ಬ್ರೇಕಿಂಗ್ ನ್ಯೂಸ್
02-08-22 01:59 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 2 : ಫಾಝಿಲ್ ಹತ್ಯೆ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ರೌಡಿಶೀಟರ್ ಸುಹಾಸ್ ಶೆಟ್ಟಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಪ್ರತೀಕಾರಕ್ಕಾಗಿಯೇ ಫಾಜಿಲ್ ಕೊಲೆ ನಡೆಸಲಾಗಿತ್ತು ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ.
ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23), ದೀಕ್ಷಿತ್ ಕಾಟಿಪಳ್ಳ(21), ಸುಹಾಸ್( 29), ಮೋಹನ್(23) ಮತ್ತು ಗಿರಿಧರ್ (27) ಬಂಧಿತರು. ಕೃತ್ಯದ ಬಗ್ಗೆ ಕಾರಿನ ಮಾಲೀಕ ಅಜಿತ್ ಕ್ರಾಸ್ತಾಗೆ ತಿಳಿದಿತ್ತು. ಮಹತ್ವದ ಕೆಲಸಕ್ಕಾಗಿ ಕಾರು ಬೇಕೆಂದು ಹೇಳಿ ಮೂರು ದಿನಕ್ಕೆ 15 ಸಾವಿರ ಕೊಟ್ಟು ಕಾರು ಪಡೆದಿದ್ದರು. ಹಣದಾಸೆಗೆ ಕಾರು ಕೊಟ್ಟು ಅಜಿತ್ ಪ್ರಕರಣದಲ್ಲಿ ತಗ್ಲಾಕ್ಕೊಂಡಿದ್ದಾನೆ.
ಬಜ್ಪೆ ಠಾಣೆ ರೌಡಿಶೀಟರ್ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಹತ್ಯೆಗೆ ಸ್ಕೆಚ್ ಹಾಕಿದ್ದರು. ಜು.27ರಂದು ಸುರತ್ಕಲ್ ನಲ್ಲಿಯೇ ಒಂದು ಕಡೆ ಸೇರಿ ಸ್ಕೆಚ್ ಹಾಕಿದ್ದರು. ಫಾಜಿಲ್ ಸೇರಿ ಐದಾರು ಮಂದಿಯ ಹೆಸರು ಲಿಸ್ಟ್ ಮಾಡಿದ್ದರು. ಗಿರಿಧರ್ ಇಯಾನ್ ಕಾರನ್ನು ಡ್ರೈವ್ ಮಾಡುತ್ತಿದ್ದರೆ, ಸುಹಾಸ್ ಶೆಟ್ಟಿ, ಮೋಹನ್, ಅಭಿಷೇಕ್ ಟಾರ್ಗೆಟ್ ಪ್ಲಾನ್ ಮಾಡಿದ್ದರು. ಗುರುತು ಸಿಗದಂತೆ ತಲೆಗೆ ಮಂಕಿಕ್ಯಾಪ್ ರೆಡಿ ಮಾಡಿಕೊಂಡಿದ್ದಲ್ಲದೆ, ಕಿನ್ನಿಗೋಳಿಯ ಬಾರ್ ಒಂದರಲ್ಲಿ ಊಟ ಮಾಡಿ ಹತ್ಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಹತ್ಯೆಗೂ ಮುನ್ನ ಸುರತ್ಕಲ್ ಆಸುಪಾಸಿನಲ್ಲಿ ಮೂರು ಬಾರಿ ಓಡಾಟ ನಡೆಸಿದ್ದರು. ಫಾಜಿಲ್ ಬಗ್ಗೆ ಫಾಲೋ ಮಾಡಿಕೊಂಡು ಬಂದು ಹೊಡೆದಿದ್ದರು. ಶ್ರೀನಿವಾಸ, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಫಾಜಿಲ್ ಮೇಲೆ ದಾಳಿ ನಡೆಸಿದ್ದರು. ಗಿರಿಧರ್ ಕಾರು ಚಾಲಕನಾಗಿದ್ದರೆ, ದೀಕ್ಷಿತ್ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಅಲರ್ಟ್ ನೋಡಿಕೊಂಡಿದ್ದರು.
ಹತ್ಯೆ ಬಳಿಕ ಆರೂ ಜನರು ಕಾರ್ಕಳದ ಇನ್ನಾ ಭಾಗಕ್ಕೆ ತೆರಳಿದ್ದು ಮತ್ತೊಬ್ಬನ ಮೂಲಕ ಬೇರೊಂದು ಕಾರು ತರಿಸಿಕೊಂಡು ಎಸ್ಕೇಪ್ ಆಗಿದ್ದರು. ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬಂಧಿಸಿದ್ದು ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಪ್ರೇಮ ಪ್ರಕರಣ ವದಂತಿಯಷ್ಟೇ !
ಹತ್ಯೆ ಬೆನ್ನಲ್ಲೇ ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಗಲಾಟೆ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆಯೂ ಅಲ್ಲ. ಪಕ್ಕಾ ಪ್ಲಾನ್ ಮಾಡಿಕೊಂಡು ಹತ್ಯೆ ನಡೆಸಿದ್ದಾರೆ. ಘಟನೆ ಬಳಿಕ ಕೆಲವು ರೌಡಿಶೀಟರ್ ಗಳು ನಾವೇ ಮಾಡಿದ್ದೆಂದು ಹೇಳಿಕೊಂಡು ತಿರುಗಾಡಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
ಫಾಜಿಲ್ ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಮಧ್ಯಾಹ್ನದಿಂದ ಮಂಗಳೂರು, ಸುರತ್ಕಲ್ ಸುತ್ತಾಡಿದ್ದ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ. ನಮ್ಮ ತನಿಖೆಯಲ್ಲಿ ಇದು ಫಾಜಿಲ್ ಮೇಲೆ ನಡೆದ ಪ್ಲಾನ್ ಅನ್ನೋದು ಸ್ಪಷ್ಟವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಆದರೆ ಯಾಕಾಗಿ ಟಾರ್ಗೆಟ್ ಆಗಿದ್ದ ಎನ್ನೋದು ತಿಳಿದುಬಂದಿಲ್ಲ.
At last, the police are successful in cracking the Mohammed Fazil murder case that took place at Suratkal last week, which made a huge sensation in coastal Karnataka. Six accused were arrested on Tuesday August 2. The arrested are identified as Suhas (29), Mohan (26), Giridhar (23), Abhishek (23), Deekshith (21) and Srinivas (26). “Accused Suhas Shetty hailing from Bajpe had a discussion with Abhishek to kill someone as they had identified 6 to 7 targets. Suhas, Abhishek and Giridhar had a discussion in a hotel about needing a car and weapon to kill. Mohan then called two of his friends to join the plan.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm