15 ವರ್ಷಗಳ ಹಿಂದೆಯೇ ಕರಾವಳಿ ಉಗ್ರರ ಆಡುಂಬೊಲ ; ಮುಜಾಹಿದೀನ್ ಜಾಗದಲ್ಲಿ ಬೇರುಬಿಟ್ಟಿದೆ ಐಸಿಸ್ ನೆಟ್ವರ್ಕ್ !

22-11-22 10:58 pm       Mangalore Correspondent   ಕರಾವಳಿ

ಕರ್ನಾಟಕ ಕರಾವಳಿ ಉಗ್ರರ ಪಾಲಿಗೆ ಸ್ಲೀಪರ್ ಸೆಲ್ ಅಂತಲೇ ಗುರುತಿಸಿಕೊಂಡಿದ್ದ ಪ್ರದೇಶ. ಕಳೆದ 15-20 ವರ್ಷಗಳಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಕರಾವಳಿಗೆ ನಂಟು ಇದ್ದಿರುವುದು ತನಿಖೆಯಲ್ಲಿ ಕಂಡುಬಂದಿತ್ತು.

ಮಂಗಳೂರು, ನ.22 : ಕರ್ನಾಟಕ ಕರಾವಳಿ ಉಗ್ರರ ಪಾಲಿಗೆ ಸ್ಲೀಪರ್ ಸೆಲ್ ಅಂತಲೇ ಗುರುತಿಸಿಕೊಂಡಿದ್ದ ಪ್ರದೇಶ. ಕಳೆದ 15-20 ವರ್ಷಗಳಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಕರಾವಳಿಗೆ ನಂಟು ಇದ್ದಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಆದರೆ ಕಳೆದ ಐದಾರು ವರ್ಷಗಳಲ್ಲಿ ಇಡೀ ದೇಶದಲ್ಲಿ ಬಹುತೇಕ ಉಗ್ರರ ಉಪಟಳ ಕಡಿಮೆಯಾಗಿತ್ತು. ಇಂಡಿಯನ್ ಮುಜಾಹಿದೀನ್ ಉಗ್ರರ ಜಾಲದ ಕೈಗಳನ್ನು ಕತ್ತರಿಸಿದ್ದರಿಂದ ದೊಡ್ಡ ಮಟ್ಟದ ಪ್ರಕರಣಗಳು ನಡೆದಿಲ್ಲ.

ಆದರೆ ಈಗ ಕರಾವಳಿಯ ಉಗ್ರರ ಸ್ಲೀಪರ್ ಸೆಲ್ ನಲ್ಲಿಯೇ ಭಯೋತ್ಪಾದಕ ಕೃತ್ಯ ನಡೆದಿದೆ. ಅದೃಷ್ಟವಶಾತ್, ಬಾಂಬ್ ಜೋಡಣೆಯಲ್ಲಾದ ಎಡವಟ್ಟಿನಿಂದಾಗಿ ಭಾರೀ ದುರಂತ ತಪ್ಪಿದೆ. ಹಾಗೆ ನೋಡಿದರೆ, ಕರಾವಳಿಯಲ್ಲಿ ಈ ಹಿಂದೆ ಇದ್ದ ಇಂಡಿಯನ್ ಮುಜಾಹಿದೀನ್ ಉಗ್ರರ ಸ್ಥಾನವನ್ನು ಐಸಿಸ್ ನೆಟ್ವರ್ಕ್ ಆಕ್ರಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಐಸಿಸ್ ಉಗ್ರರು ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ವರ್ಷದ ಹಿಂದೆ ಐಸಿಸ್ ನಂಟಿನಲ್ಲಿ ಉಳ್ಳಾಲ ಮತ್ತು ಭಟ್ಕಳದಲ್ಲಿ ನಾಲ್ವರನ್ನು ಬಂಧಿಸಿರುವುದು, ಶಿವಮೊಗ್ಗದ ಬಾಂಬ್ ಟ್ರಯಲ್ ಪ್ರಕರಣದ ನಂಟಿನಲ್ಲಿ ಬಂಟ್ವಾಳದ ನಾವೂರಿನಲ್ಲಿ ತನಿಖೆ ನಡೆಸಿರುವುದು ಕರಾವಳಿಯಲ್ಲಿ ಮುಜಾಹಿದೀನ್ ಬದಲಿಗೆ ಐಸಿಸ್ ಫಿದಾಯೀನ್ ಗಳು ಸಕ್ರಿಯಗೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ.

Exclusive: The entrails of Indian Mujahideen, exposed by senior operative  Asadullah Akhtar - India Today

ಮಂಗಳೂರಿನಲ್ಲೇ ಬಾಂಬ್ ತಯಾರಿ ಆಗ್ತಿತ್ತು

ಹತ್ತು ವರ್ಷಗಳ ಹಿಂದೆಯೇ ಕರಾವಳಿಯಲ್ಲಿ ಬಾಂಬ್ ತಯಾರಿ ನಡೆಸುವುದು, ಆನಂತರ ಇಲ್ಲಿಂದ ಸದ್ದಿಲ್ಲದೆ ಬಾಂಬ್ ಸಾಗಿಸಿ ಬೇರೆಡೆ ಸ್ಫೋಟ ನಡೆಸುವುದು ನಡೆದಿತ್ತು. 2013ರಲ್ಲಿ ಇಂಡಿಯನ್ ಮುಜಾಹಿದೀನ್ ಉಗ್ರರಾದ ಯಾಸಿನ್ ಭಟ್ಕಳ್ ಮತ್ತು ಆತನ ಸಹಚರ ಅಸಾದುಲ್ಲಾ ಅಖ್ತರ್ ಮಂಗಳೂರಿನ ಅತ್ತಾವರದ ಖಾಸಗಿ ವಸತಿ ಸಂಕೀರ್ಣದಲ್ಲಿ ಉಳಿದುಕೊಂಡು ಬಾಂಬ್ ತಯಾರಿ ಕೆಲಸ ನಡೆಸುತ್ತಿದ್ದರು. ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಮತ್ತು ದೇಶದ ಇತರ ಕಡೆಗಳಿಗೆ ಇಲ್ಲಿಂದಲೇ ಸ್ಫೋಟಕ ರವಾನೆಯಾಗಿತ್ತು ಎಂಬುದು ಎನ್ಐಎ ತನಿಖೆಯಲ್ಲಿ ಬಹಿರಂಗ ಆಗಿತ್ತು. ಅಲ್ಲದೆ, ಮಂಗಳೂರಿನಲ್ಲಿ ಬಾಂಬ್ ತಯಾರಿ ನಡೆಸುತ್ತಿದ್ದ ಬಗ್ಗೆ ಅಸಾದುಲ್ಲಾ ಅಖ್ತರ್ ತನಿಖೆಯ ವೇಳೆ ಒಪ್ಪಿಕೊಂಡಿದ್ದ. ಯಾಸಿನ್ ಭಟ್ಕಳ್ ಸ್ಫೋಟಕ ತಯಾರಿಗೆ ನೆರವು ಒದಗಿಸುತ್ತಿದ್ದ ಎನ್ನುವುದನ್ನು ತನಿಖೆಯಲ್ಲಿ ತಿಳಿಸಿದ್ದ. 2013ರ ಸೆಪ್ಟಂಬರ್ ತಿಂಗಳಲ್ಲಿ ಎನ್ಐಎ ಅಧಿಕಾರಿಗಳು ರಹಸ್ಯವಾಗಿ ದಾಳಿ ನಡೆಸಿ ಇವರನ್ನು ಬಂಧಿಸಿದ್ದರು.

MITTAL ENT New Stylist Led Digital Watch B-50 Digital Watch - For Boys &  Girls - Buy MITTAL ENT New Stylist Led Digital Watch B-50 Digital Watch -  For Boys & Girls

In a movie, there is a bomb/explosive device. Why don't the characters just  cut all of the wires? - Quora

ಅತ್ತಾವರದ ಮನೆಯಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ 50 ಡಿಜಿಟಲ್ ವಾಚ್ ಗಳು, ಬಾಂಬ್ ಗಳಿಗೆ ಜೋಡಿಸುವ ವೈರ್ ಗಳು, ಕೆಲವು ಸೆಲ್ ಫೋನ್ ಗಳು, 3 ಇಲೆಕ್ಟ್ರಿಕ್ ಡಿಟೋನೇಟರ್ ಗಳು, 125 ಗ್ರಾಮ್ ಅಮೋನಿಯಂ ನೈಟ್ರೇಟ್ ಜೆಲ್, ಬಾಂಬ್ ಸರ್ಕಿಟ್ ವಿವರವುಳ್ಳ ಪುಸ್ತಕವೂ ಪತ್ತೆಯಾಗಿತ್ತು. ಅದೇ ಕಾರಣಕ್ಕೆ ಮಂಗಳೂರನ್ನು ಉಗ್ರರು ಬಾಂಬ್ ಲ್ಯಾಬ್ ಆಗಿ ಮಾಡಿಕೊಂಡಿದ್ದರು ಅನ್ನುವ ಮಾತು ಕೇಳಿಬಂದಿತ್ತು. ಅಸಾದುಲ್ಲಾ ಅಖ್ತರ್ ಮಂಗಳೂರಿನಿಂದಲೇ ಹೈದ್ರಾಬಾದ್ ಗೆ ಸ್ಫೋಟಕ ಸಾಗಿಸಿ ಅಲ್ಲಿ ಸ್ಫೋಟಿಸಿದ್ದು ಸಾಬೀತಾಗಿತ್ತು. ಬಳಿಕ ಮಂಗಳೂರಿಗೆ ವಾಪಸಾಗಿ ಕೆಲವು ದಿನ ಇಲ್ಲಿಯೇ ಇದ್ದು, ಆನಂತರ ಪಲಾಯನ ಮಾಡಿದ್ದ ಅನ್ನುವುದು ತನಿಖೆಯಲ್ಲಿ ಬಹಿರಂಗವಾಗಿತ್ತು.

