ಬ್ರೇಕಿಂಗ್ ನ್ಯೂಸ್
29-07-22 10:29 pm Mangalore Correspondent ಕರಾವಳಿ
ಉಳ್ಳಾಲ, ಜು.29 : ಸರಣಿ ಕೊಲೆಗಳಿಂದ ಕಂಗೆಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದಳ್ಳುರಿಯ ಕರಿಛಾಯೆ ಆವರಿಸಿದ್ದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಜಿಲ್ಲೆಯಲ್ಲಿ ಕೋಮುದಳ್ಳುರಿಯ ಕರಿಛಾಯೆ ಇದ್ದರೂ ಉಳ್ಳಾಲದ ಅತೀ ಸೂಕ್ಷ್ಮ ಪ್ರದೇಶದಲ್ಲಿ ಮಾತ್ರ ಇಂದಿಗೂ ಯಾವುದೇ ಕಣ್ಗಾವಲು ಇಲ್ಲದೆ ಇರೋದು ಕಳೆದುಹೋದ ರಕ್ತಸಿಕ್ತ ದಿನಗಳು ಮತ್ತೆ ಮರುಕಳಿಸುತ್ತಾ ಅನ್ನುವ ಆತಂಕ ಎದುರಾಗಿದೆ.
ಕುತ್ತಾರು ಜಂಕ್ಷನ್ ನಿಂದ ಅಂಬ್ಲಮೊಗರು ಸಂಪರ್ಕ ರಸ್ತೆಯ ಮಧ್ಯ ಭಾಗದಲ್ಲಿ ಸಿಗುವ ಭಂಡಾರ ಬೈಲು, ಕೃಷ್ಣಕೋಡಿ ರಸ್ತೆಯು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅತೀ ಸೂಕ್ಷ್ಮ ಪ್ರದೇಶ. ಯಾಕೆಂದರೆ ಜಿಲ್ಲೆಯಲ್ಲಿ ಎಲ್ಲೇ ಕೋಮು ಜ್ವಾಲೆ ಹತ್ತಿದರೂ ಈ ಅತೀ ಸೂಕ್ಷ್ಮವೆನಿಸಿದ ನಿರ್ಜನ ಪ್ರದೇಶದಲ್ಲಿ ಅನೇಕ ಬಾರಿ ಇರಿತಗಳು ಸಂಭವಿಸಿವೆ. ಅದರಲ್ಲೂ ಉಳ್ಳಾಲದಲ್ಲಿ ಅಮಾಯಕರಿಗೆ ಕಪ್ಪು ಪಲ್ಸರ್ ಗುಮ್ಮ ಜಾಸ್ತಿ ಕಾಟ ಕೊಟ್ಟದ್ದು ಈ ಏರಿಯಾದಲ್ಲೇ. ಕೆಲವು ವರ್ಷಗಳ ಹಿಂದೆ ಅಂಬ್ಲಮೊಗರು ಕ್ವಾಟ್ರಗುತ್ತು ನಿವಾಸಿ ರಾಮ್ ಮೋಹನ್ ಶೆಟ್ಟಿ ಎಂಬವರಿಗೆ ಭಂಡಾರಬೈಲು, ಕೃಷ್ಣಕೋಡಿ ರಸ್ತೆಯಲ್ಲಿ ಮೊದಲ ಬಾರಿಗೆ ಕಪ್ಪು ಪಲ್ಸರ್ ಬೈಕಲ್ಲಿ ಬಂದ ಆಗಂತುಕರು ಇರಿದು ಪರಾರಿಯಾಗಿದ್ದರು. ಆನಂತರ ಅದೇ ಪ್ರದೇಶದಲ್ಲಿ ಕ್ವಾಟ್ರಗುತ್ತು ನಿವಾಸಿ ಮತ್ತೋರ್ವ ಯುವಕನಿಗೆ ಇರಿಯಲಾಗಿತ್ತು. ಒಂದು ವರುಷದ ಹಿಂದಷ್ಟೆ ಮತ್ತದೇ ಪ್ರದೇಶದಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಬೈಕಲ್ಲಿ ಬಂದ ಆಗಂತುಕರು ಇರಿದು ಪರಾರಿಯಾಗಿದ್ದರು.
ಭಂಡಾರಬೈಲು, ಕೃಷ್ಣಕೋಡಿ ರಸ್ತೆಯು ಹಗಲಲ್ಲೇ ನಿರ್ಜನ ಪ್ರದೇಶವಾಗಿದ್ದು ಇನ್ನು ರಾತ್ರಿ ಹೊತ್ತು ಅಲ್ಲಿ ನರಪಿಳ್ಳೆಯೂ ಕಾಣ ಸಿಗೋದು ಕಷ್ಟ. ಈ ಪ್ರದೇಶವೇ ಕಳೆದ ಹಲವು ವರ್ಷಗಳಿಂದ ಕೋಮು ವಿಧ್ವಂಸಕ ಕೃತ್ಯಗಳಿಗೆ ಬುನಾದಿ ಹಾಕುತ್ತಿದೆ. ಪ್ರದೇಶದಲ್ಲಿ ಮೊದಲ ಇರಿತ ನಡೆದಾಗ ಇಲ್ಲಿನ ಋಷಿವನ ಕಾನ್ವೆಂಟ್ ಬಳಿ ಇರುವ ಪಾಳು ಬಿದ್ದ ಬಸ್ಸು ತಂಗುದಾಣದ ಬಳಿ ಪೊಲೀಸರು ಸಿಸಿ ಕ್ಯಾಮೆರಾವನ್ನ ಅಳವಡಿಸಿದ್ದರು. ಆದರೆ ಇದೀಗ ಆ ಸಿಸಿ ಕ್ಯಾಮೆರಾವೂ ಮಾಯವಾಗಿದೆ. ಸಮೀಪದ ಭಂಡಾರಬೈಲಿನ ರಸ್ತೆ ಬದಿಯ ಮುನ್ನೂರು ಗ್ರಾಮ ಪಂಚಾಯತಿನ ಕಸ ವಿಲೇವಾರಿ ಘಟಕದ ಮುಂಭಾಗದಲ್ಲಿ ರಸ್ತೆ ಇಕ್ಕೆಲಗಳನ್ನು ಗುರಿಯಿಟ್ಟು ಅಳವಡಿಸಲಾದ ಸಿಸಿ ಕ್ಯಾಮೆರಾಗಳು ಕಾರ್ಯಾಚರಿಸದೆ ಪ್ರದರ್ಶನಕ್ಕಿಟ್ಟ ಬೊಂಬೆಗಳಂತಾಗಿವೆ. ಸದ್ಯ ಈ ಅತೀ ಸೂಕ್ಷ್ಮ ಪ್ರದೇಶದಲ್ಲಿ ಏನಾದರೂ ಹಳೆಯ ದಿನಗಳು ಮತ್ತೆ ಮರುಕಳಿಸಿದರೆ ಸ್ಥಳೀಯ ಋಷಿವನ ಕಾನ್ವೆಂಟಿನ ಸಿಸಿ ಕ್ಯಾಮರಾವನ್ನಷ್ಟೆ ಪೊಲೀಸರು ತಡಕಾಡುವ ಅನಿವಾರ್ಯತೆ ಎದುರಾಗಲಿದೆ. ಪ್ರಸಕ್ತ ಜಿಲ್ಲೆಯಲ್ಲಿ ಕೋಮು ವೈಷಮ್ಯದ ವಾತಾವರಣ ಇದ್ದರೂ ಈ ಪ್ರದೇಶದಲ್ಲಿ ಯಾವುದೇ ಪೊಲೀಸ್ ಪಹರೆ ಹಾಕಿಲ್ಲ. ಈ ಹಿಂದೆ ಇಲ್ಲಿ ಪದೇ ಪದೇ ಅಹಿತಕರ ಘಟನೆ ನಡೆದಾಗ ಪೊಲೀಸ್ ಪಹರೆ ಹಾಕುತ್ತಿದ್ದರೂ ಈ ಸಲ ಇಲ್ಲಿನ ಅತೀ ಸೂಕ್ಷ್ಮ ಪ್ರದೇಶವನ್ನ ಉಳ್ಳಾಲ ಪೊಲೀಸರು ಕಡೆಗಣಿಸಿದ್ದಾರೆ.
Most sensitive area Ullal is left isolated without police surveillance even after back t back killings reported in Mangalore starting from Masood, Praveen and Fazil. Bandarabailu has reported highest stabbing cases yet the police have not deployed any tight security here.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm