ಬ್ರೇಕಿಂಗ್ ನ್ಯೂಸ್
13-08-22 05:29 pm Mangalore Correspondent ಕರಾವಳಿ
ಉಳ್ಳಾಲ, ಆ.13: ಓವರ್ ಸ್ಪೀಡ್ ಆರೋಪದಡಿ ಕೇಸು ದಾಖಲಿಸಿದರೂ, ದಂಡ ಕಟ್ಟದ ಸಿಟಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಬಸ್ಸು ನೌಕರರು ತಲಪಾಡಿ ರೂಟ್ ನಲ್ಲಿ ಬಸ್ ಮುಷ್ಕರ ನಡೆಸಿದ್ದು, ಚಾಲಕನ ಬಿಡುಗಡೆ ಆಗುತ್ತಿದ್ದಂತೆ ಸಂಜೆ ಹೊತ್ತಿಗೆ ಮುಷ್ಕರ ಕೈಬಿಟ್ಟು ಟ್ರಾಫಿಕ್ ಎಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂದು ಬೆಳಗ್ಗೆ 42 ರೂಟ್ ನಂಬರಿನ ಉಷಾ ಟ್ರಾವೆಲ್ಸ್ ಸಿಟಿ ಬಸ್ಸನ್ನು ಮೇಲಿನ ತಲಪಾಡಿಯಲ್ಲಿ ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್ಸೈ ರಾಬರ್ಟ್ ಲಸ್ರಾದೊ ತಡೆದಿದ್ದರು. ಓವರ್ ಸ್ಪೀಡ್ ಕಾರಣವೊಡ್ಡಿ 1000 ರೂ. ದಂಡ ಕಟ್ಟುವಂತೆ ಬಸ್ ನಿರ್ವಾಹಕ ದಯಾನಂದ್ ಅವರನ್ನ ಪೀಡಿಸಿದ್ದರು. ಚೆಕ್ ಪೋಸ್ಟ್ ಇದ್ದ ಪ್ರದೇಶದಲ್ಲಿ ಹೇಗೆ ಸ್ಪೀಡ್ ಬರಲು ಸಾಧ್ಯ ಎಂದು ನಿರ್ವಾಹಕರು ಪ್ರಶ್ನೆ ಮಾಡಿದ್ದರು. ಕೊನೆಗೆ ಎಎಸ್ಸೈ 500 ರೂ. ದಂಡ ಕಟ್ಟುವಂತೆ ಒತ್ತಡ ಹೇರಿದ್ದು, ದಂಡ ಪಾವತಿಸಲು ನಿರ್ವಾಹಕ ನಿರಾಕರಿಸಿದ್ದರು. ಅದೇ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಎಸ್ಐ, ಬಸ್ ಚಾಲಕ ಅಭಿರಾಜ್ ಅವರನ್ನ ಉಳ್ಳಾಲ ಪೊಲೀಸರನ್ನು ಕರೆಸಿ ವಶಕ್ಕೆ ಪಡೆಯುವಂತೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಬಸ್ ನೌಕರರು ದಿಢೀರ್ ಆಗಿ ತಲಪಾಡಿ ರೂಟ್ ಬಸ್ಸುಗಳನ್ನೆಲ್ಲ ನಿಲ್ಲಿಸಿ ಮುಷ್ಕರ ನಡೆಸಿದರು.


ಈ ಮಧ್ಯೆ ದ.ಕ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು ಉಳ್ಳಾಲ ಠಾಣಾಧಿಕಾರಿಯಲ್ಲಿ ವಶಕ್ಕೆ ಪಡೆದ ಬಸ್ ಚಾಲಕ ಅಭಿರಾಜ್ ಅವರನ್ನ ಬಿಡುಗಡೆ ಮಾಡುವಂತೆ ಮಾತುಕತೆ ನಡೆಸಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿ ಚಾಲಕ ಅಭಿರಾಜ್ ಅವರನ್ನು ಬಿಡುಗಡೆ ಮಾಡುತ್ತಿದ್ದಂತೆ ಬಸ್ಸು ನೌಕರರು ಮುಷ್ಕರ ಕೈ ಬಿಟ್ಟು ಬಸ್ ಸ್ಟೇರಿಂಗ್ ತಿರುಗಿಸಿದ್ದಾರೆ.


ಮುಷ್ಕರ ಹಿಂತೆಗೆಯುವ ಮುನ್ನ ಸಿಟಿ ಬಸ್ಸುಗಳಿಗೆ ನಿರಂತರ ಉಪಟಳ ನೀಡುತ್ತಿರುವ ಎಎಸ್ಐ ಲಸ್ರಾದೊ ವಿರುದ್ಧ ಕ್ರಮಕ್ಕೆ ಆಗ್ರಹಿಸುವಂತೆ ಬಸ್ಸು ನೌಕರರು ಜಯಶೀಲ ಅಡ್ಯಂತಾಯ ಅವರಲ್ಲಿ ಕೇಳಿಕೊಂಡಿದ್ದಾರೆ. ಟ್ರಾಫಿಕ್ ಎಎಸ್ಸೈ ಬಗ್ಗೆ ಬಸ್ ಸಿಬಂದಿ ಕಡೆಯಿಂದ ನಿರಂತರ ದೂರುಗಳು ಬರುತ್ತಿದ್ದು ಟ್ರಾಫಿಕ್ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಈ ಬಗ್ಗೆ ದೂರು ಹೇಳುವುದಾಗಿ ಅಡ್ಯಂತಾಯ ಅವರು ಹೇಳಿದ್ದಾರೆ.
Bus driver taken to custody over speed, released, bus resume service at Talapady at Ullal in Mangalore.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
11-07-26 08:40 pm
HK News Staffer
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm