ಬ್ರೇಕಿಂಗ್ ನ್ಯೂಸ್
12-09-25 03:04 pm HK News Desk ಕರ್ನಾಟಕ
ಮಂಡ್ಯ, ಸೆ.12 : ರಾಜ್ಯದಲ್ಲಿ ಹೊಸ ಹಿಂದೂ ಪಾರ್ಟಿ ಕಟ್ಟುತ್ತೇನೆ. ಮುಂದಿನ ಬಾರಿ ಮಂಡ್ಯ, ಮೈಸೂರಿಗೆ ಪ್ರವಾಸ ಮಾಡ್ತೀನಿ. ಪ್ರತಾಪ್ ಸಿಂಹ ನಾವೆಲ್ಲಾ ಒಂದಾಗುತ್ತೇವೆ, ಹೊಸ ಸರ್ಕಾರ ತರುತ್ತೇವೆ. ಬಿಜೆಪಿ ಗೌರವಯುತವಾಗಿ ತೆಗೆದುಕೊಳ್ಳದಿದ್ರೆ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ. ಆ ಪಕ್ಷದ ಗುರುತು ಜೆಸಿಬಿ. ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ. ಅಕ್ರಮವಾಗಿ ಕಟ್ಟಿದ ಮಸೀದಿಗಳ ಕಲಾಶ್ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಯತ್ನಾಳ ಪರವಾಗಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ಯತ್ನಾಳ ಪ್ರಚೋದನಕಾರಿ ಭಾಷಣ ಮಾಡಿದ್ದಲ್ಲದೆ, ಮುಂದಿನ ಚುನಾವಣೆಗೆ ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದಾರೆ. ಹಿಂದೂಗಳೆಲ್ಲಾ ಜಾತಿ ರಾಜಕಾರಣ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿ. ಹಿಂದೂಗಳ ಪರವಾಗಿ ಹೋರಾಡುವವನು ಮುಂದಿನ ಕರ್ನಾಟಕದ ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರು ಡಮಾರ್ ಆಗುತ್ತಾರೆ. ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ಹಿಂದೂಗಳ ದಾನ ಹಿಂದೂಗಳ ದೇವಾಲಯ ಅಭಿವೃದ್ಧಿಗೆ ಮಾತ್ರ ಮೀಸಲಿರಬೇಕು ಎಂದು ಕಾನೂನು ತರುತ್ತೇನೆ. ಪಾಕಿಸ್ತಾನ್ ಜೈ ಎಂದು ಧ್ವಜ ಹಾರಿಸಿದ್ರೆ ಅಲ್ಲೇ ಎನ್‌ಕೌಂಟರ್ ಮಾಡಿಸ್ತೀನಿ. ಪಾಕ್ ವಿಭಜನೆ ವೇಳೆ ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿರುವ ಹಿಂದೂಗಳು ಭಾರತಕ್ಕೆ ಕರೆತರಬೇಕು ಎಂದಿದ್ರು ಅಂಬೇಡ್ಕರ್. ಮದ್ದೂರಿನ ಘಟನೆ ನೋಡಿದ್ರೆ ಅಂಬೇಡ್ಕರ್ ಹೇಳಿದ್ದು ಸತ್ಯ ಎನಿಸುತ್ತದೆ. ಮೃತರ ಮೆರವಣಿಗೆ ವೇಳೆ ತಮಟೆ ಬಾರಿಸಲು ಮಸೀದಿ ಮುಂದೆ ಬಿಡಲ್ಲ, ದೇವರ ಮೆರವಣಿಗೆ ಮಾಡಲು ಬಿಡಲ್ಲ ಅಂದ್ರೇನು. ಇವರ ಈದ್ ಮೆರವಣಿಗೆ ಮಾಡಲು ನಾವು ಬಿಡಲ್ಲ ಅಂದ್ರೆ ಏನಾದೀತು. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ. 2028ಕ್ಕೆ ಎಲ್ಲರೂ ವಿಧಾನಸೌದದ ಮುಂದೆ ಭಗವಧ್ವಜ ತರ್ತೀರಾ? ನನ್ನ ಕರ್ನಾಟಕ ಸಿಎಂ ಮಾಡ್ರೀರಾ? ಎಂದು ಕೇಳಿದರು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಆಡಳಿತ ಕರ್ನಾಟಕದಲ್ಲಿ ಬರಲಿದೆ. ಹಿಂದೂಗಳ ಪರವಾಗಿದ್ದವನಿಗೆ ಓಟ್ ಹಾಕಿ. ನಮ್ಮ ಸರ್ಕಾರ ಇದ್ದಾಗ ನನ್ನ ಮಂತ್ರಿ ಮಾಡಲಿಲ್ಲ. ನಾನು ಗೃಹಮಂತ್ರಿ ಇದ್ದಿದ್ರೆ ಇವರ ಬಾಯಲ್ಲಿ ಗುಂಡು ಹಾಕುತ್ತಿದ್ದೆ. ಮುಂದಿನ ಸಲ ಮದ್ದೂರಿಗೆ ಬರ್ತೀನಿ, ಆ ಮಸೀದಿ ಮುಂದೆ ಒಂದು ಗಂಟೆ ಕುಣಿಯೋಣ.
ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ರೀತಿ ಆಡಳಿತ ತರುವುದು ನನ್ನ ಗುರಿ. ಹಿಂದೂಗಳ ಪರವಾಗಿ ಗಟ್ಟಿ ಮಾತಾಡ್ತೀನಿ ಎಂದು ನೀವೆಲ್ಲಾ ನನಗಾಗಿ ಬಂದಿದ್ದೀರಿ. ಇನ್ಮುಂದೆ ಹಿಂದೂಗಳ ಪರವಾಗಿ ನಿಲ್ಲುವವರನ್ನ ಮಾತ್ರ ಗೆಲ್ಲಿಸಿ. ಗಲಾಟೆಗೆ ಕಾರಣವಾದ ಮುಸ್ಲಿಂ ಗೂಂಡಾಗಳನ್ನ ಬಂಧಿಸಿ. ಇಲ್ಲ ಮದ್ದೂರು ಜನಾನೇ ಬುದ್ದಿ ಕಲಿಸುತ್ತಾರೆ. ಮುಸ್ಲಿಮರೇ ಮಾಡಿದ್ದಾರೆ ಎಂದು
ಚಲುವರಾಯಸ್ವಾಮಿ ಹೇಳಿದ್ದಾರೆ. ಅವರಿಗೂ ಗೊತ್ತಿದೆ ಮಂಡ್ಯ ಬಿಡಲ್ಲ ಎಂದು. ಶಾಸಕ, ಸಚಿವ ಯಾರೇ ಆದರೂ ಮುಸ್ಲಿಂ ಆಗಿ ಹುಟ್ಬೇಕು ಅಂದ್ರೆ ಈಗಲೇ ಆಗಿಬಿಡಿ ತಾಯಿಗಂಡರ. 72 ಕನ್ಯೆಯಿರುವ ಸ್ವರ್ಗ ಸಿಗುತ್ತದೆ ನಿಮಗೆಲ್ಲಾ. ಇಲ್ಲಿರುವ ಬದಲು ಜನ್ನತ್‌ಗೆ ಹೋಗಿಬಿಡಿ ಎಂದರು.
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡ ಸಿಟಿ ರವಿ ಮತ್ತು ಯತ್ನಾಳ ವಿರುದ್ಧ ಮಂಡ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ.
In a highly provocative speech delivered in Maddur, BJP MLA Basanagouda Patil Yatnal declared his intent to launch a new Hindu-centric political party if the BJP fails to give him due respect. “If BJP doesn't treat us with dignity, I will start a Karnataka Hindu Party. Our symbol will be the JCB,” he announced amid loud cheers from the crowd.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm