ಪಬ್ ಪಾರ್ಟಿ ; 18 ರಲ್ಲಿ ಎಂಟು ವಿದ್ಯಾರ್ಥಿಗಳು 21 ವರ್ಷದ ಒಳಗಿನವರು, ಪಬ್ ವಿರುದ್ಧ ಕ್ರಮಕ್ಕೆ ಅಬಕಾರಿ ಇಲಾಖೆಗೆ ವರದಿ 

26-07-22 11:00 pm       Mangalore Correspondent   ಕರಾವಳಿ

ಪಬ್ ಘಟನೆ ಸಂಬಂಧಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿದ್ದು ಎಂಟು ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು 21 ವರ್ಷದ ಕೆಳಗಿನವರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ‌

ಮಂಗಳೂರು, ಜುಲೈ 26 : ಪಬ್ ಘಟನೆ ಸಂಬಂಧಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿದ್ದು ಎಂಟು ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು 21 ವರ್ಷದ ಕೆಳಗಿನವರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ‌

ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ 21 ವರ್ಷದ ಕೆಳಗಿನವರಿಗೆ ಮದ್ಯ ಸರ್ವ್ ಮಾಡುವಂತಿಲ್ಲ ಎಂಬ ನಿಯಮ ಇದೆ. ಅದರಂತೆ, ಪಬ್ ಪಾರ್ಟಿ ಹೋಗಿದ್ದ 18 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿ 21 ವರ್ಷ ಒಳಗಿನವರು ಅನ್ನೋದನ್ನು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಅಬಕಾರಿ ಇಲಾಖೆಗೆ ವರದಿ ನೀಡಿದ್ದಾರೆ. 

ಅಬಕಾರಿ ಇಲಾಖೆಯಿಂದ ಪಬ್ ಒಳಗೆ ಹರೆಯದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡ ಬಗ್ಗೆ ಪಬ್ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಇದೇ ವಿಚಾರದಲ್ಲಿ ಬಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದು ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿದ್ದನ್ನು ಆಕ್ಷೇಪಿಸಿದ್ದರು. ಪೊಲೀಸರು ಈ ಬಗ್ಗೆ ಯಾವುದೇ ಪ್ರಕರಣ ದಾಖಲು ಮಾಡಿಲ್ಲ.

Mangalore pub case, 8 of the boys and girls are verified to be minors according to the exice act says Police Commissioner Shashi Kumar. He said the report will be submitted to the Exice department.