ಬ್ರೇಕಿಂಗ್ ನ್ಯೂಸ್
09-08-22 10:27 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 9 : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ರಾಜ್ಯಕ್ಕೆ ಬಿಜೆಪಿಯ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ಹಿರಿಯರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಎದುರಿಸುತ್ತೇವೆ ಎಂದಿದ್ದಾರೆ.

ಸಿದ್ದರಾಮಯ್ಯ ಉತ್ಸವದ ಬಳಿಕ ಕಾಂಗ್ರೆಸ್ನಲ್ಲಿ ಒಳ ಜಗಳ, ಬೀದಿ ಜಗಳ ಹೆಚ್ಚಾಗಿದೆ. ಕೋಳಿವಾಡರಂತಹ ಹಿರಿಯ ನಾಯಕರು ಸಿದ್ದರಾಮಯ್ಯರನ್ನು ಬಯ್ಯುವಂತಾಗಿದೆ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹೋರಾಟ ಹೆಚ್ಚಾಗಿದೆ. ಅವರ ಒಳ ಜಗಳ, ಬೀದಿ ಜಗಳ, ಗೊಂದಲ, ಆಂತರಿಕ ಕಚ್ಚಾಟವನ್ನು ಮುಚ್ಚಿಡಲು ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ ಎಂದು ಹೇಳಿದ್ದಾರೆ.

ಗೊಂದಲ ಸೃಷ್ಟಿಸುವ ಕಾಂಗ್ರೆಸ್ ಆಟ ನಡೆಯುವುದಿಲ್ಲ. ಮೊದಲು ಅವರಲ್ಲಿರುವ ಗೊಂದಲವನ್ನು ಸರಿ ಮಾಡಿಕೊಳ್ಳಲಿ, ಕಾಂಗ್ರೆಸ್ ಭವಿಷ್ಯ ಏನೆಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಹಗರಣಗಳು ಬಯಲಿಗೆ ಬಂದಿದೆ. ಸೋನಿಯಾ, ರಾಹುಲ್ ಗಾಂಧೀಜಿ ಇಡಿ ತನಿಖೆ, ಡಿಕೆಶಿಯವರಿಗೆ ಜಾಮೀನು, ಮುಖ್ಯಮಂತ್ರಿ ಗೊಂದಲ, ದಲಿತ ಮುಖ್ಯಮಂತ್ರಿ ಚರ್ಚೆ ಇವೆಲ್ಲ ಗೊಂದಲಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಇಂತಹ ಟ್ವೀಟ್ ಮಾಡುತ್ತಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಬೊಮ್ಮಾಯಿ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
CM Bommai to continue as CM no changes says state President Nalin Kumar Kateel in Mangalore.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 08:09 pm
Mangalore Correspondent
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
06-09-26 06:11 pm
HK News Staffer
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm