ಬ್ರೇಕಿಂಗ್ ನ್ಯೂಸ್
22-07-22 05:51 pm Mangalore Correspondent ಕರಾವಳಿ
ಮಂಗಳೂರು, ಜುಲೈ 22: ಬಜ್ಪೆ ಠಾಣೆ ವ್ಯಾಪ್ತಿಯ ಕಂದಾವರ ಬಳಿಯ ಕೊಳಂಬೆ ಎಂಬಲ್ಲಿ ಸನ್ಯಾಸತ್ವ ಸ್ವೀಕರಿಸಿ ತನ್ನದೇ ಆದ ಮಠ ಕಟ್ಟಿಕೊಂಡಿದ್ದ ಶ್ರೀಕೃಷ್ಣ ದೇವಿಪ್ರಸಾದ ಸ್ವಾಮೀಜಿ (50) ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಐದು ವರ್ಷಗಳ ಹಿಂದೆ ಪತ್ನಿ ಮಕ್ಕಳನ್ನು ತ್ಯಜಿಸಿ ಧರ್ಮಚಾವಡಿ ಹೆಸರಲ್ಲಿ ಮಠ ಕಟ್ಟಿಕೊಂಡಿದ್ದರು. ಮಠದಲ್ಲಿಯೇ ನೆಲೆಸಿದ್ದ ಅವರು ಬರುತ್ತಿದ್ದ ಆಸುಪಾಸಿನ ಭಕ್ತರಿಗೆ ಜೀವನದ ದಾರಿಗಳನ್ನು ಹೇಳುತ್ತಾ ಸ್ಥಳೀಯವಾಗಿ ಸ್ವಾಮೀಜಿ ಎಂದು ಕರೆಸಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ದೇವರಿಗೆ ಪೂಜೆ ಸಲ್ಲಿಸಿ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂರ್ವಾಶ್ರಮದಲ್ಲಿ ಇವರ ಹೆಸರು ದೇವಿಪ್ರಸಾದ್ ಶೆಟ್ಟಿ ಎಂಬುದಾಗಿತ್ತು. ಪತ್ನಿ ಮತ್ತು ಓರ್ವ ಪುತ್ರಿ ಇದ್ದರು. ಸನ್ಯಾಸತ್ವ ಪಡೆದ ಬಳಿಕ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರು. ಕುಟುಂಬದ ಸಂಪರ್ಕವನ್ನೂ ಕಡಿದುಕೊಂಡಿದ್ದರು. ಕಳೆದ ವರ್ಷ ತನ್ನ ಧರ್ಮ ಚಾವಡಿಯಲ್ಲಿ ಲಕ್ಷಾಂತರ ಖರ್ಚು ಮಾಡಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಿದ್ದರು. ಸ್ವಾಮೀಜಿ ದಿಢೀರ್ ಸಾವಿಗೆ ಶರಣಾಗಿದ್ದು ಅನುಮಾನ ಮೂಡಿಸಿದೆ. ಈ ಬಗ್ಗೆ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಅದರ ಬಳಿಯಲ್ಲೇ ಪ್ಲಾಸ್ಟಿಕ್ ಕುರ್ಚಿ ಕೂಡ ಇತ್ತು. ಮಠಕ್ಕೆ ಬಂದವರು ಸ್ವಾಮೀಜಿ ಸತ್ತಿರುವುದನ್ನು ನೋಡಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.
The seer of Dharma Chavadi near Talakala Kandhavara panchayat limits Kolambe village killed himself on Friday, July 22 by hanging. The deceased has been identified as Sri Sri Sri Krishna Devi Prasad aged 51 years.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 07:33 pm
HK News Desk
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm