ಬ್ರೇಕಿಂಗ್ ನ್ಯೂಸ್
11-08-22 10:47 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 11: ಮಂಗಳೂರು ಮೂಲದ ಎಂಟರ ಹರೆಯದ ಪೋರನೊಬ್ಬ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಶಿಖರ ಕಿಲಿಮಂಜಾರೋ ಏರಿದ ಸಾಹಸ ಮಾಡಿದ್ದಾನೆ. ಸದ್ಯ ದುಬೈನಲ್ಲಿ ನೆಲೆಸಿರುವ ಅಯಾನ್ ಮೆಂಡನ್ ಈ ಸಾಧನೆ ಮಾಡಿದ ಪೋರ.
ಆಗಸ್ಟ್ 4ರಂದು ತಮ್ಮ ಹೆತ್ತವರೊಂದಿಗೆ ತಾಂಜಾನಿಯಾ ದೇಶದಲ್ಲಿರುವ ಜ್ವಾಲಾಮುಖಿಯಿಂದ ನಿರ್ಮಿಸಲ್ಪಟ್ಟ ಕಿಲಿಮಂಜಾರೋ ಶಿಖರದ ತುದಿಗೆ ಅಯಾನ್ ತಲುಪಿದ್ದಾನೆ. ಕಿಲಿಮಂಜಾರೋ ಏರಬೇಕೆಂಬ ಗುರಿ ಇಟ್ಟುಕೊಂಡು ಅಯಾನ್ ತನ್ನ ಆರನೇ ವರ್ಷದಲ್ಲಿಯೇ ತರಬೇತಿ ಆರಂಭಿಸಿದ್ದ. ನೇಪಾಳದಲ್ಲಿ ವಿವಿಧ ಪರ್ವತ ಶಿಖರಗಳನ್ನು ಏರಿ ತರಬೇತು ಪಡೆದಿದ್ದ.
ಆಗಸ್ಟ್ 4ರಂದು ಬೆಳ್ಳಂಬೆಳಗ್ಗೆ ಶಿಖರ ಹತ್ತಿದ್ದು, ‘’ಉರು ಪೀಕ್ ’’ ಎಂದು ಕರೆಯಲ್ಪಡುವ ಪರ್ವತದ ತುದಿಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಆಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕಿಲಿಮಂಜಾರೋ ಪರ್ವತ ಏರಿದ ಹುಡುಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಪರ್ವತ ಏರುತ್ತಿದ್ದ ಸಂದರ್ಭದಲ್ಲಿ ನಡುವೆ ತೀವ್ರ ಆಯಾಸಕ್ಕೊಳಗಾದ ಅಯಾನ್ ಗೆ ಹೆತ್ತವರು ಧೈರ್ಯ ತುಂಬಿದ್ದಾರೆ. ಆನಂತರ, ನಾನು ಸಾಧಿಸಿಯೇ ತೀರುತ್ತೇನೆ ಎಂದು ಮತ್ತೆ ಹೊರಟಿದ್ದಾನೆ. ಕೊನೆಗೂ ಶಿಖರ ತಲುಪುವ ಮೂಲಕ ಸಾಧನೆ ಮಾಡಿದ್ದಾನೆ. ಅಯಾನ್ ಮೆಂಡನ್, ದುಬೈನಲ್ಲಿ ನಾರ್ತ್ ಲಂಡನ್ ಕಾಲೇಜಿಯೇಟ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾನೆ.
Eight-year-old Ayaan Mendon from Mangaluru became the youngest person in the Gulf Cooperation Council (GCC) to climb Mount Kilimanjaro, the highest peak in Africa on August 4. On the morning of the August 4, Ayaan stood against the sign reading ‘Uhuru Peak’ in bold, holding the Indian flag after finishing a eight-day hike to Kilimanjaro
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm