ಕಲ್ಲಿನ ಕೋರೆಯಲ್ಲಿದ್ದ ನೀರಿನಲ್ಲಿ ಈಜಾಟಕ್ಕೆ ಹೋಗಿ ದುರಂತ ; ಜೋಕಟ್ಟೆ ಯುವಕ ಸಾವು ! 

24-07-22 09:56 pm       Mangalore Correspondent   ಕರಾವಳಿ

ಕೆಂಪು ಕಲ್ಲಿನ ಕೋರೆಯಲ್ಲಿ ಶೇಖರಗೊಂಡಿದ್ದ ನೀರಿನಲ್ಲಿ ಗೆಳೆಯರೊಂದಿಗೆ ಆಟವಾಡಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳಾಯಿಬೆಟ್ಟು ಬಳಿಯ ಕಾಯರಪದವು ಎಂಬಲ್ಲಿ ನಡೆದಿದೆ. 

ಮಂಗಳೂರು, ಜುಲೈ 24 : ಕೆಂಪು ಕಲ್ಲಿನ ಕೋರೆಯಲ್ಲಿ ಶೇಖರಗೊಂಡಿದ್ದ ನೀರಿನಲ್ಲಿ ಗೆಳೆಯರೊಂದಿಗೆ ಆಟವಾಡಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳಾಯಿಬೆಟ್ಟು ಬಳಿಯ ಕಾಯರಪದವು ಎಂಬಲ್ಲಿ ನಡೆದಿದೆ. 

ಜೋಕಟ್ಟೆ ನಿವಾಸಿ ಶಿಯಾಬ್ (21) ಮೃತ ಯುವಕ. ಕಾಯರಪದವಿನ ಮೈದಾನದಲ್ಲಿ ಯುವಕರು ಭಾನುವಾರ ಕ್ರಿಕೆಟ್‌ ಆಡಿದ್ದು ಸಂಜೆ ವೇಳೆಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೆಂಪು ಕಲ್ಲಿನ ಕೋರೆಗೆ ಈಜಾಡಲು ಹೋಗಿದ್ದರು. ಕೋರೆಯಲ್ಲಿ ಮಳೆಗಾಲ ಆಗಿದ್ದರಿಂದ ನೀರು ತುಂಬಿಕೊಂಡಿತ್ತು. ಆಳ ತಿಳಿಯದೆ ಈಜಾಟಕ್ಕೆ ಹೋಗಿದ್ದ ಶಿಯಾಬ್ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರು ನೀರಿನಿಂದ ಎತ್ತಿ ಬದುಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 year old youth dies after drowning in water filled quarry at Ulaibettu in Mangalore. The deceased has been identified as Shiab.