ಬ್ರೇಕಿಂಗ್ ನ್ಯೂಸ್
06-08-22 09:58 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 6 : ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ, ಅತಿವೃಷ್ಠಿಯಿಂದಾಗಿ ಜನರು ತತ್ತರಿಸಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಜನರ ಕಣ್ಣೀರು ಒರೆಸುವ ಒಂದೇ ಒಂದು ಯೋಜನೆ ಇಲ್ಲ. ಕೇಂದ್ರದಿಂದ ಅನುದಾನ ಕೇಳುವುದಕ್ಕೂ ರಾಜ್ಯ ಸರ್ಕಾರಕ್ಕೆ ಧೈರ್ಯ ಇಲ್ಲ ಎಂದು ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಳೆಯಿಂದಾಗಿ ನೂರಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದ ನೊಂದ ಜನರನ್ನು ರಾಜ್ಯ ಸರಕಾರ ಅನಾಥರಾಗಿಸಿದೆ. ರಾಜ್ಯ ಸರ್ಕಾರ ಅತಿವೃಷ್ಟಿ, ಪ್ರಕೃತಿ ವಿಕೋಪ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಂಕಷ್ಟ ಎದುರಿಸುತ್ತಿರುವ ಜನರ ರಕ್ಷಣೆಗೆ ಸರ್ಕಾರ ಬರಲಿದೆ ಎಂಬ ವಿಶ್ವಾಸ ಜನರಿಗೇ ಇಲ್ಲವಾಗಿದೆ. ಸರಕಾರದ ಮೇಲೆ ಜನರು ಇಟ್ಟಿರುವ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದರೂ ಸರ್ಕಾರ ಅವರಲ್ಲಿ ವಿಶೇಷ ಅನುದಾನ ಕೇಳಿಲ್ಲ. ಮಳೆಗೆ ಅನಾಹುತ ಆಗಿದ್ದರೂ ಅವರ ಗಮನಕ್ಕೂ ತರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎನ್ ಡಿ ಆರ್ ಎಫ್ ಫಂಡಿನಡಿ ಕೇಂದ್ರ ಸರಕಾರದಿಂದ ಅನುದಾನ ಕೇಳುವ ಧೈರ್ಯವೂ ರಾಜ್ಯದ ಬಿಜೆಪಿ ಸಂಸದರಿಗೆ, ರಾಜ್ಯ ಸರ್ಕಾರಕ್ಕೆ ಇಲ್ಲ. ರಾಜ್ಯದಲ್ಲಿ ಪಕ್ಷಕ್ಕೆ ಕೇಡುಗಾಲ ಬಂದಿದೆ ಎಂದು ಪಕ್ಷ ಉಳಿಸುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಜನರನ್ನು ಉಳಿಸುವ ಕೆಲಸಕ್ಕೆ ಸರಕಾರ ಮುಂದಾಗಿಲ್ಲ ಎಂದು ಹೇಳಿದರು.
ಯಾರೇ ಹತ್ಯೆಯಾದರೂ ಸರ್ಕಾರದಿಂದ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದ ವಿಪಕ್ಷ ಉಪನಾಯಕ ಯು.ಟಿ ಖಾದರ್, ನಮ್ಮ ಸರ್ಕಾರ ಇದ್ದಾಗ ಸಮಾನ ಪರಿಹಾರ ಕೊಟ್ಟಿದ್ದೇವೆ. ಅಶ್ರಫ್ ಕಲಾಯಿ- ಶರತ್ ಮಡಿವಾಳ ಇಬ್ಬರಿಗೂ ಸಮಾನ ಪರಿಹಾರ ನೀಡಿದ್ದೇವೆ. ದೀಪಕ್ ರಾವ್ - ಬಷೀರ್ ಇಬ್ಬರಿಗೂ ಸಮಾನ ಪರಿಹಾರ ಕೊಡಲಾಗಿತ್ತು. ವೈಯಕ್ತಿಕ ದ್ವೇಷದ ಹಲ್ಲೆ ಆದಾಗ ಪರಿಹಾರ ಕೊಡದೇ ಇರಬಹುದು. ಆದರೆ ಕೋಮು ದ್ವೇಷದ ಹಲ್ಲೆಗಳ ಸಂದರ್ಭದಲ್ಲಿ ಒಂದೇ ರೀತಿ ಪರಿಹಾರ ನೀಡಲಾಗಿತ್ತು. ಮುಖ್ಯಮಂತ್ರಿಯವರೂ ಒಬ್ಬರ ಮನೆಗೆ ಹೋಗಿ ಇನ್ನೊಬ್ಬರ ಮನೆಗೆ ಹೋಗದೆ ತಾರತಮ್ಯ ಮಾಡಿಲ್ಲ ಎಂದರು.

ಮೊನ್ನೆ ಆಕ್ಷೇಪ ಬಂದ ಬಳಿಕ ಹತ್ಯೆಯಾದ ಎಲ್ಲರ ಮನೆಗೂ ಸಿಎಂ ಬರ್ತೇನೆ ಎಂದು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ. ಪರಿಹಾರ ಕೊಡುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುತ್ತಾರೆ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಾದರೂ ಮುಖ್ಯಮಂತ್ರಿ ಆ ಮನೆಗಳಿಗೆ ಹೋಗಬೇಕು. ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡುವುದನ್ನು ಯಾವ ಧರ್ಮದವರು ಸಹ ಒಪ್ಪಲ್ಲ ಎಂದು ಯು.ಟಿ ಖಾದರ್ ಹೇಳಿದ್ದಾರೆ.
"Though the minister of Home Affairs had arrived in the state, neither the chief minister nor other ministers bothered to appeal to him to release grants to provide compensation to people affected by natural disasters or damages that took place due to flood that occurred in the state. Instead, they have discussed only their party issues," said MLA U T Khader.He was addressing a press meet at the circuit house on Saturday August 6.
19-03-26 05:01 pm
HK News Staffer
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm