ಉಪ ಚುನಾವಣೆ ಸೋಲಿನ ಭಯದಿಂದ ಸಿಬಿಐ ದಾಳಿ ; ಯು.ಟಿ ಖಾದರ್ ಟೀಕೆ 

05-10-20 06:12 pm       Mangaluru Correspondent   ಕರಾವಳಿ

ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡತೊಡಗಿದ್ದು ಅದಕ್ಕಾಗಿ ಸಿಬಿಐ ದಾಳಿ ನಡೆಸಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. ‌

ಮಂಗಳೂರು: ಡಿ.ಕೆ ಶಿವಕುಮಾರ್ ಮನೆಗೆ ಸಿಬಿಐ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡತೊಡಗಿದ್ದು ಅದಕ್ಕಾಗಿ ಸಿಬಿಐ ದಾಳಿ ನಡೆಸಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. ‌

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಯು.ಟಿ ಖಾದರ್, ಚುನಾವಣೆ ಸಂದರ್ಭದಲ್ಲಿ ಗಮನವನ್ನು ಬೇರೆಡೆ ಸೆಳೆಯಲು ಈ ದಾಳಿ ನಡೆಸಲಾಗಿದೆ. ರಾಜ್ಯ ಹಾಗು ಕೇಂದ್ರದಲ್ಲಿರುವುದು ಎಟೆನಷನ್ ಡೈವರ್ಟ್ ಸರಕಾರ. ಈ ದಾಳಿಯಿಂದ ಕಾಂಗ್ರೆಸ್ ಕುಗ್ಗುವುದಿಲ್ಲ. ಪರೋಕ್ಷವಾಗಿ ಈ ದಾಳಿ ನಡೆಸುವ ಮೂಲಕ ಬಿಜೆಪಿ ಉಪ ಚುನಾವಣೆಯ ಸೋಲನ್ನು ಒಪ್ಪಿಕೊಡಿದೆ ಎಂದು ಹೇಳಿದರು. 

ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಸಿಬಿಐ, ಐಟಿ ದಾಳಿ ನಡೆಸುವ ಉದ್ದೇಶವೇನು ? ಇದರ ಹಿಂದಿನ ಹಿಡನ್ ಅಜೆಂಡಾ ಏನು ಎಂದು ಖಾದರ್ ಪ್ರಶ್ನೆ ಮಾಡಿದ್ದಾರೆ.