ಬ್ರೇಕಿಂಗ್ ನ್ಯೂಸ್
21-07-22 10:40 am Mangalore Correspondent ಕರಾವಳಿ
ಮಂಗಳೂರು, ಜುಲೈ 21 : ಹಿಜಬ್ ವಿವಾದ, ಗೊಂದಲದ ಬೆನ್ನಲ್ಲೇ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿವೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಮುಸ್ಲಿಮ್ ಆಡಳಿತ ಸಂಸ್ಥೆಗಳು ಪಿಯು ಕಾಲೇಜು ಆರಂಭಿಸಲು ಅನುಮತಿ ಕೋರಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿವೆ ಎನ್ನುವ ಮಾಹಿತಿಗಳಿವೆ.
ಹಿಜಬ್ ವಿವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ, ಪಿಯು ಮತ್ತು ಕೆಳಗಿನ ಶಾಲೆಗಳಲ್ಲಿ ಹಿಜಾಬ್ ನಿಷೇಧ ಆಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಶಿಕ್ಷಣವನ್ನೇ ಕಡಿತಗೊಳಿಸಿದ್ದರೆ, ಬಹುತೇಕ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರಲು ಒಪ್ಪಿದ್ದಾರೆ. ವಾರದ ಹಿಂದೆ ಮಂಗಳೂರಿನಲ್ಲಿ ಹಿಜಾಬ್ ನಮ್ಮ ಹಕ್ಕು ಎನ್ನುವ ಹೆಸರಲ್ಲಿ ಕ್ಯಾಂಪಸ್ ಫ್ರಂಟ್ ಆಶ್ರಯದಲ್ಲಿ ವಿದ್ಯಾರ್ಥಿನಿಯರ ಸಮಾವೇಶವೂ ನಡೆದಿತ್ತು.
ಗೊಂದಲ, ವಿವಾದದ ನಡುವೆ ಈ ಬಾರಿಯ ಶೈಕ್ಷಣಿಕ ವರ್ಷ ಮುಗಿದಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕಲಿಯುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಇಕ್ಕಟ್ಟಿನ ಸ್ಥಿತಿಯನ್ನೂ ಎದುರಿಸಿದ್ದರು. ಈ ನಡುವೆ, ಈಗಾಗಲೇ ಮುಸ್ಲಿಂ ಶಾಲೆಗಳಿರುವಲ್ಲಿ ಪಿಯುಸಿ ಶಿಕ್ಷಣವನ್ನೂ ಆರಂಭಿಸಲು ಸದ್ದಿಲ್ಲದೆ ತಯಾರಿ ನಡೆದಿದ್ದು ಅದಕ್ಕಾಗಿ ಸರಕಾರದಿಂದ ಅನುಮತಿ ಪಡೆಯೋದಕ್ಕೆ ಸಂಸ್ಥೆಗಳು ಮುಂದಾಗಿವೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸತಾಗಿ ಪಿಯು ಕಾಲೇಜು ತೆರೆಯಲು 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಪಿಯು ಬೋರ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಒಂದು ಮುಸ್ಲಿಂ ಮತ್ತು ಇನ್ನೊಂದು ಸುಬ್ರಹ್ಮಣ್ಯ ಬಳಿಯ ಮುಸ್ಲಿಮೇತರ ಆಡಳಿತದ ಶಿಕ್ಷಣ ಸಂಸ್ಥೆಗೆ ಕಾಲೇಜು ಆರಂಭಿಸಲು ಅನುಮತಿ ಸಿಕ್ಕಿದೆ. ಮುಸ್ಲಿಂ ಸಮುದಾಯದ ಮುಖಂಡರು ತಾವಾಗಿಯೇ ತಮ್ಮ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಹೊಸತಾಗಿ ಮುಸ್ಲಿಂ ಆಡಳಿತದ್ದೇ ಖಾಸಗಿ ಶಿಕ್ಷಣ ಸಂಸ್ಥೆ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
As many as 13 Muslim educational institutions have sought the Karnataka government’s permission to set up Pre-University Colleges in Dakshina Kannada which would enable Muslim girl students to wear hijab inside classrooms.According to sources in the Education Department, all the applications have sought consent to open PU colleges (first and second PUC) in the coastal district of Dakshina Kannada from where the agitation for hijab began in Karnataka.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
30-09-25 04:08 pm
HK News Desk
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
ಏಷ್ಯಾ ಕಪ್ ಫೈನಲ್ ಗೆದ್ದರೂ ಕಪ್ ಸ್ವೀಕರಿಸದೆ ಪಾಕಿಗೆ...
29-09-25 03:54 pm
ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತ...
28-09-25 10:02 pm
30-09-25 10:57 pm
Mangalore Correspondent
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
Mithun Rai, Pilinalikes 10th Anniversary, Man...
29-09-25 07:15 pm
ಮಂಗಳೂರು ದಸರಾ-2025 ರಾಜ್ಯ ಮಟ್ಟದ ಮ್ಯಾರಥಾನ್ ; ಪುರ...
28-09-25 08:12 pm
29-09-25 01:24 pm
Mangalore Correspondent
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm