ಬ್ರೇಕಿಂಗ್ ನ್ಯೂಸ್
22-07-22 10:36 pm Mangalore Correspondent ಕರಾವಳಿ
ಮಂಗಳೂರು, ಜುಲೈ 22: ಮಂಗಳೂರಿನಲ್ಲಿ ಅರೆಬರೆ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಕಾಂಕ್ರೀಟ್ ರಸ್ತೆ ಅಗೆದು ಅಲ್ಲಲ್ಲಿ ಹೊಂಡ ಬಿದ್ದಿರುವುದು, ಕಾಂಕ್ರೀಟ್ ಒಡೆದು ಮಣ್ಣು ತುಂಬಿದ್ದರಿಂದ ವಾಹನ ಸಾಗಾಟಕ್ಕೆ ಸಮಸ್ಯೆ ಆಗಿರುವ ನಡುವಲ್ಲೇ ರಾವ್ ಎಂಡ್ ರಾವ್ ಸರ್ಕಲ್ ಬಳಿ ರಸ್ತೆ ಮಧ್ಯೆ ಹೊಂಡ ಬಿದ್ದಿರುವುದಕ್ಕೆ ಪೊಲೀಸ್ ಸಿಬಂದಿಯೊಬ್ಬರು ಕಲ್ಲು ತುಂಬಿ ಗಮನ ಸೆಳೆದಿದ್ದಾರೆ.
ಸ್ಟೇಟ್ ಬ್ಯಾಂಕ್ ವೃತ್ತದಿಂದ ರಾವ್ ಎಂಡ್ ರಾವ್ ಸರ್ಕಲ್ ಮೂಲಕ ಲೇಡಿಗೋಶನ್ ಕಡೆಗೆ ಸಾಗುವ ರಸ್ತೆಯಲ್ಲಿ ನಡುವೆ ಕಾಂಕ್ರೀಟ್ ರಸ್ತೆಯನ್ನು ಅಗೆದು, ಆನಂತರ ಮಣ್ಣು, ಜಲ್ಲಿ ತುಂಬಲಾಗಿತ್ತು. ಆದರೆ ವಾಹನಗಳು ಸಾಗಿದ ಬಳಿಕ ಮಣ್ಣು ಒಳಗೆ ಜಗ್ಗಿದ್ದರಿಂದ ಆ ಜಾಗ ಹೊಂಡ ಬಿದ್ದಿತ್ತು. ಇದರಿಂದ ಬೈಕ್ ಇನ್ನಿತರ ದ್ವಿಚಕ್ರ ವಾಹನಗಳು ಸಾಗುವುದಕ್ಕೆ ದೊಡ್ಡ ಅಡ್ಡಿಯಾಗಿತ್ತು. ಇದನ್ನು ಗಮನಿಸಿದ ಶುಕ್ರವಾರ ಟ್ರಾಫಿಕ್ ಕರ್ತವ್ಯಕ್ಕೆ ಸ್ಥಳದಲ್ಲಿ ನಿಯೋಜನೆ ಆಗಿದ್ದ ಪಾಂಡೇಶ್ವರ ಸಂಚಾರ ವಿಭಾಗದ ಶರಣಪ್ಪ ಎಂಬ ಪೊಲೀಸ್ ಸಿಬಂದಿ ಸ್ವತಃ ಕಲ್ಲುಗಳನ್ನು ತುಂಬಿ ಹೊಂಡ ಮುಚ್ಚಿದ್ದಾರೆ.



ರಸ್ತೆ ಬದಿ ಹಾಕಲಾಗಿದ್ದ ಇಂಟರ್ ಲಾಕ್ ಕಲ್ಲುಗಳನ್ನು ಹೊಂಡಕ್ಕೆ ಮುಚ್ಚಿ ಇನ್ನಷ್ಟು ದೊಡ್ಡ ಹೊಂಡ ಆಗದಂತೆ ಪ್ರಯತ್ನಿಸಿದ್ದಾರೆ. ಈ ರೀತಿ ಕೈಯಾರೆ ಕೆಲಸ ಮಾಡಿರುವುದನ್ನು ಅಲ್ಲಿನ ಸಾರ್ವಜನಿಕರು ಫೋಟೋ ತೆಗೆದು ಜಾಲತಾಣದಲ್ಲಿ ಹಂಚಿದ್ದು, ಭಾರೀ ವೈರಲ್ ಆಗಿದೆ. ಅಲ್ಲದೆ, ಉತ್ತರ ಕರ್ನಾಟಕ ಮೂಲದ ಪೊಲೀಸ್ ಸಿಬಂದಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
Mangalore Traffic cop fills potholes with interlock near State Bank appreciation pours on social media. Sharanappa, attached to the traffic east police station of Pandeshwar with the help of people around filled the gaping pothole with interlocks for the convenience of the public.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
12-06-26 04:31 pm
HK News Staffer
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
ನಾಳೆ ಕೊಲ್ಲೂರು ದೇಗುಲಕ್ಕೆ ಸಿಎಂ ವಿಜಯ್ ಭೇಟಿ ; ಮಧ್...
11-06-26 06:37 pm
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
12-06-26 11:58 am
HK News Staffer
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm