ಬ್ರೇಕಿಂಗ್ ನ್ಯೂಸ್
19-09-22 10:45 pm Mangalore Correspondent ಕರಾವಳಿ
ಮಂಗಳೂರು, ಸೆ.19 : ವಿಧಾನಸಭೆಯಲ್ಲಿ ಹಿಂದುತ್ವ, ಗೋವುಗಳ ಪರವಾಗಿ ಧ್ವನಿ ಇರುವಂತಾಗಲು ನಮ್ಮ ಕಾರ್ಯಕರ್ತರು ಶಾಸಕರಾಗಬೇಕು. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕನಿಷ್ಠ 25 ಸೀಟನ್ನು ಹಿಂದುತ್ವದ ಹಿನ್ನೆಲೆಯ ಕಾರ್ಯಕರ್ತರಿಗೆ ನೀಡಬೇಕು. ಬಿಜೆಪಿ ಮುಂದೆ ನಾವು ಬೇಡಿಕೆ ಇಟ್ಟಿದ್ದೇವೆ. ಪರಿಗಣಿಸದೇ ಇದ್ದರೆ ನಮ್ಮ ಗುರಿ ನಾವು ನೋಡಿಕೊಳ್ಳುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಮುತಾಲಿಕ್, ಶ್ರೀರಾಮ ಸೇನೆ ರಾಜಕೀಯ ಪಕ್ಷ ಅಲ್ಲ. ಮುತಾಲಿಕ್ ಚುನಾವಣೆ ಸ್ಪರ್ಧೆಯನ್ನೂ ಮಾಡಲ್ಲ. ಆದರೆ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ. ಹಿಂದುತ್ವದ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಸೀಟು ಕೊಡಬೇಕೆಂದು ಆಗ್ರಹ ಇಡುತ್ತೇವೆ ಎಂದರು.

ಬಿಜೆಪಿ ಸರಕಾರದ ನಡೆಯಿಂದ ಹಿಂದು ಸಮಾಜ ರೋಸಿ ಹೋಗಿದೆ. ಈಗಲೇ ನೀವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಧೂಳೀಪಟ ಆಗುತ್ತೀರಿ. 25 ಸೀಟು ಹಿಂದೂ ಕಾರ್ಯಕರ್ತರಿಗೆ ಕೊಡಿ. ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸೀಟನ್ನು ಗೆಲ್ಲಿಸಿಕೊಡುತ್ತೇವೆ. ಕಟ್ಟರ್ ಹಿಂದುತ್ವ ಪರ ನಿಂತಿದ್ದಕ್ಕಾಗಿ ನನ್ನನ್ನು ಬಿಜೆಪಿಯವರು ತಡೆಯುತ್ತಿದ್ದಾರೆ. ಹಿಂದೆ ಕಾಂಗ್ರೆಸ್, ಜೆಡಿಎಸ್ ಸರಕಾರ ಇದ್ದಾಗಲೂ ತಡೆದಿದ್ದಾರೆ. ಇವರಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಅದು ನಮ್ಮಿಂದ ಆಗುವುದಿಲ್ಲ ಎಂದರು.
ಗೋವಾದಲ್ಲಿ ಬಿಜೆಪಿ ಸರಕಾರ ಇದ್ದರೂ ಎಂಟು ವರ್ಷಗಳಿಂದ ನನಗೆ ನಿರ್ಬಂಧ ಹಾಕಿದ್ದಾರೆ. ಇವರಿಗೆ ಹಿಂದುತ್ವದ ಬಗ್ಗೆ ನೈಜ ಕಾಳಜಿ ಇದ್ದರೆ ಅಲ್ಲಿನ ನಿರ್ಬಂಧ ತೆರವು ಮಾಡುತ್ತಿದ್ದರು. ಗೋವಾಕ್ಕೆ ಪಾಕಿಸ್ತಾನದಿಂದ ಬರೋದಲ್ಲ. ನೆರೆಯ ಕರ್ನಾಟಕದಲ್ಲಿರುವ ವ್ಯಕ್ತಿಯನ್ನು ತಡೆಯುತ್ತಾರಂದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.
ಇಸ್ಲಾಂ ಹುಟ್ಟಿನಿಂದಲೇ ಹಿಂಸೆ

ಇಸ್ಲಾಂ ಹುಟ್ಟಿದಾಗಿನಿಂದ ಈ ರೀತಿಯ ಕೊಲೆ, ಹಿಂಸೆ ನಡೆಯುತ್ತಾ ಬಂದಿದೆ. ಇವರು ಬದಲಾಗುತ್ತಿಲ್ಲ. ನಾವು ನೀವು ಇನ್ನು ಸೌಹಾರ್ದದಿಂದ ಇರುವ ಕಾಲ ಮುಗಿದಿದೆ. ಇನ್ನೇನಿದ್ದರು ನಮ್ಮ ನಿಮ್ಮ ನಡುವೆ ಸಂಘರ್ಷ ಅಷ್ಟೇ ಇರುತ್ತದೆ. ಹಿಂದೂ ಸಮಾಜ ಇದಕ್ಕೆ ಉತ್ತರ ಕೊಡಲು ಮರೆಯಲ್ಲ ಎಂದು ಹೇಳಿದ ಅವರು, ಪ್ರವೀಣ್ ಪ್ರಕರಣದಲ್ಲಿ ಎನ್.ಐ.ಎ ತನಿಖೆಯಿಂದ ನ್ಯಾಯ ಸಿಗುತ್ತೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಪರೇಶ್ ಮೇಸ್ತ ಪ್ರಕರಣವನ್ನು ಎನ್.ಐ.ಎ ಗೆ ನೀಡಿದ್ದರು. ಆದರೆ ಎನ್.ಐ.ಎ ತಂಡದ ನಿರ್ಲಜ್ಜ, ನೀಚರು ಪರೇಶ್ ಮೇಸ್ತಾ ಮನೆಗೂ ಭೇಟಿ ನೀಡಿಲ್ಲ. ಪ್ರವೀಣ್ ಹತ್ಯೆಯಲ್ಲಿ ಪಿ.ಎಫ್.ಐ, ಎಸ್.ಡಿ.ಪಿ.ಐ ದೇಶದ್ರೋಹಿ ಸಂಘಟನೆ ಭಾಗಿಯಾಗಿದೆ. ಹೀಗಾಗಿ ಇವರ ಮೇಲೆ ಕೋಕಾ ಕಾಯ್ದೆ ಹಾಕಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮಾತು ಕೇಳಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ

ರಾತ್ರಿ ವೇಳೆ ಧ್ವನಿವರ್ಧಕ ನಿಷೇಧದಿಂದಾಗಿ ಕರಾವಳಿಯಲ್ಲಿ ಯಕ್ಷಗಾನ, ನಾಟಕ, ದೇವಸ್ಥಾನದ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ ಎಂಬ ಪ್ರಶ್ನೆಗೆ, ಇದು ಕಾನೂನು ಜಾರಿ ಮಾಡಿದ್ದು ಸುಪ್ರೀಂ ಕೋರ್ಟ್, ಮುತಾಲಿಕ್ ಅಲ್ಲ. ಆದೇಶ ಆಗಿ 15 ವರ್ಷ ಆದರೂ, ಅದನ್ನು ಜಾರಿಗೆ ತಂದಿಲ್ಲ. ಮುಸ್ಲಿಮರು ಸುಪ್ರೀಂ ಕೋರ್ಟಿಗೂ ನಮಗೂ ಸಂಬಂಧವಿಲ್ಲ ಎಂಬ ನೀಚ, ನಿರ್ಲಜ್ಜ ಹೇಳಿಕೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮಾತು ಕೇಳಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ನಿಮ್ಮ ನಮಾಝ್ ಗೆ ನಮ್ಮ ವಿರೋಧವಿಲ್ಲ, ಆದರೆ ಸುತ್ತಮುತ್ತಲಿನ ಜನರ ಕಿವಿ ಕಚ್ಚುವ ಶಬ್ದಕ್ಕೆ ಮಾತ್ರ ನಮ್ಮ ವಿರೋಧ ಇದೆ. ಕೋರ್ಟ್ ಅಲ್ಲ, ಕುರಾನೇ ನಮ್ಮ ಕಾನೂನು ಎಂಬ ಸೊಕ್ಕಿನ ಮಾತನ್ನು ನಾವು ಒಪ್ಪಲ್ಲ. ನಮ್ಮ ಹೋರಾಟದ ಕಾರಣ 25 ಶೇ. ಆಝಾನ್ ಸದ್ದು ನಿಂತಿದೆ. ಇದಕ್ಕೆ ಕಾರಣವಾಗಿದ್ದು ಶ್ರೀರಾಮ ಸೇನೆಯ ಹೋರಾಟ ಎಂದರು ಮುತಾಲಿಕ್.
Our workers should become MLAs so that there is a voice in favour of Hindutva and cows in the Assembly. For that, at least 25 seats should be given to workers from Hindutva background in the next elections. We have made a demand before the BJP. If not considered, we will take care of our goal," Said Pramod Muthalik, founder of Sri Ram Sene.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm