ಬ್ರೇಕಿಂಗ್ ನ್ಯೂಸ್
15-08-22 04:47 pm Mangalore Correspondent ಕರಾವಳಿ
ಉಳ್ಳಾಲ, ಆ.15 : ಉಳ್ಳಾಲದ ಹೆಬ್ಬಾಗಿಲಾದ ತೊಕ್ಕೊಟ್ಟು ಓವರ್ ಬ್ರಿಡ್ಜಲ್ಲಿ ಸ್ಥಾಪನೆಗೊಂಡ 110 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಮೊದಲ ಬಾರಿಗೆ ಗಜಗಾತ್ರದ ರಾಷ್ಟ್ರ ಧ್ವಜ ಬಾನೆತ್ತರಕ್ಕೆ ಹಾರಿದೆ.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಅವರು ಉಳ್ಳಾಲವು ತಾಲೂಕಾಗಿ ಬೇರ್ಪಟ್ಟ ನಂತರ ನೂತನ 110 ಅಡಿ ಧ್ವಜ ಸ್ಥಂಭದಲ್ಲಿ ಮೊದಲ ಧ್ವಜಾರೋಹಣಗೈದ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಭಾಜನರಾದರು. ಸ್ವಿಚ್ ಅದುಮುವ ಮುಖೇನ ಅವರು ಧ್ವಜಾರೋಹಣಗೈದರು.ಶಾಸಕ ಯು.ಟಿ.ಖಾದರ್ ಮಾತನಾಡಿ ಉಳ್ಳಾಲದ ಜನರ ದೇಶಪ್ರೇಮ, ಸ್ವಾಭಿಮಾನದ ಸಂಕೇತವಾಗಿ ಶಾಶ್ವತವಾಗಿ ಈ ರಾಷ್ಟ್ರಧ್ವಜ 24 ಗಂಟೆ ಹಾರಾಡಲಿದೆ. 75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ನಮಗೆ ಪಾಲ್ಗೊಳ್ಳಲು ಅವಕಾಶ ದೊರಕಿದ್ದು ನಮ್ಮೆಲ್ಲರ ಭಾಗ್ಯ. ಮುಂದಿನ ದಿವಸಗಳಲ್ಲಿ ನಾವು ದ್ವೇಷ ಎಂಬ ಪದವನ್ನ ಹೃದಯದಿಂದಲೇ ಕಿತ್ತೆಸೆಯುವ ಕಾರ್ಯ ನಡೆಸಿ ಎಲ್ಲರೂ ಜತೆಗೂಡಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಬೇಕೆಂದು ಕರೆ ನೀಡಿದರು.
ಧ್ವಜಾರೋಹಣಕ್ಕೂ ಮುನ್ನ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟಿನ ವರೆಗೆ ತಿರಂಗಾ ಯಾತ್ರೆ ನಡೆಯಿತು. ಓವರ್ ಬ್ರಿಡ್ಜಲ್ಲಿ ನಡೆದ ಐತಿಹಾಸಿಕ ಧ್ವಜಾರೋಹಣಕ್ಕೆ ಸಾವಿರಾರು ದೇಶಭಕ್ತ ಜನರು ಸಾಕ್ಷಿಯಾದರು. ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ, ಗೌರವ ಸಲ್ಲಿಸಿದ ಬಳಿಕ ಓವರ್ ಬ್ರಿಡ್ಜ್ ವರೆಗೆ ಮೆರವಣಿಗೆಯಲ್ಲಿ ಬಂದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಬಂದು ತ್ರಿವರ್ಣ ತಿರಂಗಾ ಏರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Mangalore 110 Feet tall national flag attracts a large gathering at Ullal on Independence day.
08-01-25 09:26 pm
Bangalore Correspondent
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
08-01-25 11:07 pm
HK News Desk
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆಂದು ತಿಳಿದು ಅಂತ್...
05-01-25 09:41 pm
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
08-01-25 09:51 pm
Mangalore Correspondent
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
08-01-25 10:57 pm
Mangalore Correspondent
Ullal Crime, Mangalore: ಉಳ್ಳಾಲದಲ್ಲಿ ವಲಸೆ ಕಾರ್...
08-01-25 05:58 pm
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm
Mangalore crime, Court: ಸ್ನಾನ ಮಾಡುತ್ತಿದ್ದ ಅಪ್...
07-01-25 03:50 pm
Digital Arrest, I4C database, Cyber Frau: ಸೈಬ...
06-01-25 05:37 pm