ಬ್ರೇಕಿಂಗ್ ನ್ಯೂಸ್
12-09-22 10:22 pm Mangalore Correspondent ಕರಾವಳಿ
ಉಳ್ಳಾಲ, ಸೆ.12 : ಕೊರೊನಾ ಲಾಕ್ಡೌನ್ ಸಂದರ್ಭ ಹಣ್ಣು ಕೀಳಲು ಹಲಸಿನ ಮರವೇರಿ ಕೆಳಗೆ ಬಿದ್ದು ಸೊಂಟದ ಸ್ವಾಧೀನವನ್ನೇ ಕಳಕೊಂಡಿದ್ದ ಬೆಳ್ಮ ಗ್ರಾಮದ ಅಶಕ್ತ ಕುಟುಂಬದ ಯುವಕನೋರ್ವನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನ ಲಭಿಸಿದೆ.
ಬೆಳ್ಮ ಗ್ರಾಮದ ಬರಿಕೆ, ಕುಂಭಲಚ್ಚಿಲ್ ನಿವಾಸಿಗಳಾದ ಬಾಲಕೃಷ್ಣ ಪೂಜಾರಿ ಮತ್ತು ಪುಷ್ಪಾವತಿ ದಂಪತಿಯ ದ್ವಿತೀಯ ಪುತ್ರ ಭಾಸ್ಕರ ಪೂಜಾರಿ ಅವರು ಕಳೆದ ಒಂದೂವರೆ ವರುಷದ ಹಿಂದೆ ಹಣ್ಣು ಕೀಳಲು ಹಲಸಿನ ಮರ ಏರಿದ್ದಾಗ ರೆಂಬೆ ತುಂಡಾಗಿ ಕೆಳಗೆ ಬಿದ್ದು ಸೊಂಟದ ಸ್ವಾಧೀನ ಕಳಕೊಂಡು ಹಾಸಿಗೆ ಹಿಡಿದಿದ್ದರು. ಭಾಸ್ಕರ್ ಅವರ ಚಿಕಿತ್ಸೆಗೆ ಅನೇಕ ಸಂಘ, ಸಂಸ್ಥೆಗಳು, ಸ್ಥಳೀಯರು ಸೇರಿ ಆರ್ಥಿಕ ಸಹಕಾರ ನೀಡಿದ್ದರು.ಆ ಸಂದರ್ಭದಲ್ಲಿ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಭಾಸ್ಕರ್ ಅವರಿಗೆ ವೈಯಕ್ತಿಕ ಸಹಾಯ ನೀಡಿದಲ್ಲದೆ ವಿಶೇಷ ಮುತುವರ್ಜಿ ವಹಿಸಿ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಪರಿಹಾರ ನಿಧಿಗಾಗಿ ಮನವಿ ಮಾಡಿದ್ದರು. ಮಾಜಿ ಸಿಎಂ ಬಿಎಸ್ ವೈ ಆದೇಶದಂತೆ ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಭಾಸ್ಕರ್ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನ ಪರಿಹಾರವಾಗಿ ನೀಡಿದ್ದಾರೆ.



ಅಲೆಮಾರಿ, ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ ಮಾಜಿ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್ ನೇತೃತ್ವದ ತಂಡದ ಸದಸ್ಯರು ಪರಿಹಾರ ನಿಧಿಯ ಫಲಾನುಭವಿ ಭಾಸ್ಕರ್ ಅವರನ್ನ ಭೇಟಿ ಮಾಡಿ ಧೈರ್ಯ ತುಂಬಿದರು.
ತಮ್ಮ ಮನವಿಗೆ ಸ್ಪಂದಿಸಿ ಪರಿಹಾರ ಧನ ನೀಡಿದ ಮಾಜಿ ಸಿ.ಎಂ ಬಿಎಸ್ ವೈ ಮತ್ತು ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರಿಗೆ ರವೀಂದ್ರ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದು, ಭಾಸ್ಕರ್ ಅವರು ಹಂತ, ಹಂತವಾಗಿ ಚೇತರಿಸುತ್ತಿದ್ದು ಸಮಾಜದ ಸಹೃದಯಿಗಳು ಮುಂದೆಯೂ ಅವರಿಗೆ ಸಹಾಯ, ಸಹಕಾರ ನೀಡುವಂತೆ ಕೋರಿದ್ದಾರೆ.
Ullal Man loses strength to walk after falling down from tree, CM Fund issued after visiting his house in Belman.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm