ಬ್ರೇಕಿಂಗ್ ನ್ಯೂಸ್
13-09-22 04:26 pm Mangalore Correspondent ಕರಾವಳಿ
ಉಳ್ಳಾಲ, ಸೆ.13: ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು , ಮಡುಗಟ್ಟಿದ ಶೋಕದ ನಡುವೆಯೂ ಕುಟುಂಬ ವರ್ಗದವರು ವಿದ್ಯಾರ್ಥಿಯ ಅಂಗಾಂಗ ದಾನಗೈದಿದ್ದು ಸಾವಿನಲ್ಲೂ ವಿದ್ಯಾರ್ಥಿ ಸಾರ್ಥಕತೆ ಮೆರೆದಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ, ಬೈದರಪಾಲು ನಿವಾಸಿಗಳಾದ ತ್ಯಾಗರಾಜ್ - ಮಮತಾ ಕರ್ಕೇರ ದಂಪತಿಯ ಪ್ರಥಮ ಪುತ್ರ ಯಶರಾಜ್ (16) ಮೃತ ವಿದ್ಯಾರ್ಥಿ. ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ. ಕಳೆದ ಸೆ.7 ರ ಬುಧವಾರ ಬೆಳಗ್ಗೆ ಯಶರಾಜ್ ಉಳ್ಳಾಲ , ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ. 66ರ ಅಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನ್ನ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಾರದಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದರೂ ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿದೆ. ಮುದ್ದಿನ ಹಾಲುಗೆನ್ನೆಯ ಮಗನ ಮಡುಗಟ್ಟಿದ ಸಾವಿನ ಶೋಕದ ನಡುವೆಯೂ ಕುಟುಂಬ ವರ್ಗದವರು ಯಶರಾಜ್ ಅಂಗಾಂಗ ದಾನಗೈದು ಸಮಾಜಕ್ಕೆ ಮಾದರಿಯಾಗಿದ್ದಾರೆ.
ನಿತ್ಯದ ಬಸ್ ಮಿಸ್, ಹಿಂದಿನ ಬಸ್ಸಲ್ಲಿ ಪ್ರಯಾಣ
ವಿದ್ಯಾರ್ಥಿ ಯಶರಾಜ್ ಸೆ.7ರಂದು ತಾನು ನಿತ್ಯವೂ ಪ್ರಯಾಣಿಸುತ್ತಿದ್ದ ಸಿಟಿ ಬಸ್ಸು ಹಾದು ಹೋದ ಕಾರಣ ಹಿಂದಿನ ಬಸ್ಸನ್ನ ಏರಿ ಕಾಲೇಜಿನತ್ತ ಹೊರಟಿದ್ದ. ಬಸ್ಸಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರಿಂದ ಫುಟ್ ಬೋರ್ಡಲ್ಲಿದ್ದ ಯಶರಾಜ್ ಎಸೆಯಲ್ಪಟ್ಟು ತಲೆಗೆ ಮಾರಣಾಂತಿಕ ಗಾಯಗೊಂಡಿದ್ದ. ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದ ಯಶರಾಜ್ ಈ ವರುಷ ಮಂಗಳೂರಿನ ಅಲೋಶಿಯಸ್ ಕಾಲೇಜಿಗೆ ಎಂಟ್ರಿ ಆಗಿದ್ದ. ಯಶರಾಜ್ ಓದಲ್ಲಿ ಪ್ರತಿಭಾನ್ವಿತನಾಗಿದ್ದರೂ ಪ್ರಪಂಚ ಜ್ಞಾನ ಹೊಂದಿರಲಿಲ್ಲ. ಹೈಸ್ಕೂಲ್ ವರೆಗೂ ಶಾಲಾ ವಾಹನ ಅಥವಾ ಅಪ್ಪನ ಸ್ಕೂಟರಲ್ಲೇ ಪಯಣಿಸುತ್ತಿದ್ದ ಯಶರಾಜ್ ಕಾಲೇಜು ಮೆಟ್ಟಿಲು ಏರಿದ ಬಳಿಕ ಸಿಟಿ ಬಸ್ಸಿನ ಪ್ರಯಾಣ ರೂಢಿ ಮಾಡಿದ್ದ. ಮೃತ ಯಶರಾಜ್ ತಾಯಿ, ತಂದೆ, ತಂಗಿಯನ್ನ ಅಗಲಿದ್ದಾರೆ. ತಂದೆ ತ್ಯಾಗರಾಜ್ ಹೊಟೇಲ್ ಮಾಲಕರಾಗಿದ್ದು, ತಾಯಿ ಮಮತಾ ಕೊಲ್ಯದ ಜಾಯ್ ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
Mangalore, Ullal 16 year school student falls down from moving bus, brain dead, donates all his organs. The deceased has been identified as Yasraj who was a PUC Student. On Sep 7th Yasraj fell from the moving bus and was admitted at Indian Hospital but later he was found brain dead.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm