ಬ್ರೇಕಿಂಗ್ ನ್ಯೂಸ್
02-11-22 06:17 pm Mangalore Correspondent ಕರಾವಳಿ
ಮಂಗಳೂರು, ನ.2: ಸುರತ್ಕಲ್ ಟೋಲ್ ಗೇಟ್ ತೆಗೆಸುವ ಬಗ್ಗೆ ಕೇಂದ್ರ ಸಾರಿಗೆ ಸಚಿವರೇ ಹೇಳಿದ್ದಾರೆ. ರಾಜ್ಯದ ವಿಧಾನಸಭೆಯಲ್ಲೂ ಲೋಕೋಪಯೋಗಿ ಸಚಿವರು ಟೋಲ್ ಗೇಟ್ ಅಕ್ರಮ, ತೆರವು ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಇದೇ ಸಂಸದ ನಳಿನ್ ಕುಮಾರ್ ಟೋಲ್ ತೆರವು ಮಾಡುವುದಕ್ಕೆ ಎಷ್ಟು ಬಾರಿ ಡೇಟ್ ಕೊಟ್ಟಿಲ್ಲ. ಹೇಳಿದ ಕೆಲಸ ಮಾಡಲಾಗದ ವ್ಯಕ್ತಿ ಸಂಸದನಾಗಿ ಇರುವುದು ಯಾಕೆ ಎಂದು ಶಾಸಕ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ವೇಳೆ, ಟೋಲ್ ಗೇಟನ್ನು ಆಸ್ಕರ್ ಮಾಡಿದ್ದು, ಕಾಂಗ್ರೆಸ್ ನವರು ಮಾಡಿದ್ದಾಗಿ ಸಂಸದ ನಳಿನ್ ಕುಮಾರ್ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಸರಕಾರ ಇದ್ದಾಗ ಹೆಜಮಾಡಿ, ತಲಪಾಡಿಯ ಟೋಲ್ ಆಗಿತ್ತಾ.. ಹೆಜಮಾಡಿ ಟೋಲ್ ಗೇಟ್ ಶುರುವಾದ ಬಳಿಕ ಸುರತ್ಕಲ್ ಟೋಲನ್ನು ವಿಲೀನ ಮಾಡುವುದಾಗಿ ಹೇಳಿಕೊಂಡು ಬಂದಿದ್ದು ಯಾರು.. ನಾವಾ ಸಂಸದರಾ.. ಈಗ ಇನ್ನೊಬ್ಬರು ಮಾಡಿದ್ದಾಗಿ ಹೇಳುವುದು ಪಲಾಯನವಾದ. ಶಾಸಕರು, ಸಂಸದರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡುವುದು. ನಾವು ಪ್ರತಿಪಕ್ಷವಾಗಿ ಟೋಲ್ ಗೇಟ್ ತೆರವು ಮಾಡುವಂತೆ ಆಗ್ರಹ ಮಾಡುತ್ತೇವೆ. ಇವರಿಗೆ ಕನಿಷ್ಠ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಜೊತೆಗೆ ಮಾತನಾಡಲಿಕ್ಕೂ ಆಗಲ್ಲವೇ.. ಇವರಿಗೆ ಮಾತನಾಡಲು ಆಗಲ್ಲ ಅಂದ್ರೆ, ಸಾರಿಗೆ ಸಚಿವ ಗಡ್ಕರಿ ಜೊತೆಗೆ ಮೀಟಿಂಗ್ ಏರ್ಪಡಿಸಲಿ. ಸಮಸ್ಯೆ ಆಗಿರುವ ಟೋಲ್ ಗೇಟ್ ಬಗ್ಗೆ ಹೋರಾಟಗಾರರೇ ಮಾತನಾಡಿ, ಒಂದು ನಿರ್ಧಾರಕ್ಕೆ ಬರುತ್ತಾರೆ. ಕೈಲಾಗದವರು ಇನ್ನೊಬ್ಬರ ಮೇಲೆ ಬೆರಳು ತೋರಿಸುತ್ತಾರೆ, ಇದು ತಕ್ಕುದಲ್ಲ. ಜನ ಗಮನಿಸುತ್ತಾರೆ ಎಂದು ಹೇಳಿದರು.
ಟೋಲ್ ಗೇಟ್ ತೆರವು ಮಾಡೋಕೆ ಆಗಿಲ್ಲಾಂದ್ರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿ ಗಡ್ಕರಿ ಜೊತೆಗೆ ಮೀಟಿಂಗ್ ಏರ್ಪಡಿಸುವ ಕೆಲಸವನ್ನು ಶಾಸಕನಾಗಿ ಮಾಡುತ್ತೇನೆ. ಯಾಕೆ ಆಗಲ್ಲ ಅಂತ ನೋಡುತ್ತೇನೆ ಎಂದು ಯುಟಿ ಖಾದರ್, ಸಂಸದ ನಳಿನ್ ಕುಮಾರ್ ಗೆ ಟಾಂಗ್ ಇಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಬಯಲಿಗೆಳೆಯುತ್ತೇವೆ, ಅವರು ಜೈಲಿಗೆ ಹೋಗುತ್ತಾರೆ ಎಂದು ನಳಿನ್ ಕುಮಾರ್ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, ಸಿದ್ದರಾಮಯ್ಯ ಕಾಲದ್ದು ಯಾಕೆ, ಅದಕ್ಕೂ ಹಿಂದಿನ 2004ರಿಂದಲೇ ತನಿಖೆ ನಡೆಸಲಿ. ನಾವು ಯಾರೂ ಬೇಡ ಅಂದಿಲ್ಲ. ಇವರು ಬಾಯಲ್ಲಿ ಹೇಳೋದಲ್ಲ, ಮಾಡಿ ತೋರಿಸಲಿ. ಕಳೆದ ಬಾರಿ ಇದೇ ರೀತಿ ಹಿಂದಿನ ಸರಕಾರದಲ್ಲಿ ಶಿಕ್ಷಕರ ನೇರ ನೇಮಕಾತಿ ಆಗಿದೆಯೆಂದು ಗುಲ್ಲೆಬ್ಬಿಸಿದ್ದರು. ನಾವು ತನಿಖೆ ಮಾಡಿ ಎಂದಿದ್ದೆವು. ತನಿಖೆ ನಡೆಸಿದಾಗ, ಯಡಿಯೂರಪ್ಪ ಕಾಲದಲ್ಲಿ 9 ಶಿಕ್ಷಕರಲ್ಲಿ ಏಳು ಮಂದಿಯನ್ನು ಯಾವುದೇ ಪರೀಕ್ಷೆ ಇಲ್ಲದೆ, ನೇರವಾಗಿ ನೇಮಕಾತಿಗೆ ಆದೇಶ ಮಾಡಿದ್ದರು. ಇವರೇ ಸಿಕ್ಕಿಬಿದ್ದಿದ್ದರು. ಹೀಗಾಗಿ ಯಾವುದೇ ಪ್ರಕರಣದ ಬಗ್ಗೆಯೂ ತನಿಖೆ ಎದುರಿಸುವುದಕ್ಕೆ ನಾವು ಸಿದ್ಧರಿದ್ದೇವೆ, ಬಿಜೆಪಿ ನಾಯಕರು ಸಿದ್ಧರಿದ್ದಾರಾ ಎಂದು ಕೇಳಿದರು.
ತನಿಖೆ ನಡೆಸಿದರೆ ಇವರದ್ದೇ ಹುಳುಕು ಹೊರಗೆ ಬರುತ್ತದೆ. ಇವರಿಗೆ ಮಾಡಕ್ಕೆ ಕೆಲಸ ಇಲ್ಲ. ಕೆಂಪೇಗೌಡರ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಹೇಳುವುದು ಬಿಟ್ಟು ಟಿಪ್ಪು ಬಗ್ಗೆ ಹೇಳುತ್ತಾರೆ. ಕೆಂಪೇಗೌಡರ ಬಗ್ಗೆ ಗೊತ್ತಿರಬೇಕಲ್ಲ. ಇನ್ನೇನೋ ಮಾತಾಡ್ತಾರೆ, ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದವರು ಅಂತಲೂ ಗೊತ್ತಿದೆಯೋ ಇಲ್ಲವೋ ಎಂದು ನಳಿನ್ ಕುಮಾರ್ ಬಗ್ಗೆ ವ್ಯಂಗ್ಯವಾಡಿದರು.
Mangalore Surathkal toll gate closure as per law, says Nalin; MLA Khader slams MP Nalin Kateel for not keeping up with his promise.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm