ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ; ಬಿಎಲ್‌ಓ, ಅಂಚೆ ಅಧಿಕಾರಿಗಳು ಶಾಮೀಲು ; ಆಮ್ ಆದ್ಮಿ ಪಕ್ಷ ಆರೋಪ 

22-11-22 08:11 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇತ್ತೀಚೆಗೆ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಸಾವಿರಾರು ಮಂದಿಯ ಹೆಸರು ಕಣ್ಮರೆ ಪ್ರಕರಣದಲ್ಲಿ ಬಿಎಲ್‌ಒ ಮತ್ತು ಅಂಚೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ಮಂಗಳೂರು, ನ.22 : ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇತ್ತೀಚೆಗೆ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಸಾವಿರಾರು ಮಂದಿಯ ಹೆಸರು ಕಣ್ಮರೆ ಪ್ರಕರಣದಲ್ಲಿ ಬಿಎಲ್‌ಒ ಮತ್ತು ಅಂಚೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ನಗರದ ಜ್ಯೋತಿ ಬಳಿಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಜಿಲ್ಲೆಯ ಮತದಾರರ ಪಟ್ಟಿಯಿಂದ ಅನೇಕ ಮಂದಿಯ ಹೆಸರು ಡಿಲೀಟ್ ಆಗಿದೆ. ಉದ್ದೇಶಪೂರ್ವಕ ಈ ಕೆಲಸ ಮಾಡಲಾಗಿದ್ದು ಕೃತ್ಯದಲ್ಲಿ ಬಿಎಲ್‌ಒ ಮತ್ತು ಅಂಚೆ ಇಲಾಖೆಯವರು ಕೂಡ ಶಾಮೀಲಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಈಶ್ವರ್‌ರಾಜ್ ಮಾತನಾಡಿ ನಗರ ಹೊರವಲಯದ ಅರ್ಕುಳ ಗ್ರಾಮದ ಮೇರ್ಲಪದವಿನಲ್ಲಿ ಅಂಚೆ ಇಲಾಖೆಯವರು ಶಾಮೀಲಾಗಿ ನಿರ್ದಿಷ್ಟ ಮತದಾರರ ಪಟ್ಟಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ನಗರದ ಮಂಗಳಾದೇವಿ ವಾರ್ಡ್ ಸಮಿತಿಯಲ್ಲಿ ತಾನು ಸದಸ್ಯನಾಗಿರಬಾರದು ಎಂಬ ಏಕೈಕ ಕಾರಣಕ್ಕೆ ತನ್ನ ಹೆಸರನ್ನೇ ಪಟ್ಟಿಯಿಂದ ಕಿತ್ತು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗ, ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್, ಮುಖಂಡ ಸ್ಟೀಫನ್ ಪಿಂಟೋ, ಆಮ್ ಆದ್ಮಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ   ಅಝ್ಫರ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.

Thousands of voters names go missing from voters list slams Aam Admi party makes serious allegations in Mangalore.