ಬ್ರೇಕಿಂಗ್ ನ್ಯೂಸ್
09-08-22 02:21 pm Mangalore Correspondent ಕರಾವಳಿ
ಬಂಟ್ವಾಳ, ಆಗಸ್ಟ್ 9: ವಿಟ್ಲ ಸಮೀಪದ ನೆಕ್ಕರೆಕಾಡು ಎಂಬಲ್ಲಿ ಗುಡ್ಡದಲ್ಲಿ ತಲೆ ಬುರುಡೆ ಪತ್ತೆಯಾದ ಪ್ರಕರಣವನ್ನು ವಿಟ್ಲ ಠಾಣೆ ಪೊಲೀಸರು ಭೇದಿಸಿದ್ದು ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೆಂದು ಪತ್ತೆ ಹಚ್ಚಿದ್ದಾರೆ.
ಮೃತ ವ್ಯಕ್ತಿಯನ್ನು ಉಕ್ಕುಡ ಬಳಿಯ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65) ಎಂದು ಪೊಲೀಸರು ಗುರುತಿಸಿದ್ದಾರೆ. ನಾಗೇಶ್ ಗೌಡ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎರಡು ದಿನಗಳ ಹಿಂದೆ ಗುಡ್ಡಕ್ಕೆ ಸೊಪ್ಪು ತರಲೆಂದು ತೆರಳಿದ್ದ ಸ್ಥಳೀಯ ನಿವಾಸಿಗಳಿಗೆ ತಲೆಬುರುಡೆ, ಎಲುಬು ಹಾಗೂ ಬಟ್ಟೆ ಕಾಣಸಿಕ್ಕಿತ್ತು. ಇದರಿಂದ ಯಾರೋ ಕೊಲೆಯಾಗಿದ್ದಾರೋ ಎನ್ನುವ ಸಂಶಯ ಉಂಟಾಗಿತ್ತು. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೆ, ನಾಪತ್ತೆ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಿದ್ದರು. ಈ ವೇಳೆ ಅದೇ ಪ್ರದೇಶದ ನಾಗೇಶ್ ಎಂಬವರು ನಾಪತ್ತೆಯಾಗಿದ್ದ ವಿಚಾರ ತಿಳಿದು ಆ ವ್ಯಕ್ತಿಯ ಮಗನನ್ನು ಪೊಲೀಸರು ಸ್ಥಳಕ್ಕೆ ಕರೆಸಿದ್ದರು. ತಲೆಬುರುಡೆಯ ಜೊತೆಗೆ ಅಲ್ಲಿ ಪತ್ತೆಯಾದ ಬಟ್ಟೆಯನ್ನು ಮನೆಮಂದಿ ಗುರುತಿಸಿದ್ದಾರೆ. ಅದರ ಆಧಾರದಲ್ಲಿ ನಾಗೇಶ್ ಗೌಡರದ್ದೆ ಶವ ಆಗಿರಬಹುದೆಂದು ಮೇಲ್ನೋಟಕ್ಕೆ ಪೊಲೀಸರು ನಿರ್ಧಾರಕ್ಕೆ ಬಂದಿದ್ದಾರೆ. ದೃಢ ಪಡಿಸಲು ಮಗ ಅಥವಾ ಕುಟುಂಬ ಸದಸ್ಯರ ಡಿಎನ್ಎ ಪರೀಕ್ಷೆ ನಡೆಸಿ ತಾಳೆ ಹಾಕಿ ನೋಡಬೇಕಾಗಿದೆ.
Mangalore Skeletal remains of missing man found after six months in Vitla. Nagesh Gowda was missing since six months but police who found the skeletal has now identified that it belongs to Nagesh.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm