮತ್ತು ಬಡಜನರಿಗೂ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರಿಂದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಷರತ್ತಿನ ಅನುಮತಿ ನೀಡಿದ್ದಾರೆ. ಆಗಸ್ಟ್ 1ರಿಂದ ಒಂದು ವರ್ಷದ ಅವಧಿಗೆ ಮಾತ್ರ ಈ ದರ ಪಟ್ಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಒಂದು ವರ್ಷದ ನಂತರ ಮಹಾನಗರ ಪಾಲಿಕೆಯು ದರ ಪರಿಷ್ಕರಣೆ ಕುರಿತು ನಿರ್ಧಾರ ಕೈಗೊಂಡು ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಆಡಳಿತಾಧಿಕಾರಿ ಇದ್ದಾಗ ನೀರಿನ ದರ ಹೆಚ್ಚಳ
2019ರ ಜೂನ್ 15ರಂದು ಪಾಲಿಕೆಯಲ್ಲಿ ಆಡಳಿತಾಧಿಕಾರಿ ಇದ್ದಾಗ ಗೃಹ ಬಳಕೆಗೆ ಗರಿಷ್ಠ ಎಂಟು ಕಿಲೋ ಲೀಟರ್ ಎಂದು ನಿಗದಿಪಡಿಸಿ, ಪ್ರತಿ ಕಿ.ಲೀ. ನೀರಿಗೆ ಏಳು ರೂ. ನಿಗದಿ ಮಾಡಲಾಗಿತ್ತು. ಆದರೆ, ಇದು ಬಡ ಜನರಿಗೆ ದುಬಾರಿಯಾಗುತ್ತದೆ ಎಂಬ ಕಾರಣದಿಂದ ಆಬಳಿಕ ಆಡಳಿತಕ್ಕೆ ಬಂದ ಬಿಜೆಪಿ, ನೀರಿನ ದರ ಪರಿಷ್ಕರಣೆಗೆ ಮುಂದಾಗಿತ್ತು. ಈ ಬಗ್ಗೆ 2020 ಮೇ 13ರಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ದರ ಪರಿಷ್ಕರಣೆಯೊಂದಿಗೆ ಗರಿಷ್ಠ ಬಳಕೆ 10 ಕಿ.ಲೀ.ಗೆ ನಿಗದಿಪಡಿಸಿ, ದರವನ್ನು ಪ್ರತಿ ಕಿಲೋ ಲೀಟರಿಗೆ ಆರು ರೂ. ಮಾಡಲಾಗಿತ್ತು. ಆದರೆ, ಈ ನಿರ್ಣಯಕ್ಕೆ ರಾಜ್ಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ಆಬಳಿಕ 2022ರ ಮೇ ತಿಂಗಳಲ್ಲಿ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ಇದರಲ್ಲಿ ಗರಿಷ್ಠ ಮಿತಿಯನ್ನು 20 ಕಿ.ಲೀ.ಗೆ ನಿಗದಿ ಮಾಡಿದ್ದಲ್ಲದೆ, ಪ್ರತಿ ಕಿಲೋ ಲೀಟರ್ ದರವನ್ನು 5 ರೂ.ಗೆ ಇಳಿಕೆ ಮಾಡಲಾಗಿತ್ತು. ಹೊಸ ಪ್ರಸ್ತಾವನೆಗೆ ರಾಜ್ಯ ಸರಕಾರ ಈಗ ಷರತ್ತುಬದ್ಧ ಅನುಮತಿ ನೀಡಿದೆ.
ಹೊಸ ದರಪಟ್ಟಿ ಪ್ರಕಾರ, ಸಾಮಾನ್ಯ ಗೃಹ ಬಳಕೆಗೆ ತಿಂಗಳಿಗೆ 20 ಸಾವಿರ ಲೀಟರ್ ನೀರು ಬಳಸಿದರೆ, ಈಗ 174 ರೂ. ಬಿಲ್ ಬರುತ್ತಿದ್ದರೆ, ಮುಂದೆ ಅದು 100 ರೂ. ಆಗಲಿದೆ. ಪ್ರತೀ 70 ಸಾವಿರ ಲೀಟರಿಗೆ ಈಗ 814 ರೂ. ಇದ್ದರೆ, ಮುಂದೆ 785 ರೂ. ಆಗಲಿದೆ. ಪ್ರತೀ ಲಕ್ಷ ಲೀಟರ್ ನೀರಿನ ಬಳಕೆಗೆ ಈಗ 1204 ರೂ. ಇದ್ದರೆ, ಮುಂದೆ 1205 ರೂ. ಆಗಲಿದೆ. ಪ್ರತೀ ಒಂದೂವರೆ ಲಕ್ಷ ಲೀಟರ್ ನೀರಿನ ಬಳಕೆಗೆ 1854 ರೂ. ಇರುವುದು ಮುಂದೆ 1905 ರೂ. ಆಗಲಿದೆ.

ಬಡವರಿಗೆ ಉಪಯೋಗ ಆಗಲೆಂದು ಪರಿಷ್ಕರಣೆ
ಬಡ ಜನರಿಗೆ ಉಪಯೋಗ ಆಗಬೇಕೆಂಬ ಉದ್ದೇಶದಿಂದ ನೀರಿನ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕಡಿಮೆ ನೀರಿನ ಬಳಕೆ ಮಾಡಿದಲ್ಲಿ ಕಡಿಮೆ ಶುಲ್ಕ, ಹೆಚ್ಚು ನೀರು ಬಳಕೆ ಮಾಡಿದಲ್ಲಿ ಅದಕ್ಕೆ ತಕ್ಕಂತೆ ನೀರಿನ ದರವೂ ಹೆಚ್ಚಲಿದೆ. ಪಾಲಿಕೆಯ ಚುನಾವಣೆ ಸಂದರ್ಭ ಕುಡಿಯುವ ನೀರಿನ ದರವನ್ನು ಕಡಿಮೆಗೊಳಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಅದರಂತೆ, ದರವನ್ನು ಕಡಿಮೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿದ್ದಾರೆ.
State BJP government gave conditional approval to the domestic water rate reduction proposal sent by Mangaluru City Corporation (MCC) on Monday July 18. The revised tariff will be applicable only to limits of the MCC. It will be in implementation for one year from August 1. The MCC has to submit a fresh proposal after one year to the state government and get approval. This is mentioned in the order of the government.
13-02-26 10:45 pm
HK News Desk
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
Breast Cancer Awareness Drive Goes Nationwide...
11-02-26 01:34 pm
13-02-26 11:00 pm
HK News Staffer
ವಂದೇ ಮಾತರಂ ಕಡ್ಡಾಯ ಕ್ರಮಕ್ಕೆ ಜಮಾತೆ ಉಲೆಮಾ ಹಿಂದ್...
12-02-26 10:51 pm
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
13-02-26 09:52 pm
Mangalore Correspondent
Pilikula zoo, Mangalore: ಪಿಲಿಕುಳ ಪ್ರಾಣಿ ಸಂಗ್ರ...
13-02-26 06:38 pm
ಪರ್ಸೆಂಟೇಜ್ ಈಗ ಹೆಚ್ಚಾಗಿದೆ, ರಾಜ್ಯದಲ್ಲಿ 37 ಸಾವಿರ...
13-02-26 01:28 pm
ಶಾಲಾ ಮಕ್ಕಳನ್ನು ಟಿಪ್ಪರ್ ನಲ್ಲಿ ತುಂಬಿಸಿ ಅಧ್ಯಯನ ಪ...
13-02-26 01:06 am
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
13-02-26 03:35 pm
Mangalore Correspondent
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆ ಪತ್ತೆ...
13-02-26 11:52 am
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm