ಬ್ರೇಕಿಂಗ್ ನ್ಯೂಸ್
24-11-22 04:14 pm Mangalore Correspondent ಕರಾವಳಿ
ಮಂಗಳೂರು, ನ.24: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಮಂಗಳೂರಿಗೆ ತಲುಪಿದ ಕೂಡಲೇ ಮಣ್ಣಗುಡ್ಡ ಸ್ಥಳದ ಬಗ್ಗೆ ಎರಡು ಬಾರಿ ಲೊಕೇಶನ್ ಟ್ರೇಸ್ ಮಾಡಿದ್ದಾನೆ. ತನಿಖಾ ತಂಡ ಆತನ ಮೊಬೈಲನ್ನು ಚೆಕ್ ಮಾಡಿದಾಗ ಮಹತ್ವದ ಮಾಹಿತಿಗಳು ಹೊರಬಂದಿದ್ದು, ಆತನ ಟಾರ್ಗೆಟ್ ಮಣ್ಣಗುಡ್ಡ ಆಗಿತ್ತೇ ಎನ್ನುವ ಸಂಶಯ ಮೂಡಿದೆ.
ಯಾಕಂದ್ರೆ, ನ.19ರಂದು ಮಣ್ಣಗುಡ್ಡದಲ್ಲಿ ಕನ್ನಡ ಹಬ್ಬ ಅನ್ನುವ ಶಾಲಾ ಮಕ್ಕಳ ಕಾರ್ಯಕ್ರಮ ಇತ್ತು. ಜೊತೆಗೆ, ಅದೇ ಪಕ್ಕದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮವೂ ನಡೆದಿತ್ತು. ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜಿಲ್ಲೆಯ ವಿವಿಧೆಡೆಯಿಂದ ಮಕ್ಕಳು ಸೇರಿದ್ದರು. ಕನ್ನಡ ಶಾಲೆಗಳ ಮಕ್ಕಳನ್ನು ಒಟ್ಟು ಸೇರಿಸಿ ಆರೆಸ್ಸೆಸ್ ಅಧೀನದಲ್ಲಿರುವ ಮಣ್ಣಗುಡ್ಡದ ಸಂಘನಿಕೇತನದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಮಣ್ಣಗುಡ್ಡ ಪಕ್ಕದಲ್ಲೇ ಇರುವ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮ ಏರ್ಪಾಡಾಗಿತ್ತು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಹೆಸರಲ್ಲಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಲಾಗಿತ್ತು.
ಉಗ್ರ ಶಾರೀಕ್ ಮಂಗಳೂರಿಗೆ ಬರುವುದಕ್ಕೂ ಮುನ್ನ ವಿವಿಧ ಕಡೆಯ ಎಂಟತ್ತು ಬಾರಿ ಲೊಕೇಶನ್ ಹುಡುಕಾಟ ನಡೆಸಿದ್ದ. ಎಷ್ಟು ಹೊತ್ತಿಗೆ ಈ ಸ್ಥಳಗಳಿಗೆ ತಲುಪಬಹುದು ಅನ್ನುವ ಬಗ್ಗೆ ಲೆಕ್ಕ ಹಾಕಿದ್ದ. ಆದರೆ ಮೈಸೂರಿನಿಂದ ಮಡಿಕೇರಿ, ಪುತ್ತೂರು ಆಗಿ ಮಂಗಳೂರಿಗೆ ಬಸ್ ತಲುಪಿದಾಗಲೇ ಲೇಟ್ ಆಗಿದ್ದರಿಂದ ಪ್ಲಾನ್ ಕೈಕೊಟ್ಟಿತ್ತು ಎನ್ನಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನವೇ ತೆರಳಿದ್ದರು. ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿಯೂ ಸಂಜೆ ಹೊತ್ತಿಗೆ ಮಕ್ಕಳು ನಿರ್ಗಮಿಸಿದ್ದರು. ಆದರೆ ಆತನ ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಎರಡು ಬಾರಿ ಮಣ್ಣಗುಡ್ಡ- ಗಾಂಧಿನಗರ ಲೊಕೇಶನ್ ತೋರಿಸಿತ್ತು ಅನ್ನುವುದು ಶಾರೀಕ್ ಗುರಿ ಇದೇ ಜಾಗ ಆಗಿತ್ತಾ ಅನ್ನುವ ಶಂಕೆ ಮೂಡಿಸಿದೆ.
ಇವೆಲ್ಲ ಸಂದೇಹ, ಪ್ರಶ್ನೆಗಳಿಗೆ ಉತ್ತರವನ್ನು ಉಗ್ರ ಶಾರೀಕ್ ನೀಡಬೇಕಾಗಿದೆ. ಆದರೆ, ವೈದ್ಯರ ಮಾಹಿತಿ ಪ್ರಕಾರ ಸುಟ್ಟ ಗಾಯಗಳಿಂದ ಪಾರಾಗಬೇಕಿದ್ದರೆ ಕನಿಷ್ಠ 25 ದಿನಗಳು ಬೇಕಂತೆ. ಅಲ್ಲದೆ, ಬಾಂಬ್ ಸ್ಫೋಟ ಸಂದರ್ಭದಲ್ಲಿ ಬಿಸಿ ಹೊಗೆ ಬಾಯಿ ಒಳಗೆ ಹೋಗಿರುವುದರಿಂದ ಗಂಟಲು ಇನ್ಫೆಕ್ಷನ್ ಆಗಿದೆ. ಅದರಿಂದಾಗಿ ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಒಂದು ತಿಂಗಳ ನಿರಂತರ ಚಿಕಿತ್ಸೆಯ ನಂತರವೇ ಆತ ಸ್ವಸ್ಥನಾದಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬಹುದು ಅನ್ನುವ ಲೆಕ್ಕಾಚಾರ ಇದೆ. ಏನಿದ್ದರೂ ಮೆಡಿಕಲೀ ಫಿಟ್ ಎಂದು ವೈದ್ಯರು ಸರ್ಟಿಫಿಕೇಟ್ ನೀಡದ ಹೊರತು ತನಿಖಾಧಿಕಾರಿಗಳು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಶಾರೀಕ್ ಚಿಕಿತ್ಸೆಯನ್ನೇ ತನಿಖಾಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ.
Autorickshaw bomb blast in Mangalore, Bomber Shariq location traced at Mangaladevi temple, did he plan for blast is the doubt police have got.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm