ಬ್ರೇಕಿಂಗ್ ನ್ಯೂಸ್
29-07-22 09:01 pm Mangalore Correspondent ಕರಾವಳಿ
Photo credits : NEWS FIRST
ಮಂಗಳೂರು, ಜುಲೈ 29: ಇವರ ರಾಜಕೀಯಕ್ಕಾಗಿ ಹಿಂದುತ್ವ, ಯಾರೋ ಅಮಾಯಕನನ್ನು ಕೊಲ್ಲುತ್ತಾರೆ. ನಾಲ್ಕು ವರ್ಷ ಇವರಿಗೆ ಯಾವುದೂ ಇರಲಿಲ್ಲ. ಮತ್ತೆ ಚುನಾವಣೆ ಬಂದಾಗ, ಈಗ ಯಾರನ್ನೋ ಕೊಂದಿದ್ದಾರೆ. ಇಂಥದ್ದಕ್ಕೆಲ್ಲ ಯಾರು ಕೊಂದಿದ್ದಾರೋ ಅವರನ್ನು ಹಾಗೆಯೇ ಕೊಲ್ಲಬೇಕು. ಆಗಮಾತ್ರ ಇಂಥ ಕೊಲೆಗಳಿಗೆ ಅಂತ್ಯ ಸಿಗಬಹುದು ಎಂದು ಸುರತ್ಕಲ್ಲಿನಲ್ಲಿ ಕೊಲೆಯಾದ ಫಾಜಿಲ್ ತಂದೆ ಫಾರೂಕ್ ಹೇಳಿದ್ದಾರೆ.
ನನಗೆ 8.30ರ ಸುಮಾರಿಗೆ ವಿಷಯ ಗೊತ್ತಾಯಿತು. ಆಮೇಲೆ ಎಜೆಗೆ ಹೋಗುವಷ್ಟರಲ್ಲಿ ಖಾಲಿ ಆಗಿದೆ. ಏನು ಮಾಡೋದು.. ಆತ ಯಾವುದಕ್ಕೂ ಹೋದವನಲ್ಲ. ಇಲ್ಲಿ ಹಿಂದು, ಮುಸ್ಲಿಂ ಎಲ್ಲರಿಗೂ ಕೇಳಿ ನೋಡಿ. ಅವನು ಯಾವುದಕ್ಕೂ ಹೋಗಿಲ್ಲ. ಯಾವ ಸಂಘಟನೆಯಲ್ಲೂ ಇರಲಿಲ್ಲ. ಹುಟ್ಟುಹಬ್ಬ ಅಂತ ಏನೇನೋ ಹಾಕುತ್ತಿದ್ದಾರೆ. ಅವನು ಹುಟ್ಟಿದ ದಿನ ನವೆಂಬರ್ ಮೂರು. ಇವರಿಗೆ ಯಾರು ಹೇಳಿದ್ದೋ, ಹುಟ್ಟುಹಬ್ಬ ಅಂತ. ಏನೇನೋ ಸುದ್ದಿ ಮಾಡ್ತಾರೆ.
ನಾವು ಯಾವುದೇ ಪರಿಹಾರ ಬಯಸೋದಿಲ್ಲ. ನಮಗೆ ಇವರ ಪರಿಹಾರ ಬೇಡ. ನಮಗೆ ಯಾರು ಕೊಂದಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು, ಅಷ್ಟೇ. ಯಾರನ್ನೂ ಕೊಲ್ಲುವುದು ಬೇಡ. ಇನ್ಯಾರೋ ಹಿಂದು-ಮುಸ್ಲಿಂ ಅಮಾಯಕರನ್ನು ಕೊಲ್ಲುವುದು ಬೇಡ. ಅವರಿಗೆ ಶಿಕ್ಷೆ ಕೊಡುವುದೇ ಪರಿಹಾರ. ನಮ್ಮ ಕಾನೂನೇ ಸರಿ ಇಲ್ಲ ಅನ್ನಬೇಕು. ಯಾರು ಕೊಂದಿದ್ದಾರೋ ಅವರಿಗೆ ಅಂಥದ್ದೇ ಶಿಕ್ಷೆ ಆಗಬೇಕು.
ಸಿಸಿಟಿವಿ ಇದೆ, ಕಾರಿನ ನಂಬರ್ ಪ್ಲೇಟ್ ಇದೆ. ಕಾರನ್ನು ಹಿಡಿದರೆ ಆರೋಪಿಗಳು ಸಿಗುತ್ತಾರೆ. ಈಗ ಯಾಕೆ ಪೊಲೀಸರು ಹಿಡಿಯಲ್ಲ. ಇದರಲ್ಲಿ ಆರೋಪಿಗಳನ್ನು ಹಿಡಿಯೋದು ಕಷ್ಟನೇ ಇಲ್ಲ. ಸಿಸಿಟಿವಿಯಲ್ಲಿ ಕಡಿಯುವುದು ಕಾಣ್ತಾ ಇದೆ. ಮುಖ ಗುರುತು ಸಿಗುತ್ತದೆ. ಕಾರಿನ ನಂಬರ್ ಪ್ಲೇಟ್ ಪತ್ತೆಯಾಗಿದೆ. ಆದರೂ ಪತ್ತೆಯಾಗಿಲ್ಲ ಎನ್ನುತ್ತಿದ್ದಾರೆ. ಇನ್ನು ಯಾರನ್ನೋ ಬಂಧಿಸುತ್ತಾರೋ ಏನೋ.. ಆದರೆ ನಿನ್ನೆ ಘಟನೆ ಆದ ಕೂಡಲೇ ಟಿವಿಯಲ್ಲಿ ಲವ್ ವಿಷಯ ಕಾರಣ ಅಂತ ಏನೇನೋ ಹಾಕಿದ್ರು. ಅಂಥ ಯಾವುದೇ ಸಂಪರ್ಕ ನನ್ನ ಮಗನಿಗೆ ಇಲ್ಲ, ಹುಡುಗಿಯರ ಸಂಪರ್ಕ ಅದು ಇದು ಅಂತ ಕೆಲವರು ಬರೆದ್ರು. ಟಿವಿಯಲ್ಲಿ ಹಾಕಿದ್ರು. ಅದನ್ನು ಕೇಳಿ ತುಂಬ ನೋವಾಯ್ತು. ನನ್ನ ಮಗ ಅಂಥವನಲ್ಲ. ಎಂಆರ್ ಪಿಎಲ್ ಒಳಗಡೆ ಡ್ರೈವರ್ ಕೆಲಸಕ್ಕೆ ಹೋಗುತ್ತಿದ್ದ. ಬೇರಾವುದೂ ಇರಲಿಲ್ಲ. ಮನೆಯಲ್ಲೇ ಇರುತ್ತಿದ್ದ. ಇವರು ಯಾಕಾಗಿ ಕೊಂದಿದ್ದಾರೆ ಅನ್ನೋದನ್ನು ಪೊಲೀಸರು ಪತ್ತೆ ಮಾಡಬೇಕು ಎಂದು ಅಳುತ್ತಲೇ ಆಗ್ರಹ ಮಾಡಿದರು ಫಾಜಿಲ್ ತಂದೆ.
Surathkal Fazil murder, father bursts out in tears, says my son was innocent he just went to his friends shop during which he was brutally attacked and killed by miscreants. He said we don't need any compensation from the government we only need justice. Fazil murder accused should be just killed. Fazil was brutally hacked to death at Surathkal on 28th night in Mangalore.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm