ಬ್ರೇಕಿಂಗ್ ನ್ಯೂಸ್
26-07-22 07:07 pm udupi Correspondent ಕರಾವಳಿ
ಉಡುಪಿ, ಜುಲೈ 26: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಸಾಲ ಕೊಟ್ಟವರ ಕಿರುಕುಳ ಕೊಡುತ್ತಿದ್ದಾರೆಂದು ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತಕ್ಷಣವೇ ಅಲ್ಲಿ ಹೆಸರಿದ್ದವರನ್ನು ಬಂಧಿಸಲಾಗಿತ್ತು. ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ಕೇಸು ಹಾಕಲಾಗಿತ್ತು. ಈಶ್ವರಪ್ಪ ವಿರುದ್ಧ ದಾಖಲಾಗಿರುವುದು ಇದೇ ರೀತಿಯ ಪ್ರಕರಣ. ಗುತ್ತಿಗೆದಾರನೊಬ್ಬ ನಲ್ವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಹೇಳಿ ಸಾವು ಕಂಡಿದ್ದಾನೆ. ಯಾಕೆ ಈ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಪೊಲೀಸರು ಬಂಧಿಸಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ, ಆಪ್ ಪಕ್ಷದ ಮುಖಂಡ ಭಾಸ್ಕರ ರಾವ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾಸ್ಕರ ರಾವ್, ಈಶ್ವರಪ್ಪ ವಿರುದ್ಧ ತನಿಖೆಯ ಮೇಲೆ ಪ್ರಭಾವ ಬೀರುತ್ತಾರೆಂದು ಪತ್ನಿಯೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು. ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಗೃಹ ಸಚಿವರನ್ನು ಭೇಟಿಯಾದಾಗ, ಮಹಿಳೆಯನ್ನು ಬೈದು ಕಳಿಸಲಾಗಿತ್ತು. ಇವರು ರಾಮನ ಭಕ್ತರು ಅಂತಾರಲ್ಲಾ.. ಇದೇನಾ ಇವರದ್ದು ರಾಮನ ಭಕ್ತಿ. ರಾಮ ಇವರ ಕೆಲಸವನ್ನು ಮೆಚ್ಚುತ್ತಾನೆಯೇ ಎಂದು ಪ್ರಶ್ನೆ ಮಾಡಿದರು. ಹಿಂದಿನ ಕಾಂಗ್ರೆಸ್ ಸರಕಾರವನ್ನು ಹತ್ತು ಪರ್ಸೆಂಟ್ ಸರಕಾರ ಎಂದು ಬಿಜೆಪಿಯವರು ಹೇಳಿದ್ದರು. ಈಗಿನ ಬಿಜೆಪಿ ಸರಕಾರ ನಲ್ವತ್ತು ಪರ್ಸೆಂಟ್ ಸರಕಾರ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ಸಹಿಸಲ್ಲ ಎಂದು ಹೇಳುವ ಬಿಜೆಪಿಯವರು ಮಾಡುತ್ತಿರೋದು ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ಮತ್ತೆ ಸಚಿವ ಸ್ಥಾನಕ್ಕೆ ಸೇರ್ಪಡೆ ಮಾಡಿದರೆ, ಆಪ್ ಪಕ್ಷದ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಆಪ್ ಪಕ್ಷವು ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ. ರಾಜ್ಯದ ಜನರು ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದ ಭಾಸ್ಕರ ರಾವ್, ಬಿಜೆಪಿ ಪ್ರಬಲ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸಿನವರು ಅಲ್ಪಸಂಖ್ಯಾತ ಪರ ಮತ್ತು ಜಾತ್ಯತೀತವಾದ ತೋರಿಸುತ್ತಾರೆ. ಆದರೆ, ನಾವು ನೈಜ ಜಾತ್ಯತೀತವಾದ ನಂಬುತ್ತೇವೆ. ಇವರ ನಕಲಿ, ರಾಜಕೀಯ ಜಾತ್ಯತೀತ ವಾದ ಅಲ್ಲ. ಶಾಂತಿ, ಸಹಬಾಳ್ವೆ ಅಷ್ಟೇ ನಮ್ಮ ಧ್ಯೇಯ. ಶಿಕ್ಷಣ, ಆರೋಗ್ಯ, ಸಾರಿಗೆ, ಅಭಿವೃದ್ಧಿ ಈ ನಾಲ್ಕು ಅಂಶಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕರಾವಳಿಯನ್ನು ಮತೀಯವಾದ ಮತ್ತು ಕೋಮು ಧ್ರುವೀಕರಣದ ನೆಲೆಯಲ್ಲಿ ವಿಭಜಿಸಲಾಗಿದೆ. ಈ ರೀತಿಯ ದ್ವೇಷ ಬಿತ್ತುವುದು ದೇಶಕ್ಕೆ ಅಪಾಯಕಾರಿ. ಇದೊಂದು ರೀತಿಯ ನಿಧಾನ ವಿಷವಿದ್ದಂತೆ. ತತ್ಕಾಲಕ್ಕೆ ಮಾತ್ರ ಸಂತೋಷ ಸಿಗಬಹುದು. ಸಮಾಜದಲ್ಲಿ ವಿಭಜನೆ ಸೃಷ್ಟಿಸುತ್ತದೆ ಎಂದು ಹೇಳಿದರು. ಇವತ್ತು ದೇಶದ 99 ಶೇಕಡಾ ಜನರು ಸಹಬಾಳ್ವೆ, ಶಾಂತಿಯನ್ನು ಮಾತ್ರ ಬಯಸುತ್ತಾರೆ. ಸಮಾಜದಲ್ಲಿ ಶಾಂತಿಯನ್ನು ಸೃಷ್ಟಿಸುವುದು ಆಪ್ ಗುರಿ ಎಂದು ಭಾಸ್ಕರ ರಾವ್ ಹೇಳಿದರು.
ಪಿಎಸ್ಐ ಪರೀಕ್ಷೆ ಅಕ್ರಮದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಬೆಂಗಳೂರು ಕಮಿಷನರ್ ಆಗಿದ್ದಾಗಲೇ ನನಗೆ ವಾಸನೆ ಬಂದಿತ್ತು. ಅಮೃತ್ ಪೌಲ್ ಆಗಾಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತಿದ್ದರು. ಏನೋ ಅನುಮಾನ ಬಂದಿತ್ತು. ಈಗ ಅನುಮಾನ ನಿಜವಾಗಿದೆ. ಹಗರಣದ ಸುಳಿವು ಆಗಲೇ ಇತ್ತು ಎಂದು ಹೇಳಿದರು. ಪ್ರಕರಣದ ತನಿಖೆಯಾಗುತ್ತಿದೆ ಎಂದು ಹೇಳಿ, ಪರೀಕ್ಷೆ ಬರೆದ ಸಾವಿರಾರು ಯುವಕರಿಗೆ ಮೋಸ ಆಗಬಾರದು. ಕೂಡಲೇ ಹಿಂದಿನ ಪರೀಕ್ಷೆ ರದ್ದು ಮಾಡಿ, ಹೊಸತಾಗಿ ಪರೀಕ್ಷೆ ಮಾಡಬೇಕು ಎಂದು ಹೇಳಿದರು.
ಆಪ್ ಜಿಲ್ಲಾಧ್ಯಕ್ಷ ದಿವಾಕರ ಸನಿಲ್, ರಾಜ್ಯ ಜೊತೆ ಕಾರ್ಯದರ್ಶಿ ವಿವೇಕಾನಂದ, ವಲಯ ಪ್ರಮುಖರಾದ ಜೆಪಿ ರಾವ್, ಜಿಲ್ಲಾ ಕಾರ್ಯದರ್ಶಿ ಆಸ್ಲಿ ಡಿಮೆಲ್ಲೋ ಉಪಸ್ಥಿತರಿದ್ದರು.
Former IPS officer-turned-politician of Aam Aadmi Party (AAP), Bhaskar Rao expressed anguish against the state BJP government over clean chit to former minister K S Eshwarappa in the Santhosh Patil suicide case.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm