ಬ್ರೇಕಿಂಗ್ ನ್ಯೂಸ್
09-09-22 06:46 pm Mangalore Correspondent ಕರಾವಳಿ
ಮಂಗಳೂರು, ಸೆ.9 : ಹೈದರಾಬಾದ್ ಮೂಲದ ಓಯಸಿಸ್ ಫರ್ಟಿಲಿಟಿ ಸಂಸ್ಥೆಯು ಕರ್ನಾಟಕದಲ್ಲಿ 3ನೇ ಶಾಖೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆರಂಭಿಸಿದೆ. ಎಜೆ ಆಸ್ಪತ್ರೆ ಸಹಯೋಗದಲ್ಲಿ ಆರಂಭಗೊಂಡ ಓಯಸಿಸ್ ಫರ್ಟಿಲಿಟಿ ಸಂಸ್ಥೆಯ ಕೇಂದ್ರವನ್ನು ಎಜೆ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಎಜೆ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.
ದೇಶದ ಪ್ರಸಿದ್ಧ ಸ್ತ್ರೀರೋಗ ತಜ್ಞರಾದ ಡಾ.ದುರ್ಗಾ ಜಿ. ರಾವ್ ಮತ್ತು ಕಿರಣ್ ಗಡೇಲಾ ಓಯಸಿಸ್ ಫರ್ಟಿಲಿಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಕೇಂದ್ರದಲ್ಲಿ ಮಕ್ಕಳಿಲ್ಲದ ದಂಪತಿಗೆ ಮಕ್ಕಳನ್ನು ಪಡೆಯಲು ಅತ್ಯಾಧುನಿಕ ಚಿಕಿತ್ಸಾ ವಿಧಾನ ಅನುಸರಿಸಲಾಗುತ್ತದೆ. ಈಗಾಗಲೇ ದೇಶದಲ್ಲಿ 25 ಶಾಖೆಗಳನ್ನು ಹೊಂದಿದ್ದು ಮೂರು ವರ್ಷಗಳಲ್ಲಿ ದೇಶಾದ್ಯಂತ 50 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಬಂಜೆತನಕ್ಕೆ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಮಂಗಳೂರಿನಲ್ಲಿ ಸೌಲಭ್ಯಗಳ ಕೊರತೆ ಇತ್ತು. ಇದೀಗ ಓಯಸಿಸ್ ಫರ್ಟಿಲಿಟಿ ಸೆಂಟರ್ ಪೂರ್ಣ ಪ್ರಮಾಣದ ಚಿಕಿತ್ಸಾ ಕೇಂದ್ರವಾಗಿದ್ದು, ಇಲ್ಲಿ ಸ್ತ್ರೀರೋಗ ತಜ್ಞರು, ಆಂಡ್ರೊಲಾಜಿಸ್ಟ್, ಭ್ರೂಣಶಾಸ್ತ್ರಜ್ಞರು ಇರುತ್ತಾರೆ.
ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ದುರ್ಗಾ ಜಿ. ರಾವ್, ಕರ್ನಾಟಕದಲ್ಲಿ ಬಂಜೆತನದ ಮಟ್ಟ ತೀವ್ರಗತಿಯಲ್ಲಿ ಏರುತ್ತಿದೆ. ಜೀವನ ವಿಧಾನ, ಆಹಾರ ಗುಣಮಟ್ಟ, ಒತ್ತಡದ ಜೀವನವೂ ಇದಕ್ಕೆ ಕಾರಣ. ಅನೇಕ ಮಂದಿ ಮದುವೆಯಾದ ಹೊಸತರಲ್ಲಿ ಮಕ್ಕಳು ಹೆರುವುದನ್ನು ಮುಂದೂಡುತ್ತಾರೆ. ವಯಸ್ಸಾದ ಬಳಿಕ ಫಲವಂತಿಕೆ ಕ್ಷೀಣಿಸುವುದೆಂಬ ಅರಿವು ಇರುವುದಿಲ್ಲ. ಇಂಥವರಿಗೆ IVF, IVM, Micro-TESE ಇತ್ಯಾದಿ ಸುಧಾರಿತ ಚಿಕಿತ್ಸಾ ವಿಧಾನಗಳಿದ್ದು ಬಂಜೆತನ ನಿವಾರಿಸಲು ಸಹಾಯ ಮಾಡುತ್ತದೆ ಎಂದರು.
ಓಯಸಿಸ್ ಫರ್ಟಿಲಿಟಿ ಸಂಸ್ಥೆಯ ಕ್ಲಿನಿಕಲ್ ಭ್ರೂಣ ಶಾಸ್ತ್ರಜ್ಞರಾಗಿರುವ ಡಾ.ಕೃಷ್ಣ ಚೈತನ್ಯ ಮಾತನಾಡಿ, ಒತ್ತಡದ ಜೀವನ ಶೈಲಿ, ಕಡಿಮೆ ನಿದ್ರೆ, ಕಳಪೆ ಆಹಾರದ ಪರಿಣಾಮ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಕೆಲವೊಮ್ಮೆ ಮಕ್ಕಳಾಗದಿರುವ ಪ್ರಮೇಯ ಬರುತ್ತದೆ. ಇಂಥ ಸಮಸ್ಯೆಗಳಿಗೆ ನಮ್ಮಲ್ಲಿ ಸುಧಾರಿತ ಚಿಕಿತ್ಸಾ ವಿಧಾನಗಳಿದ್ದು ಮಕ್ಕಳನ್ನು ಪಡೆಯಲು ಸಹಕಾರ ನೀಡುತ್ತೇವೆ ಎಂದು ಹೇಳಿದರು. ಮಂಗಳೂರಿನ ಓಯಸಿಸ್ ಫರ್ಟಿಲಿಟಿಯ ಕ್ಲಿನಿಕಲ್ ಸಂಸ್ಥೆಯ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ.ಪ್ರಮೋದ ಲಕ್ಷ್ಮಣ್ ಮಾತನಾಡಿ, ಒಂದು ವರ್ಷದ ಪ್ರಯತ್ನದ ನಂತರವೂ ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ ತಜ್ಞರನ್ನು ಭೇಟಿಯಾಗಲು ಸಲಹೆ ಕೊಡುತ್ತೇನೆ. ಆರೋಗ್ಯಕರ ಆಹಾರ ಮತ್ತು ಜೀವನ ಶೈಲಿಯಿಂದಷ್ಟೇ ಫಲವಂತಿಕೆ ಸಾಧ್ಯ ಎಂದರು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಎ.ಜೆ. ಗ್ರೂಪ್ ನಿರ್ದೇಶಕರಾದ ಡಾ.ಅಮಿತಾ ಮಾರ್ಲ, ಪ್ರಶಾಂತ್ ಶೆಟ್ಟಿ, ಓಯಸಿಸ್ ಫರ್ಟಿಲಿಟಿ ಸಂಸ್ಥೆಯ ಸಿಇಓ ಸುಧಾಕರ್ ಜಾಧವ್ ಉಪಸ್ಥಿತರಿದ್ದರು. ಓಯಸಿಸ್ ಫರ್ಟಿಲಿಟಿ ಸಂಸ್ಥೆಯು ಸದ್ಗುರು ಹೆಲ್ತ್ ಕೇರ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಅಂಗ ಸಂಸ್ಥೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. 2009ರಲ್ಲಿ ಸಂಸ್ಥೆ ಆರಂಭಗೊಂಡಿದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳಲ್ಲಿ 25 ಶಾಖೆಗಳನ್ನು ಹೊಂದಿದೆ.
Founder of A J Hospital and Research Centre Dr A J Shetty inaugurated ‘Oasis Fertility centre’ here at A J Hospital on Friday September 9. There are 25 Oasis fertility centres in the country and three centers in Karnataka including in Mangaluru.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 01:26 pm
Mangalore Correspondent
Mangalore Rain, School College Holiday: ಕರಾವಳ...
16-07-25 10:52 pm
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm