ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಗೆ ತಾತ್ಕಾಲಿಕ ತಡೆ !! 

03-10-20 02:05 pm       Mangalore Correspondent   ಕರಾವಳಿ

ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ವರ್ಗಾವಣೆಗೆ ತಾತ್ಕಾಲಿಕ ತಡೆ ಹೇರಲಾಗಿದೆ. ರಾಜ್ಯ ಸರಕಾರ ವರ್ಗಾವಣೆಗೆ ತಾತ್ಕಾಲಿಕ ತಡೆ ವಿಧಿಸಿದೆ.   

ಮಂಗಳೂರು, ಅಕ್ಟೋಬರ್ 3: ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ವರ್ಗಾವಣೆಗೆ ತಾತ್ಕಾಲಿಕ ತಡೆ ಹೇರಲಾಗಿದೆ. ಡ್ರಗ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಅನ್ನು ಯಾರದೋ ಒತ್ತಡಕ್ಕೆ ಮಣಿದು ವರ್ಗ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು. ಇದೇ ಕಾರಣವೋ ಏನೋ, ರಾಜ್ಯ ಸರಕಾರ ವರ್ಗಾವಣೆಗೆ ತಾತ್ಕಾಲಿಕ ತಡೆ ವಿಧಿಸಿದೆ.   

ಸಿಸಿಬಿ ಇನ್ಸ್ ಪೆಕ್ಟರ್ ಆಗಿ, ಕಾಪು ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಮಹೇಶ್ ಪ್ರಸಾದ್ ನೇಮಕಕ್ಕೆ ತಾತ್ಕಾಲಿಕ ತಡೆ ಹೇರಲಾಗಿದೆ ಎನ್ನಲಾಗುತ್ತಿದೆ. 

ಡ್ರಗ್ ಪ್ರಕರಣಕ್ಕೂ ವರ್ಗಾವಣೆಗೂ ಸಂಬಂಧ ಇಲ್ಲ.. 

ಆದರೆ, ವರ್ಗಾವಣೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ವರ್ಗಾವಣೆ ಹಿಂದೆ ಬೇರೆನೇ ಕಾರಣ ಇದೆ. ಡ್ರಗ್ ವಿಚಾರದಲ್ಲಿ ವರ್ಗಾವಣೆ ಎನ್ನುವುದು ಸತ್ಯಕ್ಕೆ ದೂರವಾದ್ದು. ಬಹಳ ವಿಚಾರ ನಮಗೇನೇ ಗೊತ್ತಾಗಲ್ಲ. ಯಾವ ಆಫೀಸರ್ ಮೇಲೂ ಒತ್ತಡ ಹೇರಲಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

ಇನ್ನು ಡ್ರಗ್ ಕೇಸ್ ನಲ್ಲಿ ಚೈನ್  ಲಿಂಕ್  ದೊಡ್ಡದಿದೆ. ಚೈನ್ ಲಿಂಕ್ ಎಲ್ಲಿ ಕೊನೆಯಾಗುತ್ತೋ ಅಲ್ಲಿ ತನಕ ವಿಚಾರಣೆ ಮಾಡುತ್ತೇವೆ. ಪ್ರಕರಣದಲ್ಲಿ ಈಗಾಗ್ಲೇ 6 ಮಂದಿಯನ್ನು ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ಪ್ರತಿನಿತ್ಯ ತನಿಖೆ ಮಾಡಲಾಗುತ್ತಿದೆ, ಮಾಹಿತಿ ಬೇಕಾದಲ್ಲಿ ನೋಟಿಸ್ ಮಾಡುತ್ತೇವೆ. ನೋಟಿಸ್ ಕೊಟ್ಟು ಪ್ರಕರಣದ ವಿಚಾರಣೆಯನ್ನು ಮಾಡುತ್ತೇವೆ ಎಂದು ಕಮೀಷನರ್ ವಿಕಾಸ್ ಕುಮಾರ್ ಹೇಳಿದ್ದಾರೆ.