ಬ್ರೇಕಿಂಗ್ ನ್ಯೂಸ್
08-08-22 09:42 pm Mangalore Correspondent ಕರಾವಳಿ
ಉಳ್ಳಾಲ, ಆ.8 : ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು ಕಡಲ ತೀರದಲ್ಲಿದ್ದ ಗೆಸ್ಟ್ ಹೌಸ್ ಕಟ್ಟಡವೊಂದು ಕಡೆಗೂ ಕಡಲು ಪಾಲಾಗಿದೆ.
ಈ ಬಾರಿಯ ಮಳೆಗಾಲ ಆರಂಭದಲ್ಲೇ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಬೀಚ್ ರಸ್ತೆಯನ್ನೇ ಕಡಲು ನುಂಗಿ ಹಾಕಿದ್ದು ತೀರದಲ್ಲಿರುವ ಬಹುತೇಕ ಮನೆಗಳು, ಗೆಸ್ಟ್ ಹೌಸ್ ಗಳು ಅಪಾದಂಚಿನಲ್ಲಿದ್ದವು. ಆಬಳಿಕ ಬಟ್ಟಪ್ಪಾಡಿ ಪ್ರದೇಶಕ್ಕೆ ಕಡಲ್ಕೊರೆತ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರ ದಂಡೇ ಆಗಮಿಸಿತ್ತು.
ಬಟ್ಟಂಪಾಡಿಯಲ್ಲಿ "ವಿಟಮಿನ್ ಸಿ" ಎಂಬ ಹೆಸರಿನ ಅಕ್ರಮ ಗೆಸ್ಟ್ ಹೌಸ್ ಕಟ್ಟಡ ಕಡಲಿನ ಅಂಚಿನಲ್ಲಿದ್ದು ಈಗಲೋ ಆಗಲೋ ಎನ್ನುವಂತಿತ್ತು. ಅದರ ಮಾಲಕ ಅಬ್ದುಲ್ಲ ಟಿ. ಎಂಬವರು ಕಟ್ಟಡದ ಬದಿಗೆ ಕಲ್ಲು, ಮರಳು ಮೂಟೆಗಳನ್ನ ಹಾಕಿ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ತೀರ ಪ್ರದೇಶದ ಮೂಲನಿವಾಸಿಗಳ ಮನೆಗಳೇ ಕಡಲಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದರಿಂದ ಜಿಲ್ಲಾಡಳಿತದಿಂದ ಗೆಸ್ಟ್ ಹೌಸ್ ರಕ್ಷಣೆಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ರೋಸಿ ಹೋಗಿದ್ದ ಗೆಸ್ಟ್ ಹೌಸ್ ಮಾಲಕ ಕಡಲ್ಕೊರೆತ ವೀಕ್ಷಣೆಗೆ ಬಂದಿದ್ದ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರಲ್ಲಿಯೂ ಅಳಲು ತೋಡಿಕೊಂಡಿದ್ದರು. ಉಳ್ಳಾಲ ತಾಲೂಕು ಕಚೇರಿಗೆ ಕಂಪ್ಯೂಟರ್, ಪೀಠೋಪಕರಣಗಳನ್ನ ನೀಡಿದ್ದರೂ ತಮ್ಮ ಗೆಸ್ಟ್ ಹೌಸನ್ನ ರಕ್ಷಿಸಲು ತಹಶೀಲ್ದಾರ್ ಬಿಡುತ್ತಿಲ್ಲ ಎಂದು ದೂರು ಹೇಳಿದ್ದರು. ಆದರೆ ಮಾಲಕರ ಶತ ಪ್ರಯತ್ನದ ನಡುವೆಯೂ ಕಡಲಿನ ಅಬ್ಬರ ಹೆಚ್ಚುತ್ತಲೇ ಇದ್ದು ಈಗ ಗೆಸ್ಟ್ ಹೌಸ್ ಕಟ್ಟಡದ ಭಾಗಶಃ ನೀರುಪಾಲಾಗಿದೆ. ಸಮುದ್ರರಾಜನ ರಕ್ಕಸ ಅಲೆಗಳು ನುಗ್ಗಿ ಬರುತ್ತಿದ್ದು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ನುಂಗಿ ಹಾಕಲಿದೆ.
Guest house in Ullal finally due to soil erosion, administration negligence reason says owners.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm