ಬ್ರೇಕಿಂಗ್ ನ್ಯೂಸ್
18-09-22 10:04 pm Mangalore Correspondent ಕರಾವಳಿ
ಪುತ್ತೂರು, ಸೆ.18 : ದೇಶದಲ್ಲಿ ನಶಿಸುತ್ತಿರುವ ಚಿರತೆ ಸಂತತಿಯನ್ನು ಬೆಳೆಸುವ ನಿಟ್ಟಿನಲ್ಲಿ ನಮೀಬಿಯಾದಿಂದ ಭಾರತಕ್ಕೆ ಎಂಟು ಚೀತಾಗಳನ್ನು ತರಿಸಲಾಗಿದೆ. ಚಿರತೆಗಳ ದಂಡಿನ ಜೊತೆಗೆ ಪಶುವೈದ್ಯರ ತಂಡವೊಂದು ಬಂದಿದ್ದು ಆ ಪೈಕಿ ಡಾ.ಸನತ್ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರು.
ಡಾ.ಸನತ್‌ಕೃಷ್ಣ ಅವರು ದಿ.ಕೇಶವ ಭಟ್ ಮುಳಿಯ ಮತ್ತು ಉಷಾ ದಂಪತಿಯ ಪುತ್ರ. ಅವರ ಪತ್ನಿ ಡಾ.ಪ್ರಿಯಾಂಕಾ ಜಾಸ್ತಾ ಅವರೂ ಪಶುವೈದ್ಯೆಯಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯು ಹಾಗೂ ಪದವಿ ಶಿಕ್ಷಣ ಪಡೆದ ಬಳಿಕ ಸನತ್ ಕೃಷ್ಣ ಅವರು ಬೆಂಗಳೂರಿನಲ್ಲಿ ಪಶು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಈ ಹಿಂದೆ ಅವರು ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಆಫ್ರಿಕಾದಲ್ಲಿ ಅಧ್ಯಯನ ನಡೆಸಿ, ಅಲ್ಲಿ ಕೆಲಕಾಲ ಪಶು ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.
ಹುಲಿಗಳಿಗೆ ಹಾಗೂ ಇತರ ವನ್ಯಜೀವಿಗಳಿಗೆ ರೇಡಿಯೊ ಕಾಲರ್ ಅಳವಡಿಕೆ, ಸ್ಮೃತಿ ತಪ್ಪಿಸುವ ಚುಚ್ಚುಮದ್ದು ನೀಡುವಿಕೆ ಸೇರಿದಂತೆ ಅನೇಕ ಪ್ರಮುಖ ಕಾರ್ಯ ಯೋಜನೆಗಳಲ್ಲಿ ಹಿಂದೆಯೂ ಭಾಗವಹಿಸಿದ್ದರು. ಮುಂದಿನ ತಿಂಗಳು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಹುಟ್ಟೂರಿಗೆ ಮರಳಲಿದ್ದಾರೆ ಸನತ್‌ಕೃಷ್ಣ ಅವರ ಚಿಕ್ಕಪ್ಪ ತಿಳಿಸಿದ್ದಾರೆ.
ಸದ್ಯಕ್ಕೆ ನವದೆಹಲಿಯ ನ್ಯಾಷನಲ್ ಝೂವಾಲಾಜಿಕಲ್ ಪಾರ್ಕ್‌ನಲ್ಲಿ ಸಹಾಯಕ ಪಶು ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಖುಷಿ ಹಂಚಿಕೊಂಡ ಡಾ.ಸನತ್‌ಕೃಷ್ಣ ಮುಳಿಯ ಅವರ ಸಂಬಂಧಿ, ಗುತ್ತಿಗಾರು ಗ್ರಾಮದ ಕೇಶವ ಭಟ್ ಮುಳಿಯ, ‘ಇದು ದೇಶಕ್ಕೆ ಹೆಮ್ಮಯ ಕ್ಷಣ. ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಪಶುವೈದ್ಯರು ನಮ್ಮ ರಾಜ್ಯದವರು ಎಂಬುದು ಹೆಮ್ಮೆ ಪಡುವ ವಿಷಯ ಎಂದು ತಿಳಿಸಿದ್ದಾರೆ.
A veterinarian hailing from Puttur in Dakshina Kannada, Dr Sanath Muliya, was part of the delegation that accompanied the eight cheetahs, including five females and three males, from Namibia that were released by PM Narendra Modi into quarantine enclosures in Kuno National Park in Madhya Pradesh.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm