ಬ್ರೇಕಿಂಗ್ ನ್ಯೂಸ್
31-07-22 10:47 pm Mangalore Correspondent ಕರಾವಳಿ
ಮಂಗಳೂರು, ಜುಲೈ 31: ಕೋಮು ದ್ವೇಷ ಹರಡುವ ರೀತಿ, ಕೊಲೆಗೆ ಕೊಲೆ ಪ್ರತೀಕಾರ ಎನ್ನುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಪೋಸ್ಟ್ ಹಾಕಿದರೆ, ಮುಂದೆ ವರ್ಷಾನುಗಟ್ಟಲೆ ಕೋರ್ಟಿಗೆ ಅಲೆದಾಡುವ ಪರಿಸ್ಥಿತಿ ಬಂದೀತು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎಚ್ಚರಿಸಿದ್ದಾರೆ. ನಾವು ಈಗಾಗಲೇ ಪ್ರತ್ಯೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲು ಮಾಡಿದ್ದೇವೆ. ಸಾಮರಸ್ಯ ಕದಡುವ ವಿಚಾರಗಳಿದ್ದುದನ್ನು ಪತ್ತೆ ಮಾಡಿ ಕೇಸು ದಾಖಲಿಸುತ್ತೇವೆ. ಇದಕ್ಕಾಗಿಯೇ ಮಂಗಳೂರು ಕಮಿಷನರೇಟ್ ನಲ್ಲಿ ಎಂಟು ಮಂದಿಯ ತಂಡ ಕಾರ್ಯಾಚರಣೆ ಮಾಡ್ತಾ ಇದೆ ಎಂದು ತಿಳಿಸಿದ್ದಾರೆ.
ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ, ರಾಜ್ಯ ಗುಪ್ತಚರ ಇಲಾಖೆ ಮಾಹಿತಿ, ಎಚ್ಚರದಿಂದಿರಿ ಸಹೋದರರೇ ಎಂಬುದಾಗಿ ಪೋಸ್ಟ್ ಹಾಕಲಾಗಿತ್ತು. ಮತ್ತೊಂದು ಪೋಸ್ಟ್ ನಲ್ಲಿ ಪ್ರವೀಣ್ ಕೊಲೆಗೆ ಪ್ರತೀಕಾರವಾಗಿ ಇವತ್ತು ಇನ್ನೊಂದು ಕೊಲೆ ಮಾಡ್ತೀವಿ, ಪಕ್ಕಾ ಇವತ್ತು ಕೊಲೆ ಆಗುತ್ತದೆ ಎಂದು ಬರೆಯಲಾಗಿತ್ತು. ಮತ್ತೊಂದರಲ್ಲಿ ಸಿಂಪಲ್ ಮೊಹಿದ್ದೀನ್ ಬಾವನ ಮರ್ಡರ್ ಮಾಡಿ, ಆಮೇಲೆ ನೋಡೋಣ ಯಾವ ಬಾವ ಬರ್ತಾನೆ ಅಂತ ಪೋಸ್ಟ್ ಇತ್ತು. ಇನ್ನೊಂದರಲ್ಲಿ ಸ್ವಾಮಿ ಅವರು ಒಂದು ತಲೆ ತೆಗೆದರೆ, ನಾವು ಹತ್ತು ತಲೆ ತೆಗೀಬೇಕು ಎಂದು ಪೋಸ್ಟ್ ಹಾಕಲಾಗಿತ್ತು. ಇವೆಲ್ಲ ಬೇರೆ ಬೇರೆ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳಾಗಿದ್ದು, ಪೊಲೀಸರು ಸೈಬರ್ ಠಾಣೆಯಲ್ಲಿ ಪ್ರತ್ಯೇಕ ಐದು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಲಂ 66 ಐಟಿ ಆಕ್ಟ್ ಮತ್ತು 153 ಎ, 505(2) ಐಪಿಸಿ ಅಡಿ ಪ್ರಕರಣ ದಾಖಲಾಗಿದ್ದು, ಯಾರು ಪೋಸ್ಟ್ ಹಾಕಿದ್ದಾರೋ ಅವರನ್ನು ಪತ್ತೆ ಮಾಡುತ್ತೇವೆ. ಜಾಲತಾಣದಲ್ಲಿ ಸಾಮರಸ್ಯ ಕದಡುವ ಪೋಸ್ಟ್ ಹಂಚಿಕೊಳ್ಳುವುದು, ಕ್ರಿಯೇಟ್ ಮಾಡುವುದು ಎರಡು ಕೂಡ ಅಪರಾಧವಾಗಿದ್ದು, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ಪೋಸ್ಟ್ ಹಂಚಿಕೊಳ್ಳುವಾಗ ಜಾಗ್ರತೆ ವಹಿಸಬೇಕಾಗುತ್ತದೆ. ವಿನಾಕಾರಣ ಕೇಸು ಮೈಮೇಲೆ ಎಳೆದುಕೊಂಡು ಕೋರ್ಟ್ ಕಟಕಟೆ ಏರುವ ಸ್ಥಿತಿ ಬರುತ್ತದೆ. ಈಗಾಗಲೇ ಈ ಬಗ್ಗೆ ನಮ್ಮ ತಂಡ ಜಾಲತಾಣಗಳ ಮೇಲೆ ತೀವ್ರ ನಿಗಾ ಇಟ್ಟಿದೆ.
ಶಾಂತಿ ಸಭೆಯಲ್ಲಿ ಜಾಲತಾಣದಲ್ಲಿ ಹರಿಯಬಿಡುವ ಪೋಸ್ಟ್ ಗಳ ಬಗ್ಗೆಯೇ ಆಕ್ಷೇಪ ಬಂದಿತ್ತು. ಹೀಗಾಗಿ ಇಂಟರ್ನೆಟ್ ಕಡಿತ ಮಾಡುವ ಬಗ್ಗೆಯೂ ಪ್ರಸ್ತಾಪ ಬಂದಿತ್ತು. ಆದರೆ, ಇಂಟರ್ನೆಟ್ ಕಡಿತ ಮಾಡಿದರೆ ಇತರೇ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಆನ್ಲೈನ್ ಕ್ಲಾಸ್ ಪಡೆಯುವವರು, ಇತರೇ ಇಂಟರ್ನೆಟ್ ಆಧರಿಸಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತದೆ. ಹಾಗಾಗಿ ಕೋಮು ವೈಷಮ್ಯದ ಸಂದರ್ಭದಲ್ಲಿ ದೇಶದ ಬೇರೆ ಕಡೆ ಇಂಟರ್ನೆಟ್ ಸ್ಥಗಿತ ಮಾಡಿದರೂ, ಮಂಗಳೂರಿನಲ್ಲಿ ಅಂತಹ ಸ್ಥಿತಿ ಇಲ್ಲವೆಂದು ನಾವು ಆ ನಿರ್ಧಾರಕ್ಕೆ ಬಂದಿಲ್ಲ. ಹಾಗೆಂದು ಇಂಟರ್ನೆಟ್ ಕಡಿತಗೊಳಿಸುವುದು ನಮಗೇನು ಕಷ್ಟದ ಕೆಲಸವಲ್ಲ. ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು ಎಂದು ಕಮಿಷನರ್ ಹೇಳಿದ್ದಾರೆ.
ಇದೇ ವೇಳೆ, ಫಾಜಿಲ್ ಕುಟುಂಬಸ್ಥರ ಕೋರಿಕೆಯ ಮೇರೆಗೆ ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಮಹೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಸುರತ್ಕಲ್ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಿದ್ದರು. ಅನುಭವಿ ಅಧಿಕಾರಿಗೆ ಕೊಟ್ಟಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಮನೆಯವರು ಅಪೇಕ್ಷೆ ಪಟ್ಟಿದ್ದರಿಂದ ತನಿಖಾಧಿಕಾರಿಯನ್ನು ಬದಲಿಸಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
A total of five cases have been filed in CEN police station against people who have posted objectionable posts on social media with regards to the recent murder that took place in the city. A case has filed against posting a fake message on social media saying that there is a possibility of huge communal outburst in coastal districts as per information available with state intelligence.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm