ಬ್ರೇಕಿಂಗ್ ನ್ಯೂಸ್
06-11-22 10:48 pm Mangalore Correspondent ಕರಾವಳಿ
ಮಂಗಳೂರು, ನ.6: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನೆಪದಲ್ಲಿ ಕಲ್ಲಡ್ಕದ ಜನರಿಗೆ ಧೂಳು ಹಿಡಿಸಿರೋದು, ಆ ಭಾಗದಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಧೂಳಿನ ಭಾಗ್ಯ ಕರುಣಿಸಿರುವುದು, ಈ ಬಗ್ಗೆ ಭಾರೀ ಟೀಕೆ, ಟಿಪ್ಪಣಿ ಆಗಿರೋದು ಚರ್ಚೆಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದೇ ವೇಳೆ ಕೇರಳದಲ್ಲಿಯೂ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ. ಕರ್ನಾಟಕ ಗಡಿಭಾಗ ತಲಪಾಡಿಯಿಂದ ಹಿಡಿದು ಕೇರಳದ ರಾಜಧಾನಿ ತಿರುವನಂತಪುರದ ವರೆಗೂ ಏಕಕಾಲದಲ್ಲಿ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಆದರೆ ಕರ್ನಾಟಕದ ಕಲ್ಲಡ್ಕ- ಉಪ್ಪಿನಂಗಡಿ ಹೆದ್ದಾರಿಯ ಸ್ಥಿತಿಗೂ, ಕೇರಳದ ಕಾಸರಗೋಡಿನಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೂ ಅಜಗಜಾಂತರ ವ್ಯತ್ಯಾಸ.
ಐದು ವರ್ಷ- ಅರ್ಧ ಕಾಮಗಾರಿಯೂ ಆಗಿಲ್ಲ
ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ -75ರ ಕಾಮಗಾರಿ 2017ರಲ್ಲಿಯೇ ಆರಂಭಗೊಂಡಿತ್ತು. ಮೊದಲಿಗೆ ಎಲ್ ಅಂಡ್ ಟಿ ಕಂಪನಿಯು ಕಾಮಗಾರಿ ಗುತ್ತಿಗೆ ವಹಿಸ್ಕೊಂಡು ಉಪ್ಪಿನಂಗಡಿ, ಪೆರ್ನೆ ಭಾಗದಲ್ಲಿ ವೇಗದ ಕೆಲಸ ನಡೆದಿತ್ತು. ಆರೇ ತಿಂಗಳಲ್ಲಿ ಗುಡ್ಡಗಳನ್ನು ಸಮತಟ್ಟು ಮಾಡಿ, ಪರ್ಯಾಯ ರಸ್ತೆಯನ್ನೂ ಮಾಡಿತ್ತು. ಆದರೆ ಕರ್ನಾಟಕ ಸರಕಾರದ ಭೂಸ್ವಾಧೀನ ವಿಳಂಬ ಆಗಿದ್ದರಿಂದ ಎಲ್ ಅಂಡ್ ಟಿ ಕಾಮಗಾರಿಯನ್ನೇ ಬಿಟ್ಟು ಹೊರ ನಡೆದಿತ್ತು. ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ ಬಳಿಕ 2021ರಲ್ಲಿ ಮತ್ತೆ ಕೆಆರ್ ಕನ್ಸ್ ಟ್ರಕ್ಷನ್ ಎನ್ನುವ ಹೊಸತೊಂದು ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಯನ್ನೂ ತುರ್ತಾಗಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕಲ್ಲಡ್ಕದಲ್ಲಿ ಒಂದು ವರ್ಷದಿಂದಲೂ ಅಗೆಯುವುದು, ರಸ್ತೆ ಸಮತಟ್ಟು ಮಾಡುವುದು, ಫ್ಲೈ ಓವರ್ ಪಿಲ್ಲರ್ ಹಾಕುವುದರಲ್ಲೇ ಕೆಲಸ ಸಾಗಿದೆ. ಈ ನಡುವೆ, ಪಿಲ್ಲರ್ ಅರೆಬರೆ ಕಾಮಗಾರಿಯಿಂದಾಗಿ ರಾತ್ರಿ ವೇಳೆ ಕುಸಿದು ಬಿದ್ದಿರುವುದೂ ನಡೆದಿತ್ತು. ಪರ್ಯಾಯ ರಸ್ತೆಯನ್ನು ಮಾಡದೇ ಇರುವುದರಿಂದ ಬಿಸಿಲಿಗೆ ಧೂಳು, ಮಳೆ ಬಂದರೆ ಕೆಸರು. ಹೊಂಡ ಗುಂಡಿಯಿಂದಾಗಿ ಅಲ್ಲಿನ ವಾಹನ ಸವಾರರ ಪರದಾಟವಂತೂ ಹೇಳತೀರದು. ದ್ವಿಚಕ್ರ ಸವಾರರಂತೂ ಕಲ್ಲಡ್ಕದಿಂದ ಉಪ್ಪಿನಂಗಡಿ ವರೆಗೆ ಹೋಗುವಂತೆಯೇ ಇಲ್ಲ ಅನ್ನುವ ಸ್ಥಿತಿಯಾಗಿದೆ.


ಕಲ್ಲಡ್ಕದಲ್ಲಿ ಧೂಳಿನ ಭಾಗ್ಯ, ನರಕಯಾತನೆ
ದಿನಕ್ಕೆ ಮೂರು ಬಾರಿ ನೀರು ಚಿಮುಕಿಸುವುದನ್ನು ಮಾಡುತ್ತಿದ್ದರೂ, ಸಾವಿರಾರು ವಾಹನಗಳು ಸಾಗುವುದರಿಂದ ಧೂಳು ಎದ್ದು ಎದುರಿನ ವಾಹನ ಕಾಣದಾಗಿದೆ. ಸಂಚಾರಕ್ಕೆ ಪರ್ಯಾಯ ರಸ್ತೆ ಮಾಡದಿರುವುದರಿಂದ ದಯನೀಯ ಸ್ಥಿತಿ ಎದುರಾಗಿದೆ. ರಸ್ತೆಯ ಮಧ್ಯೆ ಹೊಂಡ ಬಿದ್ದಿರುವುದರಿಂದ ಅಲ್ಲಿ ಸಾಗುವುದೇ ದುಸ್ತರವಾಗಿದೆ. ಈ ಬಗ್ಗೆ ಜನರು ಯಾರನ್ನು ದೂರುವುದೆಂದೇ ತಿಳಿಯದೆ ಕಂಗಾಲಾಗಿದ್ದಾರೆ. ಇದರ ನಡುವೆ, ವೇಗದೂತ ಬಸ್ ಗಳಲ್ಲಿ ಪ್ರಯಾಣಿಕರು ಸಂಚಾರದ ಸಂದರ್ಭ ಕೈಕಾಲಿಗೆ ಗಾಯ ಮಾಡಿಕೊಂಡವರೂ ಇದ್ದಾರೆ. ಇತ್ತೀಚೆಗೆ ಕಲ್ಲಡ್ಕದಲ್ಲಿ ಹಿಂಬದಿ ಪ್ರಯಾಣದಲ್ಲಿದ್ದ ವ್ಯಕ್ತಿಯೊಬ್ಬರು ಸೊಂಟ ಮುರಿತಕ್ಕೊಳಗಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೂ, ರಾಷ್ಟ್ರೀಯ ಹೆದ್ದಾರಿ ಸರಿ ಮಾಡಲಾಗದ್ದನ್ನು ಇದು ಡಬಲ್ ಇಂಜಿನ್ ಸರಕಾರದ ಕೊಡುಗೆ, ಧೂಳಿನ ಭಾಗ್ಯ ಎನ್ನುವ ಟೀಕೆಯನ್ನು ಪ್ರಯಾಣಿಕರು ಮಾಡುತ್ತಿದ್ದಾರೆ. ಕಲ್ಲಡ್ಕದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದರೂ, ಅಲ್ಲಿಯೂ ವಾಹನ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಜೆಸಿಬಿ, ಕ್ರೇನ್ ಕೆಲಸ ಮಾಡುತ್ತಿರುವಂತೆಯೇ ವಾಹನಗಳು ಅದರೆಡೆಯಲ್ಲಿ ಸಾಗಬೇಕು. ಇದರಿಂದಾಗಿ ಬಿಸಿ ರೋಡಿನಿಂದ ಉಪ್ಪಿನಂಗಡಿ ವರೆಗಿನ 45 ಕಿಮೀ ಉದ್ದದ ರಸ್ತೆಯ ಸಂಚಾರ ಎನ್ನುವುದೇ ನರಕ ಯಾತನೆ ಎನ್ನುವಂತಾಗಿದೆ.


ತಲಪಾಡಿ- ಕಾಸರಗೋಡು ರಸ್ತೆ ಮಾದರಿ
ತಲಪಾಡಿಯಿಂದ ತಿರುವನಂತಪುರ ವರೆಗಿನ 630 ಕಿಮೀ ಉದ್ದದ ಹೆದ್ದಾರಿಯನ್ನು 20 ಪ್ಯಾಕೇಜ್ ಗಳನ್ನಾಗಿಸಿ ಸುಮಾರು 50 ಸಾವಿರ ಕೋಟಿ ವೆಚ್ಚದಲ್ಲಿ ಚತುಷ್ಪಥ ಮಾಡಲಾಗುತ್ತಿದೆ. ತಲಪಾಡಿಯಿಂದ ಕಾಸರಗೋಡಿನ ಚೆಂಗಳದ ವರೆಗಿನ 39 ಕಿಮೀ ರಸ್ತೆಯನ್ನು ರೂ. 1981 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಕರ್ನಾಟಕದ ಗಡಿಭಾಗ ತಲಪಾಡಿಯಿಂದ ಆಚೆ ಹೋಗಿ ನೋಡಿದರೆ, ಅಲ್ಲಿನ ರಸ್ತೆ ಕಾಮಗಾರಿ ಯಾವ ರೀತಿ ನಡೆಯುತ್ತಿದೆ ಅನ್ನುವುದು ಕಾಣುತ್ತದೆ. ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳು ಸಾಗುತ್ತಿರುವಾಗಲೇ ಯಾವುದೇ ಧೂಳಿನ ಸಮಸ್ಯೆ ಇಲ್ಲದಂತೆ ಹೊಸ ರಸ್ತೆ ಮಾಡಲಾಗುತ್ತಿದೆ. ರಸ್ತೆ ಅಗೆಯುವಲ್ಲಿ ಧೂಳು ಹರಡದಂತೆ ಪರದೆ ಹಾಕಿರುವುದು ಕಂಡುಬರುತ್ತದೆ. ಎರಡು ರಸ್ತೆಗಳ ಮಧ್ಯೆ ಕಾಂಕ್ರೀಟ್ ತಡೆಗೋಡೆಯನ್ನೂ ಹಾಕಲಾಗಿದೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಕಿರಿ ಕಿರಿ ಇಲ್ಲದೆ ವ್ಯವಸ್ಥಿತವಾಗಿ ಚತುಷ್ಪಥ ರಸ್ತೆ ಮಾಡಲಾಗುತ್ತಿದೆ. ವಿಶೇಷ ಅಂದ್ರೆ, ಒಂದೇ ಬಾರಿಗೆ ತಲಪಾಡಿಯಿಂದ ಕಾಸರಗೋಡಿನ ವರೆಗೂ ಕಾಮಗಾರಿ ನಡೆದಿದ್ದು ಕೆಲಸ ಶುರುವಾದ ಏಳೆಂಟು ತಿಂಗಳಲ್ಲಿ ಅರ್ಧ ಕಾಮಗಾರಿ ಪೂರ್ತಿಗೊಂಡಿದೆ.



ಡಬಲ್ ಇಂಜಿನ್ ಇಲ್ಲದ ಕಡೆ ವ್ಯವಸ್ಥಿತ ರಸ್ತೆ
ಈ ಬಗ್ಗೆ ಮಂಜೇಶ್ವರದ ಹೊಸಂಗಡಿ ನಿವಾಸಿ, ಮಂಗಳೂರಿನಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ಶರಣ್ ಮಾತು ಕರ್ನಾಟಕ ಸರಕಾರಕ್ಕೆ ಚಾಟಿ ಬೀಸುವಂತಿದೆ. ಕರ್ನಾಟಕದಲ್ಲಿ ಇದ್ದ ಹಾಗೆ ಕೇರಳದಲ್ಲಿ ಡಬಲ್ ಇಂಜಿನ್ ಸರಕಾರ ಇಲ್ಲ. ಕೇರಳದಲ್ಲಿ ಬಿಜೆಪಿಯ ಬದ್ಧ ವಿರೋಧಿ ಎಡರಂಗದ ಆಡಳಿತ ಇದೆ. ಹಾಗಿದ್ದರೂ, ಕೇಂದ್ರ ಸರಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅತ್ಯಂತ ಸುವ್ಯವಸ್ಥಿತವಾಗಿ ಕೆಲಸದಲ್ಲಿ ತೊಡಗಿದೆ. ಭೂಸ್ವಾಧೀನ ಪರಿಹಾರದ 25 ಶೇ. ವೆಚ್ಚವನ್ನು ಕೇರಳ ಸರಕಾರವೇ ಭರಿಸುತ್ತಿರುವುದರಿಂದ ಕಾಮಗಾರಿಯ ಬಗ್ಗೆಯೂ ನಿಗಾ ಇಟ್ಟಿದೆ. ಭೂಸ್ವಾಧೀನದ ತಕರಾರು ಅರ್ಜಿ ಕೋರ್ಟಿನಲ್ಲಿದ್ದರಿಂದ ಚತುಷ್ಪಥ ಕಾಮಗಾರಿಯನ್ನು ಹತ್ತು ವರ್ಷ ತಡವಾಗಿ ಮಾಡುತ್ತಿದ್ದರೂ, ಅತಿ ವೇಗದಲ್ಲಿ ಕೆಲಸ ಸಾಗುತ್ತಿದೆ ಎನ್ನುತ್ತಾರೆ, ಶರಣ್. ಕೇರಳ ಭಾಗದಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರೋಡ್ ಮಾಡುತ್ತಿರುವುದು ಗಮನ ಸೆಳೆಯುತ್ತದೆ.


ಕರಾವಳಿಯಲ್ಲಿ ನಾಲ್ಕು ಏಜನ್ಸಿ, ಟೋಲ್ ಸುಲಿಗೆ
ಕರ್ನಾಟಕದ ತಲಪಾಡಿಯಿಂದ ಗೋವಾ ಗಡಿಭಾಗದ ವರೆಗಿನ 300 ಕಿಮೀ ಉದ್ದಕ್ಕೆ ನಾಲ್ಕು ಏಜನ್ಸಿಗಳು ಹೆದ್ದಾರಿ ಗುತ್ತಿಗೆ ಪಡೆದಿವೆ. ತಲಪಾಡಿಯಿಂದ ಮಂಗಳೂರಿನ ನಂತೂರು ಮತ್ತು ಎನ್ಐಟಿಕೆ ಸುರತ್ಕಲ್ ನಿಂದ ಕುಂದಾಪುರ ವರೆಗಿನ ರಸ್ತೆಯನ್ನು ನವಯುಗ ಕಂಪನಿಯವರು ಮಾಡುತ್ತಿದ್ದಾರೆ. ಬಿಸಿರೋಡಿನಿಂದ ನಂತೂರು ಮೂಲಕ ಸುರತ್ಕಲ್ ಎನ್ಐಟಿಕೆ ವರೆಗಿನ ರಸ್ತೆಯನ್ನು ಇರ್ಕಾನ್ ಕಂಪನಿ ನಡೆಸಿದ್ದು, ಅದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿದೆ. ಕುಂದಾಪುರದಿಂದ ಗೋವಾ ಗಡಿಯ ವರೆಗಿನ ರಸ್ತೆಯನ್ನು ಐಆರ್ ಬಿ ವೆಸ್ಟ್ ಕೋಸ್ಟ್ ಟೋಲ್ ವೇ ಕಂಪನಿಯವರು ನಿರ್ವಹಿಸುತ್ತಿದ್ದು, ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಆದರೆ ಟೋಲ್ ಸುಲಿಗೆ ಮಾತ್ರ ಯಥಾಸ್ಥಿತಿ.



ಸರ್ವಿಸ್ ರಸ್ತೆ, ಅಂಡರ್ ಪಾಸ್ ಎಲ್ಲೂ ಇಲ್ಲ
ಕರ್ನಾಟಕದ 300 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಯಾವುದೇ ಕಡೆ ಸರಿಯಾದ ಸರ್ವಿಸ್ ರಸ್ತೆ ಇಲ್ಲ. ಜಂಕ್ಷನ್ ಗಳಲ್ಲಿ ಅಂಡರ್ ಪಾಸ್ ಮಾಡಿಲ್ಲ. ಜಂಕ್ಷನ್ ಇರುವಲ್ಲಿ ಹೆದ್ದಾರಿಗೇ ಅಡ್ಡಲಾಗಿ ಬ್ಯಾರಿಕೇಡ್ ಇಡಲಾಗಿದ್ದು, ಕೆಲವು ಕಡೆ ಹಂಪ್ಸ್ ಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ಸ್, ಬ್ಯಾರಿಕೇಡ್ ಇಡಲು ಅವಕಾಶ ಇಲ್ಲದಿದ್ದರೂ, ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ ಯಾವುದೇ ಕಡೆಯೂ ಇದನ್ನು ಪಾಲನೆ ಮಾಡಲಾಗಿಲ್ಲ. ಹೀಗಾಗಿ ಕಾಮಗಾರಿಯ ಗುಣಮಟ್ಟವೇ ಕಳಪೆಯಾಗಿದ್ದು, ವಾಹನ ಸವಾರರು ಜಂಕ್ಷನ್ ಇರುವಲ್ಲಿ ಸರಾಗವಾಗಿ ತೆರಳಲು ಅಸಾಧ್ಯವಾಗಿದೆ ಎಂದು ದೂರುತ್ತಾರೆ, ಪ್ರಯಾಣಿಕರು.



ಹೆದ್ದಾರಿ ಎಡವಟ್ಟು- ಜನಪ್ರತಿನಿಧಿಗಳ ನಿರ್ಲಕ್ಷ್ಯ
ಕುಂದಾಪುರದಿಂದ ಗೋವಾ ಗಡಿಯ ವರೆಗಿನ ರಸ್ತೆ ಅರೆಬರೆ ಅಷ್ಟೇ ಪೂರ್ತಿಯಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ ಮತ್ತು ಅಂಕೋಲದಲ್ಲಿ ಹೆದ್ದಾರಿ ಅಗಲೀಕರಣವೇ ಆಗಿಲ್ಲ. ಹಾಗಿದ್ದರೂ, ಈ ಭಾಗದಲ್ಲಿ ಎಲ್ಲ ಕಡೆಯೂ ಟೋಲ್ ಸಂಗ್ರಹ ಆರಂಭಗೊಂಡಿದ್ದು, ಮಂಗಳೂರಿನಿಂದ ನೇರವಾಗಿ ಗೋವಾಕ್ಕೆ ಸಂಚರಿಸುವವರು ಅಲ್ಲಿ ರಸ್ತೆ ಸರಿಯಿಲ್ಲದಿದ್ದರೂ ಶುಲ್ಕ ಕಟ್ಟಬೇಕಾದ ಪ್ರಮೇಯ ಇದೆ. ಇಷ್ಟೆಲ್ಲ ಎಡವಟ್ಟು, ಭಾನಗಡಿಗಳಿದ್ದರೂ, ರಾಜ್ಯ ಸರಕಾರದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಆಯಾ ಭಾಗದ ಸಂಸದರೂ ಚಿತ್ತ ಹರಿಸಿಲ್ಲ. ಹೀಗಾಗಿ ಡಬಲ್ ಇಂಜಿನ್ ಸರಕಾರದಲ್ಲಿ ಜನರಿಗೆ ಧೂಳಿನ ಭಾಗ್ಯವಷ್ಟೇ ಉಚಿತ ಎನ್ನುವ ಟೀಕೆ ಪ್ರಯಾಣಿಕರು, ವಾಹನ ಸವಾರರಿಂದ ಕೇಳಿಬಂದಿದೆ.
The National Highway Authority of India (NHAI) has not ensured the project area is safely secured, particularly the 2-km flyover stretch at Kalladka town in Bantwal taluk, while executing the four-lane work of Mangaluru-Bengaluru NH 75 between B.C. Road and Periyashanthi (Dharmasthala Cross) .
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm