ಬ್ರೇಕಿಂಗ್ ನ್ಯೂಸ್
24-08-22 12:11 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 24: ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಮಿತಿ ಹೇರಿದ್ದು ಯಕ್ಷಗಾನ ಮೇಳಕ್ಕೂ ತಟ್ಟಿದೆ. ರಾಜ್ಯ ಸರಕಾರದ ಆದೇಶದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಕಾಲಮಿತಿಗೆ ಬದಲಾಯಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.
ಇಡೀ ರಾತ್ರಿ ಯಕ್ಷಗಾನ ನಡೆಸುವ ಬದಲು ಸಂಜೆಯಿಂದ ರಾತ್ರಿ 11 ಗಂಟೆ ವೇಳೆಗೆ ಮುಗಿಸಲು ನಿರ್ಧರಿಸಲಾಗಿದೆ. ರಾತ್ರಿ ಗಂಟೆ 10.30 ರಿಂದ 50 ಡೆಸಿಬಲ್ಗಿಂತ ಹೆಚ್ಚಿನ ಮಿತಿಯ ಧ್ವನಿವರ್ಧಕ ಬಳಸಬಾರದು ಎಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸಲು ಕಟೀಲು ದೇವಳದ ಯಕ್ಷಗಾನ ಮೇಳಗಳ ಆಡಳಿತ ಮಂಡಳಿಯೂ ನಿರ್ಧಾರಕ್ಕೆ ಬಂದಿದೆ.
ಪ್ರತಿ ವರ್ಷ ನವೆಂಬರ್ ನಿಂದ ತೊಡಗಿ ಮೇ ಕೊನೆಯ ವರೆಗೆ ಆರು ತಿಂಗಳ ಕಾಲ ಯಕ್ಷಗಾನ ಮೇಳಗಳ ತಿರುಗಾಟ ಇರುತ್ತದೆ. ರಾತ್ರಿ 10ರಿಂದ ತೊಡಗಿ ಬೆಳಗ್ಗಿನ ಆರು ಗಂಟೆ ವರೆಗೂ ಯಕ್ಷಗಾನ ಇರುತ್ತದೆ. ಆದರೆ ಧ್ವನಿವರ್ಧಕಕ್ಕೆ ಮಿತಿ ಹೇರಿರುವುದು ಮತ್ತು ರಾತ್ರಿಯಿಡೀ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಕಾಲಮಿತಿ ಯಕ್ಷಗಾನ ಹೆಚ್ಚು ಪ್ರಚಲಿತವಾಗುತ್ತಿದೆ. ಇದೇ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಜೆ 5.30ರಿಂದ ರಾತ್ರಿ 10.30ರ ವರೆಗೆ ಕಟೀಲು ಮೇಳದ ಯಕ್ಷಗಾನ ಸೇವೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Mangalore Kateel Mela Yakshagana artistes anxious after loudspeaker order. Artistes, especially those dabbling in folklore, are on tenterhooks over the recent state government circular on the use of loudspeakers.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am