ಬ್ರೇಕಿಂಗ್ ನ್ಯೂಸ್
26-06-26 08:33 pm HK News Staffer ಕರಾವಳಿ
ಮಂಗಳೂರು, ಜೂನ್ 26: ರಾಜ್ಯದ ಅತಿ ಹಿರಿಯ ಕನ್ನಡ ವಿಭಾಗವನ್ನು ಹೊಂದಿರುವ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ಕನ್ನಡ ಸ್ನಾತಕೋತ್ತರ (ಎಂ.ಎ) ಪದವಿಗೆ ಹೊಸತನದ ಟಚ್ ನೀಡಿದ್ದು, ವೃತ್ತಿಪರ ಕೋರ್ಸಿನಂತೆ ಬದಲಾವಣೆ ಮಾಡಿಕೊಂಡಿದೆ. ಆಧುನಿಕ ಡಿಜಿಟಲ್ ಲೋಕದ ವಿವಿಧ ತಾಂತ್ರಿಕ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿ ಎಂಎ ಪದವಿಯನ್ನು ಇತರೇ ವೃತ್ತಿಪರ ಕೋರ್ಸುಗಳ ರೀತಿ ಮಾರ್ಪಡಿಸಿದೆ.
ಆಮೂಲಕ ಹತ್ತಾರು ವರ್ಷಗಳಿಂದ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಹಳೆಕಾಲದ ಕನ್ನಡ ಎಂ.ಎ. ಪದವಿಗೆ ಅಲೋಶಿಯಸ್ ಕಾಲೇಜು ಹೊಸ ವಿನ್ಯಾಸವನ್ನು ನೀಡಿದೆ. ಕನ್ನಡ ಸಾಹಿತ್ಯ, ಪರಂಪರೆ, ಛಂದಸ್ಸಿಗೆ ಸೀಮಿತವಾಗಿದ್ದ ಕನ್ನಡ ಎಂಎ ಸ್ನಾತಕೋತ್ತರ ಪದವಿಗೆ ಬೇಡಿಕೆ ಕುಸಿಯುತ್ತಿರುವುದನ್ನು ಮನಗಂಡ ವಿಷಯ ತಜ್ಞರು ಇದೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಪಠ್ಯಗಳನ್ನು ಮಾರ್ಪಡಿಸಿ ಆಧುನಿಕ ಕಾಲದ ಅಗತ್ಯಗಳನ್ನು ಪೂರೈಸುವಂತೆ ಹೊಸತನಕ್ಕೆ ತೆರೆದುಕೊಂಡಿದ್ದಾರೆ.
ಡಿಜಿಟಲ್ ಸಂವಹನ, ಸಿನಿಮಾ, ಕಿರುತೆರೆ ಸಹಿತ ಮನರಂಜನಾ ಉದ್ಯಮದಲ್ಲಿ ವೃತ್ತಿ ಕಂಡುಕೊಳ್ಳಲು ಸಾಧ್ಯವಾಗುವಂತೆ ಪದವಿ ಪಠ್ಯವನ್ನು ಬದಲಾವಣೆ ಮಾಡಲಾಗಿದೆ. ಇದಲ್ಲದೆ, ಮಾಧ್ಯಮ ಕ್ಷೇತ್ರದ ವಿವಿಧ ರಂಗಗಳಲ್ಲಿ ಬೇಡಿಕೆಯಿರುವ ಸಾಹಿತ್ಯ, ಅನುವಾದಗಳ ಜೊತೆಗೆ ಕೃತಕ ಬುದ್ದಿಮತ್ತೆ(ಎಐ), ಪ್ರಾಂಪ್ಟ್ ಇಂಜಿನಿಯರಿಂಗ್, ಕಂಟೆಂಟ್ ಬರವಣಿಗೆ, ಸ್ಕ್ರಿಪ್ಟ್ ರಚನೆ, ಜಾಹೀರಾತು ಉದ್ಯಮ, ವೇದಿಕೆ ನಿರ್ವಹಣೆ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಗಳಿಸಿಕೊಳ್ಳಲು ನೆರವಾಗುವಂತೆ ಎಂಎ ಪದವಿಯನ್ನು ಸಿದ್ಧಪಡಿಸಲಾಗಿದೆ.

ಇದಲ್ಲದೆ, ಕೆ.ಎ.ಎಸ್, ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುವಾಗುವಂತೆ ಕನ್ನಡ ಸಾಹಿತ್ಯ, ಸಾಹಿತ್ಯ ಚರಿತ್ರೆ, ವಿಮರ್ಶೆ, ಜಾನಪದ, ಕಾವ್ಯಮೀಮಾಂಸೆ ಮೊದಲಾದ ಸಂಪ್ರಾದಾಯಿಕ ವಿಷಯಗಳನ್ನೂ ಪಠ್ಯದಲ್ಲಿ ಅಳವಡಿಸಲಾಗಿದೆ. ಎಂಎ ಪದವಿಯನ್ನು ಗಳಿಸಿದವರು ಕೇವಲ ಅಧ್ಯಾಪನಕ್ಕೆ ಸೀಮಿತರಾಗದೆ, ಇತರೇ ಆಧುನಿಕ ಕಾಲದ ವೃತ್ತಿಗಳಿಗೂ ತೆರೆದುಕೊಳ್ಳುವಂತೆ ಪಠ್ಯವನ್ನು ರಚಿಸಲಾಗಿದೆ. ಪಠ್ಯಕ್ರಮ ರಚಿಸಲು ಬೆಂಗಳೂರು ಮತ್ತು ಮೈಸೂರಿನ ಕನ್ನಡ ಡಿಜಿಟಲ್ ಸಂವಹನ ವಿಭಾಗದ ಪರಿಣತರು, ಸಿನಿಮಾ ಕ್ಷೇತ್ರದ ತಜ್ಞರು, ಸಾಹಿತ್ಯ ವಿಮರ್ಶಕರನ್ನು ಒಳಗೊಂಡ ಅಧ್ಯಯನ ಮಂಡಳಿ ನೆರವು ಪಡೆಯಲಾಗಿದೆ.
ಇದೇ 2026-27ನೇ ಸಾಲಿನಿಂದಲೇ ಕನ್ನಡ ಎಂ.ಎ. ಪ್ರೊಫೆಶನಲ್ ಕೋರ್ಸು ಆರಂಭವಾಗಲಿದ್ದು, ಇದು ಕನ್ನಡ ನಾಡಿಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿನೂತನ ಕೊಡುಗೆಯೆಂದು ವಿವಿ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10-09-26 05:10 pm
HK News Staffer
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
10-09-26 09:24 pm
HK News Staffer
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
10-09-26 08:16 pm
HK News Staffer
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm
ಬೆಳ್ಳಾರೆ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ಬಟ್ಟೆ...
09-09-26 07:45 pm
ಮನದಲ್ಲೂ ಹುಲಿ, ಡಿಪಿಯಲ್ಲೂ ಹುಲಿ ; ಕೊನೆಗೆ ಅದೇ ಹುಲ...
09-09-26 07:44 pm