ಬ್ರೇಕಿಂಗ್ ನ್ಯೂಸ್
26-07-22 02:50 pm Mangalore Correspondent ಕರಾವಳಿ
ಮಂಗಳೂರು, ಜುಲೈ 26: ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಮೀನುಗಾರಿಕೆ ಬಗ್ಗೆ ಏನೂ ತಿಳಿಯದ ಸುಳ್ಯದ ಗೌಡ ಸಮುದಾಯದ ವ್ಯಕ್ತಿಗೆ ನೀಡಿರುವುದಕ್ಕೆ ಕರಾವಳಿಯಲ್ಲಿ ಬಿಜೆಪಿ ಒಳಗಡೆಯೇ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮೊಗವೀರ ಸಮುದಾಯದ ಮುಖಂಡರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮೀನುಗಾರಿಕಾ ಇಲಾಖೆಯ ಸಚಿವ ಎಸ್.ಅಂಗಾರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪ್ರಕೋಷ್ಠದಲ್ಲಿ ಗುರುತಿಸಿರುವ ನವೀನ್ ಸುವರ್ಣ ಎಂಬವರು ನಿನ್ನೆ ರಾತ್ರಿಯೇ ಸಚಿವ ಅಂಗಾರ ಅವರಿಗೆ ಫೋನ್ ಮಾಡಿ ತರಾಟೆಗೆತ್ತಿಕೊಂಡಿದ್ದಾರೆ. ಯಾವುದೇ ಸರಕಾರ ಬಂದರೂ, ಮೀನುಗಾರಿಕಾ ನಿಗಮವನ್ನು ಆಯಾ ಸಮುದಾಯವರಿಗೇ ನೀಡುತ್ತಿದ್ದರು. ಈ ಬಾರಿ ನೀವು ಸುಳ್ಯದ ಗೌಡ ಸಮುದಾಯಕ್ಕೆ ನೀಡಿದ್ದೀರಿ. ಮೀನುಗಾರರ ಬಗ್ಗೆ ಏನೂ ತಿಳಿಯದ ವ್ಯಕ್ತಿಗೆ ಯಾಕೆ ನೀಡಿದ್ದೀರಿ. ನಮ್ಮ ಸಮುದಾಯದಲ್ಲಿ ಪಾರ್ಟಿಗೆ ಕೆಲಸ ಮಾಡಿದವರು ಯಾರೂ ಸಿಕ್ಕಿಲ್ಲವೇ ಎಂದು ಅಂಗಾರ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಅಂಗಾರ ಅವರು, ತನಗೇನು ಗೊತ್ತಿಲ್ಲ. ನೀವು ರಾಜ್ಯಾಧ್ಯಕ್ಷರಿಗೆ ಕೇಳಿ ಎಂದು ಹೇಳಿ ನುಣುಚಿಕೊಂಡಿದ್ದಾರೆ. ನಾವು ಕೇಳುತ್ತೇವೆ, ಅವರಲ್ಲೂ ಕೇಳುತ್ತೇವೆ. ನೀವು ಮೀನುಗಾರಿಕಾ ಸಚಿವರಿದ್ದೀರಲ್ಲ. ನಿಮಗೆ ತಿಳಿದಿಲ್ಲವೇ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ನನಗೇನು ತಿಳಿದಿಲ್ಲ ಎಂದು ಅಂಗಾರ ಉತ್ತರಿಸಿದ್ದಾರೆ. ಸುಳ್ಯದ ತೀರ್ಥರಾಮ ಎಂಬವರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕ ಆಗಿದೆ. ಮೀನುಗಾರ ಸಮುದಾಯದ ಮೊಗವೀರ ಆಗಬಹುದು. ಇತರೇ ಖಾರ್ವಿ, ಬೋವಿ ಯಾರಿಗಾದ್ರೂ ಕೊಡಬಹುದಿತ್ತು. ಮೀನುಗಾರರ ಪೈಕಿ 39 ಜಾತಿಗಳವರಿದ್ದಾರೆ. ಮೂರು ಜಿಲ್ಲೆಗಳಲ್ಲಿ ಮೀನುಗಾರ ವೃತ್ತಿಯನ್ನು ಮಾಡಿಕೊಂಡಿರುವ ಬಹಳಷ್ಟು ಮಂದಿ ಬಿಜೆಪಿಯಲ್ಲಿದ್ದಾರೆ. ಯಾಕಾಗಿ ಈ ತಾರತಮ್ಯ ಮಾಡಿದ್ದೀರಿ. ಈ ಬಗ್ಗೆ ನಾವು ಪ್ರಶ್ನೆ ಮಾಡುತ್ತೇವೆ. ನೀವು ಕೂಡಲೇ ಇದನ್ನು ಸರಿ ಮಾಡಬೇಕು ಎಂದು ನವೀನ್ ಸುವರ್ಣ, ಅಂಗಾರರಿಗೆ ಫೋನ್ ಮಾಡಿ ಒತ್ತಾಯಿಸಿರುವ ಆಡಿಯೋ ವೈರಲ್ ಆಗಿದೆ.
ಇದೇ ವೇಳೆ, ಕರಾವಳಿಯ ಮೀನುಗಾರ ಸಮುದಾಯದ ಮುಖಂಡರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೂ ಫೋನ್ ಮಾಡಿ ಆಕ್ಷೇಪ ಹೇಳಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದ ಗಂಗಾ ಮತಸ್ಥರು ಬೆಂಗಳೂರಿನಲ್ಲಿ ಪ್ರೆಸ್ ಕರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ನಿಗಮದ ಅಧ್ಯಕ್ಷರ ಬದಲಾವಣೆ ಮಾಡದೇ ಇದ್ದರೆ, ನಾವು ಕೂಡ ಪ್ರತಿಕೂಲ ನಡೆಯನ್ನು ತೆಗೆದುಕೊಳ್ಳುತ್ತೇವೆ. ನಾಳೆಯೇ ಮಾಧ್ಯಮದ ಮುಂದೆ ಬಂದು ಆಕ್ಷೇಪ ಹೇಳಿಕೊಳ್ಳುತ್ತೇವೆ ಎಂದು ಮಂಗಳೂರಿನ ಮೊಗವೀರ ಮುಖಂಡರು ಹೇಳಿದ್ದಾರೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರ ವೃತ್ತಿಯನ್ನು ಮಾಡಿಕೊಂಡಿರುವ ಹಲವು ಸಮುದಾಯಗಳಿವೆ. ಈ ಪೈಕಿ ಹೆಚ್ಚಿನ ಮೀನುಗಾರ ಮುಖಂಡರು ಬಿಜೆಪಿಯಲ್ಲಿ ಗುರುತಿಸಿದ್ದಾರೆ. ಆದರೆ, ನಮಗೆ ಶಾಸಕ ಸ್ಥಾನ ಕೊಡುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಈ ಬಾರಿ ಬಿಜೆಪಿಯಲ್ಲಿ ಬಂಟರಿಗೇ ಹೆಚ್ಚಿನ ಸ್ಥಾನ ಹೊಂದಿದ್ದಾರೆ. ಯಾಕೆ ನಮ್ಮ ಬಗ್ಗೆ ತಾರತಮ್ಯ. ಮೀನುಗಾರಿಕಾ ನಿಗಮ ಒಂದು ಇತ್ತು. ಅದಕ್ಕೂ ಈ ಬಾರಿ ಕಲ್ಲು ಹಾಕಿದ್ದಾರೆ. ಮೀನುಗಾರಿಕೆ ಮಾಹಿತಿಯೇ ಇಲ್ಲದ ಯಾರೋ ಒಬ್ಬರನ್ನು ತಂದು ಕೂರಿಸಿದ್ದಾರೆ ಎಂದು ಮೀನುಗಾರರು ಆಕ್ಷೇಪ ಎತ್ತಿದ್ದಾರೆ.
Mogaveera communtiy slams Minister Angara for giving fisheries board post to Gowda society, phone call goes viral.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm