ಮಾತಿನಲ್ಲೇ ಸ್ವರ್ಗ ಸುಖ ಕಾಣಿಸ್ತಿದ್ದ ಫೇಸ್ಬುಕ್ ಪ್ರೇಮಿ ; ಪ್ರೀತಿಗೆ ಬಿದ್ದು ಮನೆಯವರನ್ನೇ ಬಿಡಲು ತಯಾರಾಗಿದ್ದ ಯುವತಿಗೆ ಶಾಕ್ !  

23-07-22 03:53 pm       Mangalore Correspondent   ಕರಾವಳಿ

ಇಲ್ಲೊಬ್ಬಳು ಹುಡುಗಿ ಫೇಸ್ಬುಕ್ ಪ್ರೇಮ ಪಾಶಕ್ಕೆ ಬಿದ್ದಿದ್ದಲ್ಲದೆ, ಆತನನ್ನೇ ಮದುವೆಯಾಗುತ್ತೇನೆಂದು ಹಠಕ್ಕೆ ಬಿದ್ದು ಕೊನೆಗೆ ಆತನ ನಿಜ ವಿಚಾರ ತಿಳಿಯುತ್ತಲೇ ಬೇಸ್ತುಬಿದ್ದ ಘಟನೆ ಬೆಳಕಿಗೆ ಬಂದಿದೆ.

ಬಂಟ್ವಾಳ, ಜುಲೈ 23: ಫೇಸ್ಸುಕ್ಕಲ್ಲಿ ಹುಡುಗ- ಹುಡುಗಿ ಕನೆಕ್ಟ್ ಆಗಿ ಲವ್ ಆಗೋದು, ಕೆಲವರು ಯಾರದ್ದೋ ಪ್ರೀತಿಯ ಬಲೆಗೆ ಬಿದ್ದು ಕಿರುಕುಳಕ್ಕೆ ಒಳಗಾಗೋದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಹುಡುಗಿ ಫೇಸ್ಬುಕ್ ಪ್ರೇಮ ಪಾಶಕ್ಕೆ ಬಿದ್ದಿದ್ದಲ್ಲದೆ, ಆತನನ್ನೇ ಮದುವೆಯಾಗುತ್ತೇನೆಂದು ಹಠಕ್ಕೆ ಬಿದ್ದು ಕೊನೆಗೆ ಆತನ ನಿಜ ವಿಚಾರ ತಿಳಿಯುತ್ತಲೇ ಬೇಸ್ತುಬಿದ್ದ ಘಟನೆ ಬೆಳಕಿಗೆ ಬಂದಿದೆ.

ಆಕೆ ವಿಟ್ಲ ಠಾಣೆ ವ್ಯಾಪ್ತಿಯ ಬಡ ಕುಟುಂಬದ ಯುವತಿ. ನಾಲ್ಕು ವರ್ಷಗಳಿಂದ ಫೇಸ್ಬುಕ್ಕಲ್ಲಿ ಸಂಪರ್ಕ ಆಗಿದ್ದ ಪ್ರದೀಪ್ ಎಂಬ ಹೆಸರಿನ ವ್ಯಕ್ತಿಯ ಪ್ರೀತಿಗೆ ಬಿದ್ದಿದ್ದಳು. ದಿನವೂ ಫೋನ್ ಮಾಡಿ, ಹರಟೆ ಹೊಡೆಯುತ್ತಾ ಸುಖದ ಕನಸು ಕಂಡಿದ್ದಳು. ಆತನೂ ಮದುವೆಯಾಗುತ್ತೇನೆಂದು ಹೇಳುತ್ತಲೇ ಬಣ್ಣನೆ ಮಾತುಗಳಲ್ಲೇ ಈಕೆಗೆ ಸ್ವರ್ಗ ಸುಖ ತೋರಿಸುತ್ತಿದ್ದ. ಆತನ ಮಾತುಗಳಿಂದಲೇ ಮರುಳಾಗಿದ್ದರಿಂದ ಯುವತಿ ಕ್ಲೀನ್ ಬೌಲ್ಡ್ ಆಗಿದ್ದಳು. ಜೊತೆಗೆ ಆತ ತಾನೊಬ್ಬ ಸಿವಿಲ್ ಇಂಜಿನಿಯರ್ ಎಂದು ಹೇಳಿದ್ದರಿಂದ ಒಳ್ಳೆ ಗಂಡೇ ಸಿಕ್ಕಿದ್ದಾನೆ ಎಂದುಕೊಂಡು ಮನೆಯವರ ನಡುವೆ ಲಲ್ಲೆಗರೆದಿದ್ದಳು. ಈ ಬಗ್ಗೆ ಮನೆಯವರಿಗೂ ಹೇಳಿದ್ದು, ಅವರು ಮಾತ್ರ ಒಲ್ಲೆ ಎಂದಿದ್ದರು. ಫೇಸ್ಬುಕ್ ಪ್ರೇಮ, ಅದೆಲ್ಲ ನಮಗೆ ಆಗಲಿಕ್ಕಿಲ್ಲ. ಅವನ್ಯಾರೋ ಏನೋ, ಬೇರೆ ಹುಡುಗನನ್ನು ನೋಡಿ ಮದುವೆ ಮಾಡ್ತೀವಿ ಎಂದಿದ್ದರು.

Love Horoscope July 21: These zodiac signs will get the support of someone  special romantic relationship will start - Astrology in Hindi - लव राशिफल  21 जुलाई: इन राशि वालों को मिलेगा

ಮನೆಯವರ ಮಾತಿಗೆ ಎದುರಾಡಿದ್ದ ಹುಡುಗಿ, ಮದುವೆಯಾದರೆ ಆತನನ್ನೇ ಎಂದು ಹೇಳಿ ರಂಪ ಮಾಡಿದ್ದಳು. ಕೊನೆಗೆ ಹುಡುಗಿಯ ರಂಪಾಟದಿಂದ ಬೇಸತ್ತ ಮನೆಮಂದಿ ಬಂಟ್ವಾಳದ ಮಹಿಳಾ ವಕೀಲರೊಬ್ಬರ ಬಳಿ ಸಲಹೆ ಕೇಳಿದ್ದರು. ಆಕೆಯ ಸೂಚನೆಯಂತೆ ವಿಟ್ಲ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಆನಂತರ, ಪ್ರೇಮಿಯ ಮೊಬೈಲ್ ನಂಬರ್ ಆಧರಿಸಿ ಪ್ರದೀಪ್ ಅನ್ನುವ ಹುಡುಗ ಯಾರು ಅನ್ನೋದ್ರ ಬಗ್ಗೆ ಪೊಲೀಸರು ಟ್ರೇಸ್ ಮಾಡಿದ್ದರು. ಚೆಕ್ ಮಾಡಿದಾಗ, ಕುಂದಾಪುರದ ಶಂಕರನಾರಾಯಣ ಎಂಬಲ್ಲಿಂದ ಫೋನ್ ಬರುತ್ತಿರುವುದು ತಿಳಿದುಬಂದಿತ್ತು. ಕೊನೆಗೆ ಅಲ್ಲಿನ ಪೊಲೀಸರು ಮತ್ತು ವಿಟ್ಲ ಪೊಲೀಸರ ಸಹಾಯದಿಂದ ಮಹಿಳಾ ವಕೀಲೆ ಶೈಲಜಾ ರಾಜೇಶ್ ನೇರವಾಗಿ ಪ್ರದೀಪ್ ಅನ್ನೋ ಹುಡುಗನ ಮನೆಗೆ ಎಂಟ್ರಿ ಕೊಟ್ಟಿದ್ದರು.

A Tale Of Struggle & Victory: Meet The First Transgender Sub-Inspector Of  India - K Prithika Yashini

ಪೊಲೀಸ್ ಮತ್ತು ವಕೀಲೆಯನ್ನು ನೋಡಿದಾಗಲೇ ಆ ಮನೆಯಲ್ಲಿದ್ದ ವ್ಯಕ್ತಿ ಶಾಕ್ ಆಗಿದ್ದ. ಇಲ್ಲಿಂದ ಹುಡುಗನ ನೋಡಲು ಹೋಗಿದ್ದವರು ಕೂಡ ಶಾಕ್ ಆಗಿದ್ದರು. ಜ್ಯೋತಿ ಎಂಬ ಹೆಸರಿನ ಮಂಗಳಮುಖಿಯಾಗಿದ್ದ ಆ ವ್ಯಕ್ತಿ ಫೇಸ್ಬುಕ್ ನಲ್ಲಿ ತನ್ನ ಹೆಸರನ್ನು ಪ್ರದೀಪ್ ಎಂದು ತೋರಿಸಿ ಯುವತಿಗೆ ಜಾಲ ಬೀಸಿದ್ದಳು. ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಾ ಬಣ್ಣನೆ ಮಾತುಗಳಿಂದಲೇ ಯುವತಿಯ ಮೈಮಾಟವನ್ನು ಹೊಗಳ್ತಿದ್ದಳು. ಇತ್ತ ಫೇಸ್ಬುಕ್ ಪ್ರೇಮಕ್ಕೆ ಬಿದ್ದು ಆತನನ್ನೇ ಮದುವೆಯಾಗುತ್ತೇನೆಂದು ರಂಪ ಹಿಡಿದಿದ್ದ ಹುಡುಗಿ ವಿಷಯ ತಿಳಿಯುತ್ತಲೇ ಶಾಕ್ ಆಗಿದ್ದಾಳೆ. ನಾಲ್ಕು ವರ್ಷಗಳಿಂದ ಫೇಸ್ಬುಕ್ ಪ್ರೀತಿಗೆ ಬಿದ್ದು ಏನೇನೋ ಕನಸು ಕಂಡಿದ್ದು ಇದೇನಾ ಎಂದುಕೊಂಡು ತನ್ನನ್ನೇ ತಾನು ನಂಬದಾಗಿದ್ದಾಳೆ. ವಕೀಲೆ ಮತ್ತು ಪೊಲೀಸರ ಚಾಣಾಕ್ಷ ನಡೆಯಿಂದಾಗಿ ಪ್ರೀತಿಯ ಮಾಯೆಗೆ ಬಿದ್ದು ಹೊರಳಾಡುತ್ತಿದ್ದ ಯುವತಿಯ ಬಾಳಲ್ಲಿ ತಂಗಾಳಿ ಬೀಸುವಂತಾಗಿದೆ.

Mangalore, Girl from Vitla  falls in love on Facebook for about four years and insists to marry him, but parents opposed it and later filed a police complaint after which the girl and the entire family was in shock after the realised that the boy whom she loved was a transgender.