Top IM man Tehseen Akhtar alias Monu sent to police custody till April 2 -  The Economic Times

Pulwama terror attacker, a school dropout, went missing last yr

ಬಿಹಾರ, ಪಾಕಿಗಳು ಬಾಂಬ್ ಜೋಡಣೆಗೆ ಸಾಥ್

ಅಸಾದುಲ್ಲಾ ಜೊತೆಗೆ ಬಾಂಬ್ ಜೊಡಣೆಗೆ ಬಿಹಾರ ಮತ್ತು ಪಾಕಿಸ್ಥಾನದ ನಿವಾಸಿಗಳಿಬ್ಬರು ಸಾಥ್ ನೀಡಿದ್ದರು. ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ ಬಿಹಾರ ಮೂಲದ ತಹಸೀನ್ ಅಖ್ತರ್ ಯಾನೆ ಮೋನು ಮತ್ತು ಪಾಕಿಸ್ಥಾನ ಮೂಲದ ವಕಾಸ್ ಅಹಮ್ಮದ್ ಎಂಬಿಬ್ಬರು ಮಂಗಳೂರಿನಲ್ಲಿಯೇ ಉಳಿದುಕೊಂಡು ಬಾಂಬ್ ತಯಾರಿಗೆ ಸಹಕರಿಸಿದ್ದರು. ವಕಾಸ್ ಮತ್ತು ತಹಸೀನ್ ಅತ್ತಾವರದ ಫ್ಲಾಟ್ ನಲ್ಲಿ ಬಾಂಬ್ ಸರ್ಕಿಟ್ ಜೋಡಣೆ ಮಾಡುತ್ತಿದ್ದರೆ, ಅದನ್ನು ಅಸಾದುಲ್ಲಾ ಜೋಪಾನವಾಗಿ ದೇಶದ ವಿವಿಧೆಡೆಗೆ ಸಾಗಿಸುತ್ತಿದ್ದ. ತಹಸೀನ್ ಅಖ್ತರ್ ಮೋನು ಮತ್ತು ವಕಾಸ್ ಅವರಿಬ್ಬರೂ 2011ರ ಮುಂಬೈ ಮತ್ತು 2013ರ ಹೈದರಾಬಾದ್ ಸ್ಫೋಟಗಳಲ್ಲಿ ಆರೋಪಿಯಾಗಿದ್ದರು. ಮೋನು ಮತ್ತು ವಕಾಸ್ ಮತ್ತೊಂದು ಬಾಂಬ್ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಸೂತ್ರಧಾರರಾದ ಯಾಸಿನ್ ಭಟ್ಕಳ್ ಮತ್ತು ಅಸಾದುಲ್ಲಾ ಬಂಧಿತರಾಗಿದ್ದರು.

2007 Hyderabad Blasts: Two Indian Mujahideen Operatives Convicted, Two  Acquitted

Hyderabad twin blast case: Two convicts sentenced to death

2008ರಲ್ಲಿ ನಡೆದಿತ್ತು ಟೆರರ್ ಆಪರೇಶನ್

2007ರ ಹೈದರಾಬಾದ್ ಸ್ಫೋಟಕ್ಕೆ ಸಂಬಂಧಿಸಿ 2008ರಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಅಕ್ಬರ್ ಇಸ್ಮಾಯಿಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ಸೋದರರ ಬಗ್ಗೆ ಮಾಹಿತಿ ದೊರಕಿತ್ತು. 2008ರಲ್ಲಿಯೇ ಕೇಂದ್ರೀಯ ತನಿಖಾ ಏಜನ್ಸಿಗಳು ಮತ್ತು ಸ್ಥಳೀಯ ಪೊಲೀಸರು ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆಯಲ್ಲಿ ಪೊಲೀಸರು ದಾಳಿ ನಡೆಸಿ, ಅಲ್ಲಿ ಅವಿತುಕೊಂಡಿದ್ದ ರಿಯಾಜ್ ಭಟ್ಕಳ್ ನನ್ನು ಬಂಧಿಸಿದ್ದರು. ಅಲ್ಲದೆ, ಸ್ಫೋಟಕ ಸಾಮಗ್ರಿಗಳು ಕೂಡ ಪತ್ತೆಯಾಗಿದ್ದವು. ಆ ಸಂದರ್ಭದಲ್ಲಿ ಮಂಗಳೂರಿನ ವಿವಿಧ ಕಡೆ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.

NIA files charge sheet against six accused in targeted killing case |  Deccan Herald

ಮುಜಾಹಿದೀನ್ ಜಾಗದಲ್ಲಿ ಬೇರುಬಿಟ್ಟ ಐಸಿಸ್

ಕಳೆದ 15 ವರ್ಷಗಳಲ್ಲಿ ಮಂಗಳೂರು ಮತ್ತು ಉಗ್ರರ ನೆಟ್ವರ್ಕ್ ಸಾಕಷ್ಟು ಬದಲಾವಣೆ ಆಗಿದೆ. ಹಿಂದೆಲ್ಲಾ ಇಂಡಿಯನ್ ಮುಜಾಹಿದೀನ್ ಹೆಸರಲ್ಲಿ ಉಗ್ರರು ಕರಾವಳಿಯನ್ನು ತಮ್ಮ ಕಾರಸ್ಥಾನ ಮಾಡಿಕೊಂಡಿದ್ದರೆ, ಕಳೆದ ಐದಾರು ವರ್ಷಗಳಲ್ಲಿ ಆ ಸ್ಥಾನವನ್ನು ಐಸಿಸ್ ಆಕ್ರಮಿಸಿದೆ. ಸಿರಿಯಾ ಮೂಲದ ಐಸಿಸ್ ಖೊರಾಸಾನ್ ನೆಟ್ವರ್ಕ್ ಬಗ್ಗೆ ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಮೃದು ಧೋರಣೆ ಇರುವ ಮಂದಿ ಇದ್ದಾರೆ. ಸದ್ದಿಲ್ಲದೆ, ನೆಟ್ವರ್ಕ್ ಅಡಿ ಕಾರ್ಯ ಚಟುವಟಿಕೆ ನಡೆಸುತ್ತಿರುವ ಯುವಕರು ಇದ್ದಾರೆ. ಐಸಿಸ್ ನೆಟ್ವರ್ಕ್ ಸೇರುವ ಮಂದಿಗೆ ಲಕ್ಷಾಂತರ ರೂಪಾಯಿ ಹಣ ಸಂದಾಯ ಆಗುತ್ತಿರುವುದೂ ಎನ್ಐಎ ತನಿಖೆಯಲ್ಲಿ ಕಂಡುಬಂದಿತ್ತು. 2015ರಲ್ಲಿ ಕಾಸರಗೋಡಿನಲ್ಲಿ ನಾಪತ್ತೆಯಾದ 21 ಮಂದಿ ಆಬಳಿಕ ಐಸಿಸ್ ಸೇರಿದ್ದರು ಅನ್ನುವುದೂ ಎನ್ಐಎ ತನಿಖೆಯಲ್ಲಿ ಪತ್ತೆಯಾಗಿತ್ತು.

ಉಳ್ಳಾಲದಲ್ಲಿ ವರ್ಷದ ಹಿಂದೆ ಬಂಧನಕ್ಕೀಡಾಗಿದ್ದ ಮಾಜಿ ಶಾಸಕ ಇದಿನಬ್ಬ ಅವರ ಕುಟುಂಬದ ಇಬ್ಬರು ಸದಸ್ಯರು ಐಸಿಸ್ ಪ್ರೇರಣೆಯಿಂದಲೇ ಮಂಗಳೂರಿನಲ್ಲಿ ಚಟುವಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಎನ್ಐಎ ಅಧಿಕಾರಿಗಳು ನಿಗಾ ಇಟ್ಟಿರುವುದರಿಂದ ಆ ರೀತಿಯ ನೆಟ್ವರ್ಕ್ ಸ್ವಲ್ಪ ಮಟ್ಟಿಗೆ ಪ್ರಭಾವ ಕಳಕೊಂಡಿದೆ. ಇಂಥ ಸಂದರ್ಭದಲ್ಲಿಯೇ ಶಾರೀಕ್ ಎಂಟ್ರಿ ಕೊಟ್ಟಿದ್ದು ಮಂಗಳೂರಿನಲ್ಲಿದ್ದುಕೊಂಡೇ ಭಾರೀ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿ ಕೈಸುಟ್ಟುಕೊಂಡಿದ್ದಾನೆ.

Mangaluru auto blast, 15 years back Mangaluru was a hub for terror activities. Karnataka Chief Minister Basavaraj Bommai on Tuesday said that state police have identified 18 terror sleeper cells and have arrested many persons in this regard. Terrorists are targetting Karnataka and the government has taken this seriously in the interests of the state's security," he added.