ಬ್ರೇಕಿಂಗ್ ನ್ಯೂಸ್
11-02-26 04:22 pm HK News Desk ದೇಶ - ವಿದೇಶ
ವಿಶಾಖಪಟ್ಟಣಂ, ಫೆ.11 : ಹಗಲಿನಲ್ಲಿ ನಿಯತ್ತಾಗಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ ರಾತ್ರಿ ವೇಳೆ ಮನೆಗಳಲ್ಲಿ ನುಗ್ಗಿ ಕಳತನ ಮಾಡುತ್ತಿದ್ದ ಹೈದರಾಬಾದ್ ಮೂಲದ ಟೆಕ್ಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಾಕಿನಾಡದ ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ ಬಂಧಿತ ಆರೋಪಿ.
ಈತ ಸುಮಾರು 26 ಮನೆ ಕಳ್ಳತನಗಳಲ್ಲಿ ಭಾಗಿಯಾಗಿದ್ದು , 15 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಕದ್ದ ಮಾಲನ್ನು ವಶಪಡಿಸಿದ್ದೇವೆ ಎಂದು ವಿಶಾಖಪಟ್ಟಣಂ ಉಪ ಪೊಲೀಸ್ ಆಯುಕ್ತೆ ಕೆ. ಲತಾ ಮಾಧುರಿ ತಿಳಿಸಿದ್ದಾರೆ. ತಾಂತ್ರಿಕ ಪುರಾವೆಗಳು ಮತ್ತು ಸಿಸಿಟಿವಿ ವಿಶ್ಲೇಷಣೆಯ ಆಧಾರದ ಮೇಲೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 699 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿ, ಕದ್ದ ಹಣದಿಂದ ಖರೀದಿಸಿದ ಬಿಎಂಡಬ್ಲ್ಯೂ ಕಾರು ಮತ್ತು ಮನೆ ದರೋಡೆಗೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಪರಾಧ ಸ್ಥಳದಲ್ಲಿ ಬೆರಳಚ್ಚು ಅಥವಾ ಯಾವುದೇ ಇತರ ಪುರಾವೆಗಳನ್ನು ಬಿಡದಂತೆ ಜಾಣತನದಿಂದ ಕಳ್ಳತನ ಮಾಡುತ್ತಿದ್ದ. ಆರೋಪಿ ಹಗಲಿನ ವೇಳೆಯಲ್ಲಿ ಏರಿಯಾಗಳಿಗೆ ಹೋಗಿ ತಪಾಸಣೆ ನಡೆಸಿ, ರಾತ್ರಿ ಸಮಯದಲ್ಲಿ ಖಾಲಿ ಮನೆಗಳಿಗೆ ನುಗ್ಗುತ್ತಿದ್ದ. ಅಪರಾಧಗಳಿಗೆ ಬಳಸಲಾದ ದ್ವಿಚಕ್ರ ವಾಹನವು ಮಹೇಶ್ ಎಂಬ ವ್ಯಕ್ತಿಗೆ ಸೇರಿದ್ದೆಂದು ಪೊಲೀಸರು ಪತ್ತೆ ಮಾಡಿದ್ದರು.
ಅ.14 ರಂದು ಗಾಜುವಾಕದ ನಿವಾಸಿಯೊಬ್ಬರು ತಮ್ಮ ಕುಟುಂಬ ಸಮೇತ ಹೊರಗೆ ಹೋಗಿದ್ದಾಗ ಅವರ ಮನೆಯಲ್ಲಿ ಕಳತನ ನಡೆದಿತ್ತು. ಈ ಬಗ್ಗೆ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಗಾಜುವಾಕ, ಅರಿಲೋವಾ, ಮಲ್ಕಪುರಂ, ಪೆಂಡುರ್ತಿ ಮತ್ತು ದುವ್ವಾಡ ಪ್ರದೇಶಗಳಲ್ಲಿ ಇದೇ ರೀತಿಯ ಕಳ್ಳತನಗಳು ನಡೆದಿದ್ದವು ಎಂದು ಮಾಧುರಿ ಹೇಳಿದರು. ವಿಶಾಖಪಟ್ಟಣ ನಗರ ವ್ಯಾಪ್ತಿಯಲ್ಲಿ 26 ಪ್ರಕರಣಗಳು ದಾಖಲಾಗಿವೆ.
ಕಳವು ಪ್ರಕರಣಗಳಲ್ಲಿ 1 ಕೆಜಿಗೂ ಹೆಚ್ಚು ಚಿನ್ನ, ಸುಮಾರು 6,333 ಗ್ರಾಂ ಬೆಳ್ಳಿ ಮತ್ತು 40,500 ರೂ. ಮೌಲ್ಯದ ನಗದು ಕಳವು ಮಾಡಿದ್ದ ಎಂದು ಅಂದಾಜಿಸಲಾಗಿದೆ.
A Hyderabad-based software engineer, Achhi Mahesh Reddy alias Sunny, has been arrested for allegedly committing 26 house burglaries across Visakhapatnam. Police recovered 699 grams of gold, 3.8 kg of silver, a BMW car purchased using stolen money, and burglary tools. The accused reportedly surveyed neighborhoods during the day and targeted locked homes at night, carefully avoiding fingerprints or evidence. Cases were registered across multiple police station limits in the city.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am