ಬ್ರೇಕಿಂಗ್ ನ್ಯೂಸ್
19-07-22 06:59 pm Mangalore Correspondent ಕರಾವಳಿ
ಮಂಗಳೂರು, ಜುಲೈ 19 : ಮುಡಾದಿಂದ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉರ್ವಾ ಮಾರುಕಟ್ಟೆ ಕಟ್ಟಡವನ್ನು ವ್ಯಾಪಾರಿಗಳಿಗೆ ಬಿಟ್ಟು ಕೊಟ್ಟಿರಲಿಲ್ಲ. ಕೊನೆಗೂ ಕಟ್ಟಡವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.
ಮುಡಾದಿಂದ ಹಸ್ತಾಂತರಿಸುವ ಬಗ್ಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಶಾಸಕರ ಅಧ್ಯಕ್ಷತೆಯ ಸಮಿತಿ ಸಭೆ, ಮನಪಾ ಆಯುಕ್ತರು, ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ, ಪೌರಾಡಳಿತ ನಿರ್ದೇಶಕರ ಪತ್ರದಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದನ್ನೆಲ್ಲ ಪರಿಗಣಿಸಿದ ರಾಜ್ಯ ಸರಕಾರ ಕೆಲವೊಂದು ಷರತ್ತುಗಳನ್ನು ನೀಡಿ ಅನುಮೋದನೆ ನೀಡಿದೆ.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಈ ನಿಟ್ಟಿನಲ್ಲಿ ಕಳೆದ ಹಲವು ಸಮಯಗಳಿಂದ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಸರಕಾರ ಈಗ ಅಂತಿಮ ನಿರ್ಧಾರಕ್ಕೆ ಬಂದಿದೆ. ಸರಕಾರದ ಈ ನಿರ್ಧಾರದಿಂದ ಪಾಲಿಕೆ ಸುಪರ್ದಿಯಲ್ಲಿ ಮಾರುಕಟ್ಟೆ ಸಂಕೀರ್ಣದ ಸದ್ಬಳಕೆ ಮಾಡಲು ಪಾಲಿಕೆಗೆ ಸಂಪೂರ್ಣ ಅಧಿಕಾರ ಸಿಕ್ಕಂತಾಗಲಿದೆ.
14 ಕೋಟಿ ವೆಚ್ಚ, ಪಾಲಿಕೆಯಿಂದ ನೀಡಲು ಒಪ್ಪಿಗೆ
ಪ್ರಸ್ತಾವಿತ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14.37 ಕೋಟಿ ರೂ. ಖರ್ಚು ಮಾಡಲಾಗಿದ್ದು, ಇದನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಈ ಹಣದ ಕ್ರೋಢೀಕರಣಕ್ಕಾಗಿ ಬ್ಯಾಂಕಿನಿಂದ ಸಾಲವನ್ನು ಪಡೆಯುವ ಅಗತ್ಯವಿದ್ದಲ್ಲಿ ಪಾಲಿಕೆಯು ಪ್ರಿಮಿಯಂ ಎಫ್‌ಎಆರ್ ಶುಲ್ಕವನ್ನಲ್ಲದೇ ಇತರ ಮೂಲಗಳಿಂದ ಬ್ಯಾಂಕ್ ಸಾಲವನ್ನು ಪಡೆಯಬಹುದು. ಉಳಿದ ಮೊತ್ತವನ್ನು ಪ್ರತಿವರ್ಷ ಮೇ ತಿಂಗಳಿನಲ್ಲಿ ವಾಣಿಜ್ಯ ಸಂಕೀರ್ಣದಿಂದ ಬರುವ ಬಾಡಿಗೆ ಮೊತ್ತದಿಂದ 1 ಕೋಟಿ ರೂ. ಮೊತ್ತವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸುವುದು. ಈ ಮಾರುಕಟ್ಟೆ ಮಳಿಗೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ನಿಯಾಮಾನುಸಾರ ಕ್ರಮ ವಹಿಸುವುದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಪಾಲಿಕೆಯು ಭರಿಸುವ ಮೊತ್ತವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ಮುನ್ನ ಸರಕಾರದ ಪೂರ್ವಾನುಮೋದನೆ ಪಡೆಯಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ಹಲವು ಸಮಯದಿಂದ ಜನರ ಒತ್ತಾಸೆಗೆ ಒಳಗಾಗಿದ್ದ ಕಟ್ಟಡ ಕಡೆಗೂ ಜನರ ಪ್ರಯೋಜನಕ್ಕೆ ಬರುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದವ್ಯಾಸ ಕಾಮತ್, ಹಿಂದಿನ ಸರಕಾರದ ಅವಧಿಯಲ್ಲಿ ಉರ್ವಾ ಮಾರುಕಟ್ಟೆ ಸಂಕೀರ್ಣವನ್ನು ಮುಡಾ ವತಿಯಿಂದ ನಿರ್ಮಿಸಲಾಗಿದ್ದರೂ, ನಿರ್ವಹಣೆ ಬಗ್ಗೆ ಗೊಂದಲಕ್ಕೆ ಕಾರಣವಾಗಿತ್ತು. ಬಿಜೆಪಿ ಸರಕಾರ ಬಂದ ಬಳಿಕ ಅದನ್ನು ಪಾಲಿಕೆ ಸುಪರ್ದಿಗೆ ಪಡೆದುಕೊಳ್ಳುವ ಬಗ್ಗೆ ನಿರ್ಧರಿಸಿದ್ದೆವು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಸರಕಾರದ ಮಟ್ಟದಲ್ಲಿ ಈ ಪ್ರಕ್ರಿಯೆ ಆಗಬೇಕಿರುವುದರಿಂದ ಎರಡು ವರ್ಷಗಳಿಂದ ಸತತ ಪ್ರಯತ್ನ ಪಟ್ಟಿದ್ದು, ಇದೀಗ ಉರ್ವಾ ಮಾರುಕಟ್ಟೆ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಕೆಲಸಕ್ಕೆ ಅನುಮೋದನೆ ಸಿಕ್ಕಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗೆ, ನಗರಾಭಿವೃದ್ಧಿ ಸಚಿವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Mangalore Urwa market to be handed over to MCC after interference of MLA Vedavyas kamath.
14-11-24 02:09 pm
HK News Desk
Shivamogga News, Three youths drowned; ಶಿವಮೊಗ...
14-11-24 01:55 pm
MLA Satish Sail, court stay, Jail: ಬೇಲೆಕೇರಿ ಬ...
13-11-24 07:07 pm
Marakumbi atrocity case, Bail: ಮರಕುಂಬಿ ದಲಿತ ದ...
13-11-24 06:45 pm
Chikkamagaluru, Naxals: ದಶಕದ ಬಳಿಕ ಮಲೆನಾಡಿಗೆ ನ...
13-11-24 12:37 pm
12-11-24 09:00 pm
HK News Desk
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
ತಮಿಳು ಚಿತ್ರರಂಗಕ್ಕೆ ಬಿಗ್ ಶಾಕ್ ; 400ಕ್ಕೂ ಹೆಚ್...
10-11-24 04:09 pm
ದೇಶದಲ್ಲಿ ಬಿಜೆಪಿ ಇರೋ ವರೆಗೂ ಧರ್ಮಾಧರಿತ ಮೀಸಲಾತಿ...
10-11-24 11:33 am
14-11-24 02:48 pm
Udupi Correspondent
Mangalore Mulki Murder, Karthik bhat; ಪಕ್ಷಿಕೆ...
13-11-24 11:19 pm
Nirmala sitharaman, Mangalore: ಮಕ್ಕಳು ಕಲಿಯಬೇಕ...
13-11-24 11:05 pm
Mangalore, Gloria Rodrigues death, St Aloysiu...
13-11-24 08:17 pm
Mangalore Bondel new church, St Lawrence; ಬೋಂ...
13-11-24 05:24 pm
14-11-24 04:32 pm
Bangalore Correspondent
Mangalore crime, Mulki case: ಪಕ್ಷಿಕೆರೆ ದುರಂತ...
12-11-24 07:02 pm
Mangalore crime, Bajarang Dal, Ullal News: ಉಳ...
12-11-24 11:41 am
Udupi police, lock up death, Crime: ಬ್ರಹ್ಮಾವರ...
11-11-24 12:16 pm
Mangalore crime, Bengare, Assult: ಹುಡುಗಿ ನೋಡ...
10-11-24 10:53 pm