ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ಪ್ರೇಮಿ ಇಬ್ರಾಹಿಂ ಹಾಜಿ ಬೊಳ್ಳಾಡಿ ಇನ್ನಿಲ್ಲ

04-10-20 01:26 pm       Headline Karnataka News Network   ಕರಾವಳಿ

ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಇಬ್ರಾಹಿಂ ಹಾಜಿ ಬೊಳ್ಳಾಡಿ ಇಂದು ಅನಾರೋಗ್ಯದಿಂದ ನಿಧನರಾದರು .

ಪುತ್ತೂರು ಅಕ್ಟೋಬರ್ 04: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕುಂಬ್ರವನ್ನು ಕಟ್ಟಿ ಬೆಳಿಸಿದ ಹಿರಿಯ ಮೇಧಾವಿ, ಶಿಕ್ಷಣ ಪ್ರೇಮಿ ಇಬ್ರಾಹಿಂ ಹಾಜಿ ಬೊಳ್ಳಾಡಿ ಅಲ್ಪಕಾಲದ ಅನಾರೊಗ್ಯದಿಂದ ಬಳಲಿ ಇಂದು ನಿಧನರಾದರು .

ಇಬ್ರಾಹಿಂ ಅವರು 1934 ರಲ್ಲಿ ಗಾಂಧಿಜಿ ದೇಶದ ಸ್ವಾತಂತ್ರ್ಯ ಹೋರಾಟ ಪರ್ಯಟನೆಯ ಭಾಗವಾಗಿ ಪುತ್ತೂರಿನಿಂದ ಸುಳ್ಯದ ವರೆಗೆ ಕಾಲ್ನಡಿಗೆ ಜಾಥ ನಡೆಸಿದ್ದರು . ಕುಂಬ್ರದ ಕಟ್ಟೆಯಲ್ಲಿ ಗಾಂಧಿಜಿಯ ಭಾಷಣ ಮಾಡಿದ್ದರು . ಅಂದು ಗಾಂಧಿಜಿಯೊಂದಿಗೆ ಯಾತ್ರೆಯಲ್ಲಿ ಇಬ್ರಾಹಿಂ ಕೂಡ ಭಾಗವಹಿಸಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಚಾಟಿ ಏಟು ತಂದಿದ್ದ ಇಬ್ರಾಹಿಂ ಅವರು  ಪ್ರತಿಭಟನೆ ಹೊರಾಟ ಮುಂತಾದವುಗಳಲ್ಲಿ ಭಾಗಿಯಾಗಿದ್ದರು.

ಕುಂಬ್ರದ ಶಾಲಾ ಕಾಲೇಜು ನಿರ್ಮಾಣದ ಸಂದರ್ಭದಲ್ಲಿ ಇಬ್ರಾಹಿಂ ಅವರು ಒಳಮುಗ್ರು ಗ್ರಾಮ ಪಂ. ಸದಸ್ಯರಾಗಿದ್ದರು. ಶಾಲಾ ಕಾಲೇಜು ಕಟ್ಟಡ ನಿರ್ಮಾಣ ಸಂಬಂದಿಸಿ ಜಾಗದ ತಕರಾರು ಬಂದಾಗ ಅವರೇ ಮುಂದೆ ನಿಂತು ಹೋರಾಡಿ ಕಾಲೇಜು ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾಗಿದ್ದರು