ಬ್ರೇಕಿಂಗ್ ನ್ಯೂಸ್
04-08-22 06:23 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 4: ಅಹಿತಕರ ಘಟನೆ ತಪ್ಪಿಸಲು ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಡಬಲ್ ರೈಡ್ ಹೋಗುವುದನ್ನು ನಿಷೇಧಿಸಿ ಹೊರಡಿಸಿದ ಆದೇಶವನ್ನು ದಿಢೀರ್ ಆಗಿ ಹಿಂಪಡೆಯಲಾಗಿದೆ. ಡಬಲ್ ರೈಡ್ ನಿಷೇಧಕ್ಕೆ ವ್ಯಾಪಕ ಜನ ವಿರೋಧ ಕೇಳಿಬರುತ್ತಿದ್ದಂತೆ ಮಂಗಳೂರು ಕಮಿಷನರ್ ಆದೇಶ ವಾಪಸ್ ಪಡೆದಿದ್ದಾರೆ.
ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ದ್ವಿಚಕ್ರ ವಾಹನದಲ್ಲಿ ಬಂದು ಅಪರಾಧ ಎಸಗುವುದು ಜಾಸ್ತಿ ಎಂಬ ನಿಟ್ಟಿನಲ್ಲಿ ಡಬಲ್ ರೈಡ್ ಸಂಚಾರವನ್ನು ನಿಷೇಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು. ಈ ಹೇಳಿಕೆಯ ವಿಚಾರದಲ್ಲಿ ಪರ- ವಿರೋಧ ಕೇಳಿಬಂದಿತ್ತು. ಅದಾದಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಈ ಕುರಿತು ಆದೇಶವನ್ನೂ ಹೊರಡಿಸಿದ್ದರು. ರಾತ್ರಿ ವೇಳೆಗೆ ಮಾತ್ರ ಹಿಂಬದಿ ಸವಾರಿ ನಿಷೇಧ ಎನ್ನುವ ಬಗ್ಗೆ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಜನಸಾಮಾನ್ಯರು ಹೆಚ್ಚಾಗಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವುದರಿಂದ ಜಿಲ್ಲೆಯಾದ್ಯಂತ ಈ ರೀತಿ ಆದೇಶ ಹೊರಡಿಸಿದ್ದು ಕೆಲವರ ಆಕ್ಷೇಪಕ್ಕೆ ಕಾರಣವಾಗಿತ್ತು.

ಆದರೆ, ಈ ಬಗ್ಗೆ ಒಂದೆಡೆ ಜನ ವಿರೋಧ ಕೇಳಿಬರುತ್ತಿದ್ದಂತೆ ಮೇಲಿನಿಂದ ಕರೆಯೂ ಬಂದಿದೆ ಎನ್ನಲಾಗುತ್ತಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ ಒಂದೇ ಗಂಟೆಯಲ್ಲಿ ಹಿಂಪಡೆದಿದ್ದಾರೆ. ಅಲ್ಲದೆ, ಈಗಾಗಲೇ ರಾತ್ರಿ 9ರ ವರೆಗೆ ವ್ಯಾಪಾರ ಮತ್ತು ಸಂಚಾರ ನಿರ್ಬಂಧವನ್ನು ಸಡಿಲಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅದೇ ಪ್ರಕಾರದಲ್ಲಿ ರಾತ್ರಿ 9ರ ಬಳಿಕ ಪೂರ್ತಿ ಸಂಚಾರ ನಿರ್ಬಂಧ ಇರಲಿದೆ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಅಹಿತಕರ ಘಟನೆ ತಪ್ಪಿಸಲು ದ್ವಿಚಕ್ರ ಹಿಂಬದಿ ಸವಾರಿಗೆ ನಿಷೇಧ ; ಜಿಲ್ಲೆಯಲ್ಲಿ ನಾಳೆಯಿಂದಲೇ ಹೊಸ ವ್ಯವಸ್ಥೆ !
Mangalore Male pillion riders not allowed for a week order taken back after public opposition largely on social media. Adgp Alok Kumar and Mangalore Commissioner beefing media stated that male pillion riders will not be allowed for a week in the city after the night curfew is revoked on August 5.
19-03-26 05:01 pm
HK News Staffer
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm