ಬ್ರೇಕಿಂಗ್ ನ್ಯೂಸ್
25-07-22 09:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 25: ಹೆದ್ದಾರಿ ಗುಂಡಿಗೆ ಸಿಲುಕಿದ ಸ್ಕೂಟರ್ ಸವಾರಿ ಮಾಡುತ್ತಿದ್ದ ಎಂಎಸ್ಸಿ ವಿದ್ಯಾರ್ಥಿನಿಯೊಬ್ಬಳು ಪಲ್ಟಿಯಾಗಿ ಬಿದ್ದು ಅಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಉಳ್ಳಾದ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಸೇತುವೆಯಲ್ಲಿ ಕಾಂಕ್ರೀಟ್ ಒಡೆದು ಅಲ್ಲಲ್ಲಿ ಗುಂಡಿ ಬಿದ್ದಿದ್ದು ಕಬ್ಬಿಣದ ಗ್ರಿಲ್ಸ್ ಹೊರಕ್ಕೆ ಬಾಯಿಬಿಟ್ಟಿದೆ. ಕಬ್ಬಿಣದ ಗ್ರಿಲ್ಸ್ ಸಿಲುಕಿ ಸ್ಕೂಟರ್ ಪಲ್ಟಿಯಾಗಿ ಬಿದ್ದಿದ್ದು ವಿದ್ಯಾರ್ಥಿನಿ ಕೈಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವ ನಿಶ್ಮಿತಾ ಕೈ ಮತ್ತು ಕಾಲಿಗೆ ಗಾಯಗೊಂಡಿರುವ ವಿದ್ಯಾರ್ಥಿನಿ. ಈಕೆ ಶುಕ್ರವಾರ ಸಂಜೆ 5.30ರ ವೇಳೆಗೆ ಸ್ಕೂಟರಿನಲ್ಲಿ ಕೊಟ್ಟಾರದ ತನ್ನ ಮನೆಗೆ ಆಗಮಿಸುತ್ತಿದ್ದಾಗ ಸೇತುವೆಯ ಗ್ರಿಲ್ಸ್ ಚಕ್ರಕ್ಕೆ ಸಿಲುಕಿ ಅಡ್ಡ ಬಿದ್ದಿದ್ದಾಳೆ. ಕೂಡಲೇ ಇತರೇ ವಾಹನಗಳ ಪ್ರಯಾಣಿಕರು ತೊಕ್ಕೊಟ್ಟಿನ ಸಹಾರಾ ಆಸ್ಪತ್ರೆಗೆ ದಾಖಲಿಸಿದ್ದರು. ಆನಂತರ, ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೈಯ ಎಲುಬು ತುಂಡಾಗಿರುವುದರಿಂದ ಅಲ್ಲಿಗೆ ಸರ್ಜರಿ ನಡೆಸಿದ್ದು ಸ್ಟೀಲ್ ರಾಡ್ ಹಾಕಲಾಗಿದೆ. ಎರಡು ತಿಂಗಳ ಕಾಲ ಕೈಯಲ್ಲಿ ಬರೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.


ನಿಶ್ಮಿತಾ ಎನ್ಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆಗಸ್ಟ್ 12, 13, 14ರಂದು ಎನ್ಇಟಿ ಪರೀಕ್ಷೆ ಇದ್ದು, ಈಗ ಅಪಘಾತದಿಂದಾಗಿ ಎಕ್ಸಾಂ ಬರೆಯೋದು ಹೇಗೆ ಎಂಬ ಚಿಂತೆಯಲ್ಲಿದ್ದಾಳೆ. ಇದಲ್ಲದೆ, ಎರಡನೇ ವರ್ಷದ ಸ್ನಾತಕೋತ್ತರ ಪದವಿಯಾಗಿದ್ದರಿಂದ ಆಂತರಿಕ ಪರೀಕ್ಷೆ, ಅಸೈನ್ಮೆಂಟ್ ಇದ್ದೂ ಅದನ್ನು ಬರೆಯುವುದು ಹೇಗೆಂದು ಚಿಂತೆಗೆ ಬಿದ್ದಿದ್ದಾಳೆ. ಸೆಪ್ಟಂಬರ್ ತಿಂಗಳಲ್ಲಿ ಅಂತಿಮ ಪರೀಕ್ಷೆ ನಡೆಯಲಿದ್ದು, ಕೈ ಸರ್ಜರಿ ಆಗಿರುವುದರಿಂದ ಈ ವರ್ಷದ ಶಿಕ್ಷಣಕ್ಕೇ ಕುತ್ತು ಬೀಳುತ್ತಾ ಅನ್ನುವ ಆತಂಕಕ್ಕೆ ಒಳಗಾಗಿದ್ದಾಳೆ. ಇಷ್ಟಕ್ಕೆಲ್ಲ ಕಾರಣ ಅಲ್ಲಿನ ಹೆದ್ದಾರಿ. ಸೇತುವೆಯಲ್ಲಿ ಕಾಂಕ್ರೀಟ್ ಒಡೆದು ಅದರ ಕಬ್ಬಿಣದ ಗ್ರಿಲ್ಸ್ ಎದ್ದು ಬಂದರೂ, ಹೆದ್ದಾರಿ ಅಧಿಕಾರಿಗಳು ಗಮನಿಸಿಲ್ಲ ಎಂದರೆ ಹೇಗೆ. ಇದು ತುಂಬ ಡೇಂಜರಸ್. ಅಪಘಾತ ಆಗಿದ್ದಾಗ ಹಿಂದಿನಿಂದ ದೊಡ್ಡ ವಾಹನಗಳು ಬರುತ್ತಿದ್ದರೆ ಅಪಾಯ ಆಗುತ್ತಿತ್ತು ಎಂದು ಆತಂಕ ತೋಡಿಕೊಳ್ಳುತ್ತಾರೆ, ವಿದ್ಯಾರ್ಥಿನಿ.

ಈ ಬಗ್ಗೆ ಕಂಕನಾಡಿ ಟ್ರಾಫಿಕ್ ಪೊಲೀಸರು, ದೂರು ಕೊಡುವುದಾದರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಸಿದ್ಧರಿದ್ದೇವೆ. ನೀವು ಕಂಪ್ಲೇಂಟ್ ಕೊಡಿ ಎಂದಿದ್ದಾರಂತೆ. ಆದರೆ, ವಿದ್ಯಾರ್ಥಿನಿ ಆಗಿರುವುದರಿಂದ ದೂರು ಕೊಟ್ಟರೆ, ಅದರ ಹಿಂದೆ ಓಡುವುದು ಯಾರು ಎಂಬ ಚಿಂತೆಯಲ್ಲಿದ್ದಾರೆ.

ಘಟನೆ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಆಗಿರುವ ಲಿಂಗೇಗೌಡ ಅವರ ಗಮನಕ್ಕೆ ತಂದಾಗ, ನೇತ್ರಾವತಿ ಸೇತುವೆಯಲ್ಲಿ ಹಳ್ಳ ಬಿದ್ದಿದೆಯಾ, ಗೊತ್ತಿಲ್ಲ. ತುರ್ತಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಹೆದ್ದಾರಿ ಗುಂಡಿಯನ್ನು ಮುಚ್ಚಲು ಈಗಾಗಲೇ ನಾವು ಕೆಲಸ ಆರಂಭಿಸಿದ್ದೇವೆ. ನಮ್ಮ ವಾಹನ ನಂತೂರಿನಲ್ಲಿ ಕೆಲಸ ಆರಂಭಿಸಿತ್ತು. ಮಳೆ ಆರಂಭ ಆಗಿದ್ದರಿಂದ ಕೆಲಸ ನಿಂತಿದೆ. ಸ್ವಲ್ಪ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ ಎಂದಿದ್ದಾರೆ. ನೇತ್ರಾವತಿ ಸೇತುವೆಯಲ್ಲಿ ಮೂರ್ನಾಲ್ಕು ತಿಂಗಳಿಂದ ಗುಂಡಿ ಬಿದ್ದು ಗ್ರಿಲ್ಸ್ ಎದ್ದು ನಿಂತಿದ್ದರೂ, ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ ಅವರ ಮಾತಿನಲ್ಲೇ ಕಂಡಿತ್ತು.


ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಅವರ ಗಮನಕ್ಕೂ ತರಲಾಯಿತು. ನೇತ್ರಾವತಿ ಸೇತುವೆಯಲ್ಲಿ ಅಂಥ ಗುಂಡಿ ಬಿದ್ದಿರುವುದು, ಅದರಿಂದ ವಿದ್ಯಾರ್ಥಿನಿ ಗಾಯಗೊಂಡಿರುವುದು ತಿಳಿದಿಲ್ಲ. ಫೋಟೋ ಕಳಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ನೋಟೀಸ್ ನೀಡುತ್ತೇನೆ ಎಂದಿದ್ದಾರೆ. ಇವರ ನೋಟೀಸ್ ಹೋಗುತ್ತಾ, ಅದಕ್ಕೆ ಮೊದಲು ಹೆದ್ದಾರಿ ಅಧಿಕಾರಿಗಳು ನಿದ್ದೆಯಿಂದ ಎದ್ದು ಕೆಲಸ ಮಾಡುತ್ತಾರೋ ನೋಡಬೇಕು. ಯಾರಾದ್ರೂ ಆ ಗುಂಡಿಗೆ ಬಿದ್ದು ಬಲಿಯಾಗೋದಕ್ಕೂ ಮೊದಲು ನಮ್ಮ ಜಡ್ಡುಗಟ್ಟಿದ ವ್ಯವಸ್ಥೆ, ಬಲಹೀನ ಜನಪ್ರತಿನಿಧಿಗಳು ಎಚ್ಚೆತ್ತರೆ ಜನರ ಪುಣ್ಯ.
Mangalore Deadly potholes on Netravathi Bridge road, student undergoes bone surgery after accident. Student of MSc in Environmental Science at Mangalore University, suffered a fractured hand after she fell trying to avoid a pothole on the Netravati bridge on national highway 66. Due to the injury, she will likely be not able to write UGC and internal examinations which are scheduled to be held next month.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm