ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯಾಪಾರ ನಿಷೇಧ ಬ್ಯಾನರ್ ! 

24-11-22 11:56 am       Mangalore Correspondent   ಕರಾವಳಿ

ಮತ್ತೆ ಕರಾವಳಿಯಲ್ಲಿ ಧರ್ಮ ದಂಗಲ್ ಪ್ರಾರಂಭವಾಗಿದ್ದು, ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ‌ ಉತ್ಸವ ಸಂದರ್ಭ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಬೇಕೆಂದು ಹಿಂದು ಸಂಘಟನೆಗಳು ಬ್ಯಾನರ್ ಹಾಕಿವೆ.‌

ಪುತ್ತೂರು, ನ.23: ಮತ್ತೆ ಕರಾವಳಿಯಲ್ಲಿ ಧರ್ಮ ದಂಗಲ್ ಪ್ರಾರಂಭವಾಗಿದ್ದು, ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ‌ ಉತ್ಸವ ಸಂದರ್ಭ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಬೇಕೆಂದು ಹಿಂದು ಸಂಘಟನೆಗಳು ಬ್ಯಾನರ್ ಹಾಕಿವೆ.‌

ಕುಮಾರಧಾರ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದು ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ರೀತಿಯ ಬ್ಯಾನರ್ ಹಾಕಲಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಬಳಿಕ ಮತ್ತೆ ವ್ಯಾಪಾರ ನಿಷೇಧ, ಧರ್ಮ ದಂಗಲ್ ಜೀವ ಪಡೆದಿದೆ. ಹದಿನೈದು ದಿನಗಳ ಕಾಲ ಷಷ್ಠಿ ಮಹೋತ್ಸವ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಲಿದ್ದಾರೆ. ಇದೀಗ ಈ ಬ್ಯಾನರ್ ಮತ್ತೆ ವಿವಾದಕ್ಕೆ ಕಾರಣವಾಗುವಂತಿದೆ.
 
ಕಳೆದ ಎಪ್ರಿಲ್- ಮೇ ತಿಂಗಳಲ್ಲಿ ಹಿಜಾಬ್ ಕಾರಣಕ್ಕೆ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಧರ್ಮ ದಂಗಲ್ ಅಭಿಯಾನ ನಡೆದಿತ್ತು. ಆನಂತರ ಸ್ವಲ್ಪ ಮಟ್ಟಿಗೆ ಅಭಿಯಾನವೂ ಕಡಿಮೆಯಾಗಿತ್ತು. ಇದೀಗ ಮತ್ತೆ ಚುನಾವಣೆ ಕಾಲದಲ್ಲಿ ವಿಭಜನೆಯ, ದ್ವೇಷ ಹರಡುವ ಧರ್ಮ ದಂಗಲ್ ಅಭಿಯಾನ ಆರಂಭಿಸಿದ್ದಾರೆ.

Hindu Jagarana Vedike puts up poster banning shops and stalls during Champa Shashti at Kukke Subramanya temple in Dakshina Kannada.