ಬ್ರೇಕಿಂಗ್ ನ್ಯೂಸ್
14-09-22 04:36 pm HK News Desk ಕರಾವಳಿ
ಮಂಗಳೂರು, ಸೆ.14: ಬಸ್ಸಿನಿಂದ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಪಿಯುಸಿ ವಿದ್ಯಾರ್ಥಿಯ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ನಗರದ ಇಂಡಿಯಾನ ಆಸ್ಪತ್ರೆಯಿಂದ ಬೆಂಗಳೂರು ಮತ್ತು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಝೀರೋ ಟ್ರಾಫಿಕಲ್ಲಿ ಲಿವರ್, ಕಿಡ್ನಿ ಮತ್ತು ಕಣ್ಣುಗಳನ್ನು ತೆಗೆದು ರವಾನೆ ಮಾಡಲಾಗಿದೆ.
ಉಳ್ಳಾಲದ ತ್ಯಾಗರಾಜ್ – ಮಮತಾ ಕರ್ಕೇರ ಅವರ ಪುತ್ರ, 16 ವರ್ಷದ ಯಶರಾಜ್ ವಾರದ ಹಿಂದೆ ಖಾಸಗಿ ಸಿಟಿ ಬಸ್ಸಿನಲ್ಲಿ ಬರುತ್ತಿದ್ದಾಗ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಹೆದ್ದಾರಿಯಲ್ಲಿ ಬಸ್ಸಿನಿಂದ ಎಸೆಯಲ್ಪಟ್ಟಿದ್ದ. ಬಸ್ಸಿನಲ್ಲಿ ರಶ್ ಇದ್ದ ಕಾರಣ ನೇತಾಡುತ್ತಾ ಹೋಗುತ್ತಿದ್ದಾಗ ಹುಡುಗ ಹೊರಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಇಂಡಿಯಾನ ಆಸ್ಪತ್ರೆಗೆ ದಾಖಲಾಗಿದ್ದ.
ಚಿಂತಾಜನಕ ಸ್ಥಿತಿಯಲ್ಲಿದ್ದ ಯಶರಾಜ್ ನನ್ನು ಬದುಕಿಸಲು ವೈದ್ಯರು ಶತ ಪ್ರಯತ್ನ ಮಾಡಿದ್ದಾರೆ. ಕೊನೆಗೆ, ಮಂಗಳವಾರ ಸಂಜೆ ಮೆದುಳು ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದ್ದು, ಅಂಗಾಂಗ ದಾನ ಮಾಡುವ ಬಗ್ಗೆ ಕುಟುಂಬಸ್ಥರಿಗೆ ಸಲಹೆ ಮಾಡಿದ್ದಾರೆ. ಮಗನನ್ನು ಕಳಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನಕ್ಕೆ ಒಪ್ಪಿದ್ದು, ಅದರಂತೆ ರಾಜ್ಯ ಸರಕಾರದ ಜೀವ ಸಾರ್ಥಕತೆ ತಂಡದವರು ಅಂಗಾಂಗ ಕಸಿಗೆ ಏರ್ಪಾಡು ಮಾಡಿದ್ದಾರೆ. ಕಿಡ್ನಿ, ಲಿವರನ್ನು ತೆಗೆದು ನಾಲ್ಕು ಗಂಟೆಯ ಒಳಗೆ ಇನ್ನೊಬ್ಬರಿಗೆ ಕಸಿ ಮಾಡಬೇಕಿರುವುದರಿಂದ ಅದನ್ನು ತುರ್ತಾಗಿ ಒಯ್ದು ಅಳವಡಿಸುವುದು ಸವಾಲಾಗಿರುತ್ತದೆ.
ಹೀಗಾಗಿ ಅಗತ್ಯವುಳ್ಳವರು ಮೊದಲೇ ಬೇಡಿಕೆ ಸಲ್ಲಿಸಿದ್ದರೆ, ಅಂಥವರ ಲಿಸ್ಟ್ ಆಧರಿಸಿ ಜೀವ ಸಾರ್ಥಕತೆ ತಂಡದವರು ಫೈನಲ್ ಮಾಡುತ್ತಾರೆ. ಬೇಡಿಕೆ ಆಧರಿಸಿ ಲಿವರನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೆಎಂಸಿ ಆಸ್ಪತ್ರೆಗೆ ಒಯ್ಯಲು ವ್ಯವಸ್ಥೆ ಮಾಡಿದ್ದರೆ, ಒಂದು ಕಿಡ್ನಿ ಮತ್ತು ಎರಡು ಕಣ್ಣುಗಳನ್ನು ಉಡುಪಿ ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ. ಬೆಂಗಳೂರಿಗೆ ಒಯ್ಯಲು ನಗರದಿಂದ ಬಜ್ಪೆ ಏರ್ಪೋರ್ಟಿಗೆ ಝೀರೋ ಟ್ರಾಫಿಕ್ ಮಾಡಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಒಯ್ದು ಲಿವರ್ ಕಸಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೂ ಝೀರೋ ಟ್ರಾಫಿಕಲ್ಲಿ ಒಯ್ಯಲಾಗಿದೆ. ಮತ್ತೊಂದು ಕಿಡ್ನಿಯನ್ನು ಇಂಡಿಯಾನ ಆಸ್ಪತ್ರೆಯಲ್ಲಿಯೇ ಬೇರೊಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ.
ಯಶರಾಜ್ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು ಇನ್ನೊಬ್ಬಳು ತಂಗಿ ಐದನೇ ಕ್ಲಾಸ್ ಕಲಿಯುತ್ತಿದ್ದಾಳೆ. ಯಶರಾಜ್ ಅಕಾಲಿಕ ಮರಣ ಹೆತ್ತವರು, ಸಂಬಂಧಿಕರನ್ನು ಶೋಕದಲ್ಲಿ ಮುಳುಗಿಸಿದ್ದು, ಅಂಗಾಂಗ ಕಸಿ ಮಾಡುವ ಸಂದರ್ಭದಲ್ಲೂ ಸ್ನೇಹಿತರು, ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದರು. ಒಬ್ಬನ ಜೀವ ಉಳಿಸುವಲ್ಲಿ ಅಂಗಾಂಗ ಕಸಿ ಪ್ರಧಾನ ಪಾತ್ರ ವಹಿಸುತ್ತದೆ. ಕಣ್ಣುಗಳನ್ನು ಸಾವಿನ ಬಳಿಕವೂ ಆರು ಗಂಟೆ ಒಳಗೆ ತೆಗೆದು ಇನ್ನೊಬ್ಬನಿಗೆ ಕಸಿ ಮಾಡಬಹುದಾಗಿದ್ದರೆ, ಇತರೇ ಅಂಗಗಳನ್ನು ವ್ಯಕ್ತಿ ಜೀವಂತ ಇರುವಾಗಲೇ ತೆಗೆದು ಕಸಿ ಮಾಡಬೇಕಿರುತ್ತದೆ. ಹೀಗಾಗಿ ಬ್ರೈನ್ ಡೆಡ್ ಸಂದರ್ಭದಲ್ಲಿ ಜೀವ ಸಾರ್ಥಕತೆ ಅನ್ನುವ ಯೋಜನೆಯಡಿ ಅಂಗಾಂಗ ಕಸಿಯನ್ನು ರಾಜ್ಯ ಸರಕಾರದಿಂದಲೇ ಮಾಡಲಾಗುತ್ತಿದೆ.
Mangalore Viral organs of youth from ullal who was brian dead transported to Bangalore via zero traffic. Yasraj a PUC student who had a fall from the bus was admitted in Indiana hospital and later was declared brian dead. The family later then decided to donate the organs which will now save many lives.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm