ಬ್ರೇಕಿಂಗ್ ನ್ಯೂಸ್
22-09-22 11:12 am Mangalore Correspondent ಕರಾವಳಿ
ಮಂಗಳೂರು, ಸೆ.22: ಮಂಗಳೂರು ನಗರದಲ್ಲಿ ಎನ್ಐಎ ದಾಳಿ ಅಂತ್ಯಗೊಂಡಿದ್ದು ಹಲವು ಮಹತ್ವದ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ. ಮುಂಜಾನೆ 3.30ರ ವೇಳೆಗೆ ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ, ಪಿಎಫ್ಐ ಕಚೇರಿಗೆ ದಾಳಿ ನಡೆಸಿದ್ದರು. ಹತ್ತು ಗಂಟೆ ವೇಳೆಗೆ ದಾಳಿ ಕಾರ್ಯ ಮುಕ್ತಾಯಗೊಳಿಸಿದ್ದು ಅಲ್ಲಿಂದ ತೆರಳಿದ್ದಾರೆ.
ಮಾಹಿತಿ ಪ್ರಕಾರ, ಪಿಎಫ್ ಐ ರಾಜ್ಯ ಕಾರ್ಯದರ್ಶಿ ಆಗಿರುವ ಮಂಗಳೂರಿನ ಎಕೆ ಅಶ್ರಫ್, ಪಿಎಫ್ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು, ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಮೊಯಿದ್ದೀನ್ ಹಳೆಯಂಗಡಿ ಎಂಬವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ನೂರಕ್ಕೂ ಹೆಚ್ಚು ಮಂದಿಯನ್ನು ಕಾವೂರು, ಜೋಕಟ್ಟೆ, ಮಂಗಳೂರಿನಲ್ಲಿ ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ಆನಂತರ ಬಿಡುಗಡೆಗೊಳಿಸಿದ್ದಾರೆ.
ಮಂಗಳೂರಿನ ಮೂರು ಕಡೆ ಎನ್ಐಎ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಾಳಿ ನಡೆದಿದ್ದರೆ, ಇತರ ಐದು ಕಡೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ. ವಿಟ್ಲ, ಬಂಟ್ವಾಳದಲ್ಲಿಯೂ ಪೊಲೀಸರು ಪಿಎಫ್ಐ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಮಂಗಳೂರಿನ ಎಸ್.ಡಿ.ಪಿ.ಐ, ಪಿ.ಎಫ್.ಐ ಕಚೇರಿಯಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಕಚೇರಿಯಲ್ಲಿ ದಾಖಲೆಗಳಿಗಾಗಿ ಅಧಿಕಾರಿಗಳು ಜಾಲಾಡಿದ್ದಾರೆ. ಕಚೇರಿ ಒಳಗೆ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಚೇರಿ ಮುಂಭಾಗದ ಗಾಜು ಒಡೆದು ಹಾಕಿರುವುದಾಗಿ ಎಸ್.ಡಿ.ಪಿ.ಐ ನಾಯಕರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬುಬಕ್ಕರ್ ಕುಳಾಯಿ, ರಾಜಕೀಯ ಪಕ್ಷದ ಕಚೇರಿಯೊಂದಕ್ಕೆ ಈ ರೀತಿ ದಾಳಿ ನಡೆಸಿದ್ದು ಖಂಡನೀಯ. ಎನ್ ಐಎ ಅಧಿಕಾರಿಗಳು ಮುಂಜಾನೆ 3.30 ರ ವೇಳೆಗೆ ಕಚೇರಿಗೆ ಬಂದಿದ್ದಾರೆ ಎಂದು ನನಗೆ 5 ಗಂಟೆಯ ವೇಳೆಗೆ ಮಾಹಿತಿ ಲಭ್ಯವಾಗಿದೆ. ಎನ್ ಐ ಅಧಿಕಾರಿಗಳು ಪಿಎಫ್ಐ ಕಚೇರಿಗೆ ದಾಳಿ ಮಾಡುವ ಸಲುವಾಗಿ ಬಂದಿದ್ದರು. ಆದರೆ ನಮ್ಮ ಕಚೇರಿಯೂ ಹತ್ತಿರದಲ್ಲಿದ್ದ ಕಾರಣ ನಮ್ಮ ಕಚೇರಿಗೂ ದಾಳಿ ಮಾಡಿದ್ದಾರೆ. ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ, ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಪಡೆದುಕೊಂಡು ಹೋಗಿದ್ದಾರೆ. ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಪಕ್ಷದ ಸಂಬಂಧಿಸಿದ ಕೆಲವು ಫೋಟೋಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
NIA raid on SDPI, PFI office, houses in Mangalore, Three including PFI leader AK Ashraff taken to custody. Sleuths of NIA raided the offices of SDPI and PFI in the city, early in the morning on Thursday September 22
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
27-09-23 05:08 pm
HK News Desk
Anand Mahindra, Case Against: ಸ್ಕಾರ್ಪಿಯೋ ಅಪಘಾ...
26-09-23 07:44 pm
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
27-09-23 10:42 pm
Mangalore Correspondent
Indian Coast Guard Mangalore: ಸಮುದ್ರ ಮಧ್ಯೆ ಮೀ...
27-09-23 10:01 pm
Mangalore Bus Protest, Assult: ಪ್ರಯಾಣಿಕ - ಬಸ್...
27-09-23 12:57 pm
Mangalore, Tempo driver suicide: ಬಾವಿಗೆ ಹಾರಿ...
27-09-23 12:31 pm
Indiana Hospital, arrest: ಇಂಡಿಯಾನ ಆಸ್ಪತ್ರೆಯಲ್...
26-09-23 02:24 pm
27-09-23 11:09 pm
HK News Desk
Mangalore Police, Kadri: ಗಂಡ - ಹೆಂಡ್ತಿ ಜಗಳ ;...
27-09-23 11:26 am
Mangalore OTP Fraud, Sub Registrar office Bio...
26-09-23 10:44 pm
Kerala, drug dealer trains dogs: ನಾಯಿ ಸಾಕಣೆ ಕ...
26-09-23 07:20 pm
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm