ಬ್ರೇಕಿಂಗ್ ನ್ಯೂಸ್
30-07-22 11:53 am Mangalore Correspondent ಕರಾವಳಿ
ಉಳ್ಳಾಲ, ಜು.30 : ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪು ಪಟ್ಲ ಎಂಬಲ್ಲಿ ಗುಡ್ಡ ಪ್ರದೇಶವನ್ನ ಸಮತಟ್ಟು ಮಾಡಲಾಗಿದ್ದು ನಸುಕಿನಲ್ಲಿ ಸುರಿದ ಭಾರೀ ಮಳೆಗೆ ನೀರೆಲ್ಲ ಸ್ಥಳೀಯ 18 ಮನೆಗಳಿಗೆ ನುಗ್ಗಿ ಭಾರೀ ನಷ್ಟ ಉಂಟಾಗಿದೆ.
ಕಲ್ಲಾಪು ತಗ್ಗು ಪ್ರದೇಶವಾಗಿದ್ದು ನೇತ್ರಾವತಿ ನದಿ ಪಾತ್ರದಲ್ಲಿದೆ. ಇಲ್ಲಿ ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಸ್ಥಳೀಯ ನಿವಾಸಿಗಳು ಪ್ರತೀ ವರ್ಷವೂ ಕೃತಕ ನೆರೆ ಅವಾಂತರಗಳನ್ನು ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಗಲ್ಲಿ, ಗಲ್ಲಿಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದ್ದರೂ ನೀರು ಹರಿಯಲು ಸಮರ್ಪಕ ಚರಂಡಿಗಳನ್ನೇ ಒದಗಿಸಿಲ್ಲ. ಕಳೆದ ತಿಂಗಳಲ್ಲಿ ಸುರಿದ ಮೊದಲ ವರ್ಷಧಾರೆಗೆ ಕಲ್ಲಾಪು ಪ್ರದೇಶದ 50ಕ್ಕೂ ಹೆಚ್ಚು ಮನೆಗಳು ಕೃತಕ ನೆರೆಯಿಂದ ಜಲಾವೃತಗೊಂಡಿದ್ದವು.




ಇದೀಗ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕಲ್ಲಾಪಿನ ಪಟ್ಲ, ಮುಡುಪ್ಪೋಡಿ ಪ್ರದೇಶದ ಸುಮಾರು 18 ಮನೆಗಳಿಗೆ ದಿಢೀರನೆ ನೀರು ನುಗ್ಗಿದ್ದು ಬೆಲೆ ಬಾಳುವ ಇನ್ವಾರ್ಟರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಪೀಠೋಪಕರಣಗಳು ಕೆಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಪಟ್ಲ, ಘಂಡಿ ಪ್ರದೇಶದ ಸ್ಥಳೀಯ ಕೌನ್ಸಿಲರ್ ಓರ್ವರಿಗೆ ಸೇರಿದ ಗುಡ್ಡ ಪ್ರದೇಶವನ್ನ ಸಮತಟ್ಟುಗೊಳಿಸಿದ್ದೇ ಈ ಅವಾಂತರಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಗುಡ್ಡ ಪ್ರದೇಶ ಸಮತಟ್ಟುಗೊಳಿಸಿದ್ದರಿಂದ ಅಲ್ಲಿನ ನೀರು ಹರಿದು ಹೋಗಲು ಚರಂಡಿ ಇಲ್ಲದೆ ರಸ್ತೆ ಮತ್ತು ಮನೆಗಳ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.



ಮಳೆ ನೀರು ಅವಾಂತರ ಸೃಷ್ಟಿಸಿದ ಪ್ರದೇಶಗಳು ಮೂರು ನಗರ ಸದಸ್ಯರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಸ್ಥಳೀಯ ಕೌನ್ಸಿಲರ್ ಮುಶ್ತಾಕ್ ಪಟ್ಲ ಅವರು ಮಾತ್ರ ಸ್ಥಳಕ್ಕೆ ಗ್ರಾಮಕರಣಿಕೆ ಶ್ವೇತ ಅವರೊಂದಿಗೆ ಭೇಟಿ ನೀಡಿ ನೀರು ಹರಿದು ಹೋಗಲು ಜೆಸಿಬಿ ಯಂತ್ರದಿಂದ ಕಾಮಗಾರಿ ಆರಂಭಿಸಿದ್ದಾರೆ. ಸ್ಥಳಕ್ಕೆ ಭೇಟಿ ಕೊಡದೆ ಫೋನ್ ಕರೆಯನ್ನೂ ಸ್ವೀಕರಿಸದ ಕೌನ್ಸಿಲರ್ ಬಾಝಿಲ್ ಡಿಸೋಜ ಅವರಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.
Thokottu Kallapu houses submerged with water, people face havoc after rains in Mangalore.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
11-07-26 08:40 pm
HK News Staffer
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm