ಬ್ರೇಕಿಂಗ್ ನ್ಯೂಸ್
29-09-22 07:10 pm Mangalore Correspondent ಕರಾವಳಿ
ಮಂಗಳೂರು, ಸೆ.29: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಒಡೆತನದಲ್ಲಿದ್ದ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಖರೀದಿಸಿದ್ದು, ಭವಿಷ್ಯದಲ್ಲಿ ಇವುಗಳ ಆಡಳಿತವನ್ನು ಕೆನರಾ ಸಂಸ್ಥೆಗಳೇ ನೋಡಿಕೊಳ್ಳಲಿವೆ.
ಮೇರಿಹಿಲ್ ಕೊಂಚಾಡಿಯಲ್ಲಿ 2012ರಲ್ಲಿ ವಿಕಾಸ್ ಪಿಯು ಕಾಲೇಜು ಮತ್ತು ಹಾಸ್ಟೆಲ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಆನಂತರ ವಿಕಾಸ್ ಕಾಲೇಜಿನಲ್ಲಿ ಪದವಿ ಕೋರ್ಸನ್ನೂ ಆರಂಭಿಸಲಾಗಿತ್ತು. ಮಂಗಳೂರಿನ ಸುವ್ಯವಸ್ಥಿತ ಪಿಯು ಕಾಲೇಜು ಎಂಬ ಗರಿಮೆಯನ್ನೂ ವಿಕಾಸ್ ಕಾಲೇಜು ಪಡೆದಿತ್ತು. ಏರ್ಪೋರ್ಟ್ ರಸ್ತೆಯಲ್ಲೇ ಕಾಲೇಜು ಕಟ್ಟಡ ಇದ್ದುದರಿಂದ ಅತ್ಯಲ್ಪ ಅವಧಿಯಲ್ಲಿ ಪ್ರಸಿದ್ಧಿಯನ್ನೂ ಪಡೆದಿತ್ತು.

ಹಾಗೆ ನೋಡಿದರೆ, 1993ರಲ್ಲಿಯೇ ವಿಕಾಸ್ ಎಜುಕೇಶನ್ ಟ್ರಸ್ಟನ್ನು ಕೃಷ್ಣ ಪಾಲೆಮಾರ್ ಸ್ಥಾಪಿಸಿದ್ದರು. 1994ರಿಂದ ವಿಕಾಸ್ ಹೆಸರಿನಲ್ಲಿ ಫಿಸಿಯೋಥೆರಪಿ ಶಿಕ್ಷಣವನ್ನೂ ಆರಂಭಿಸಲಾಗಿತ್ತು. ಫಿಸಿಯೋಥರೆಪಿಯ ವಿವಿಧ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ನೀಡುವ ಉಪಕ್ರಮ ನಡೆದು ಬಂದಿತ್ತು. ಆನಂತರ ಪಿಯು ಮತ್ತು ಪದವಿ ಕಾಲೇಜುಗಳನ್ನು ತೆರೆಯಲಾಗಿತ್ತು. ಸುಸಜ್ಜಿತ ಕಟ್ಟಡ ಮತ್ತು ಮೂಲಸೌಕರ್ಯಗಳಿದ್ದ ವಿಕಾಸ್ ಶಿಕ್ಷಣ ಸಂಸ್ಥೆಯನ್ನೀಗ ಅಧಿಕೃತವಾಗಿ ಮಂಗಳೂರಿನ ಪ್ರತಿಷ್ಠೆಯ ಸಂಕೇತವಾಗಿರುವ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ವಿಲೀನ ಮಾಡಲಾಗಿದೆ. ಕೃಷ್ಣ ಪಾಲೆಮಾರ್ ಮತ್ತು ಕೆನರಾ ಹೈಸ್ಕೂಲ್ ಸಂಸ್ಥೆಗಳ ಟ್ರಸ್ಟಿಗಳ ಪ್ರಮುಖರು ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಇನ್ನು ವಿಕಾಸ್ ಎಜುಕೇಶನ್ ಟ್ರಸ್ಟ್ ನಿಂದ ನಿರ್ವಹಿಸುತ್ತಿದ್ದ ಪದವಿ ಪೂರ್ವ, ಪದವಿ ಮತ್ತು ಫಿಸಿಯೋಥೆರಪಿ ಕಾಲೇಜುಗಳ ಸಂಪೂರ್ಣ ಆಡಳಿತ, ನಿರ್ವಹಣೆ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ಕಾರ್ಯಗಳು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿಯ ಮೂಲಕವೇ ನಡೆಯಲಿದೆ ಎಂದು ಅದರ ಟ್ರಸ್ಟಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mangalore popular Vikas college is now taken over by Canara college group of Institutions. Vikas Pre University College is an educational institution run by Vikas Education Trust, in Mangalore, Karnataka, India. This college was established by the trust in the year 2012. The trust founded by Sri Krishna J Palemar who is a social activist and was also a Minister in B. S.Yediyurappa's Cabinet.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
12-06-26 10:48 pm
HK News Desk
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
ನಾಳೆ ಕೊಲ್ಲೂರು ದೇಗುಲಕ್ಕೆ ಸಿಎಂ ವಿಜಯ್ ಭೇಟಿ ; ಮಧ್...
11-06-26 06:37 pm
12-06-26 11:58 am
HK News Staffer
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm