ಬ್ರೇಕಿಂಗ್ ನ್ಯೂಸ್
25-11-22 01:47 pm Mangalore Correspondent ಕರಾವಳಿ
ಮಂಗಳೂರು, ನ.25: ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ.
ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು. ತಾವು ಮಾಡಿದ್ದ ನವರಸಂ ರೂಪಂ ಎನ್ನುವ ಆಲ್ಬಂ ಹಾಡಿನ ರೀತಿಯಲ್ಲೇ ವರಾಹಂ ರೂಪಂ ಹಾಡನ್ನು ಮಾಡಲಾಗಿದೆ. ಅದರ ಟ್ಯೂನ್ ನಲ್ಲಿ ಬಳಸಿದ್ದ ತಾಂತ್ರಿಕ ಶೈಲಿ ತಮ್ಮ ಹಾಡನ್ನು ಹೋಲುತ್ತದೆ, ನಮ್ಮ ಹಾಡಿನ ಧಾಟಿಯಿಂದ ಪ್ರೇರಿತಗೊಂಡು ವರಾಹ ರೂಪಂ ಹಾಡು ರೂಪಿಸಲಾಗಿದೆ ಎಂದು ಕೋಜಿಕ್ಕೋಡ್ ಕೋರ್ಟಿನಲ್ಲಿ ತಕರಾರು ಅರ್ಜಿ ಹಾಕಲಾಗಿತ್ತು. ನ್ಯಾಯಾಲಯ ಈ ಬಗ್ಗೆ ಪ್ರತಿವಾದಿಗಳ ಅಹವಾಲು ಕೇಳುವ ಮೊದಲೇ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇದರಿಂದ ಕಾಂತಾರ ಸಿನಿಮಾಕ್ಕೆ ಭಾರೀ ಹಿನ್ನಡೆ ಅನ್ನುವ ರೀತಿ ಸುದ್ದಿ ಹಬ್ಬಿತ್ತು. ಆದರೆ ಥಿಯೇಟರ್ ಗಳಲ್ಲಿ ಹಾಡಿನ ಬಳಕೆಯನ್ನು ಹಿಂಪಡೆಯುವ ಗೋಜಿಗೆ ಸಿನಿಮಾ ತಂಡ ಹೋಗಿರಲಿಲ್ಲ. ಈ ನಡುವೆ, ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ತಂಡದ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆನಂತರ, ಹೊಂಬಾಳೆ ಫಿಲಂಸ್ ತಂಡ, ರಿಷಬ್ ಶೆಟ್ಟಿ ಪರವಾಗಿ ಮತ್ತು ಸಂಗೀತ ನಿರ್ದೇಶಕ ಲೋಕನಾಥ್ ಪರವಾಗಿ ಪ್ರತ್ಯೇಕವಾಗಿ ವಕೀಲರು ಹಾಜರಾಗಿ ಹಾಡಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ, ತೈಕ್ಕುಡಂ ಬ್ರಿಡ್ಜ್ ಎತ್ತಿದ್ದ ತಕರಾರು ಅರ್ಜಿಗೆ ಮೌಲ್ಯವೇ ಇಲ್ಲ ಅನ್ನುವ ಬಗ್ಗೆ ಸೂಕ್ತ ದಾಖಲೆ ಇಟ್ಟು ವಾದ ಮಂಡಿಸಿದ್ದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಶುಕ್ರವಾರ (ನ.25) ಅಂತಿಮ ಆದೇಶ ನೀಡಿದ್ದು, ತೈಕ್ಕುಡಂ ಬ್ರಿಡ್ಜ್ ತಂಡದ ಅರ್ಜಿಯನ್ನೇ ವಜಾ ಮಾಡಿದೆ. ಇದರಿಂದಾಗಿ ಕಾಂತಾರ ಸಿನಿಮಾದಲ್ಲಿ ಹಿಟ್ ಆಗಿದ್ದ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಯಾವುದೇ ಅಡ್ಡಿಯಿಲ್ಲ ಅನ್ನುವ ತೀರ್ಪನ್ನು ಕೋರ್ಟ್ ನೀಡಿದಂತಾಗಿದೆ. ಈ ಬಗ್ಗೆ ಹೆಡ್ ಲೈನ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿರುವ ವರಾಹ ರೂಪಂ ಹಾಡು ಬರೆದಿದ್ದ ಮತ್ತು ಕೋರ್ಟಿನಲ್ಲಿ ರಿಷಬ್ ಶೆಟ್ಟಿ ಪರವಾಗಿ ವಾದ ಮಂಡಿಸಿದ್ದ ಮಂಗಳೂರಿನ ವಕೀಲ ಶಶಿರಾಜ್ ಕಾವೂರು, ಆರಂಭದಲ್ಲಿ ಸ್ವಲ್ಪ ಕೇರ್ ಲೆಸ್ ಮಾಡಿದ್ದೆವು. ದೊಡ್ಡ ವಿಷಯ ಅಲ್ಲ ಅಂತ. ಆದರೆ, ಈ ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ಹೊಂಬಾಳೆ ಫಿಲಂಸ್ ತಂಡದವರು ವಕಾಲತ್ತು ಹಾಕಿದ್ದರು. ನಾವು ಕೂಡ ಪ್ರತ್ಯೇಕವಾಗಿ ಕೋರ್ಟಿಗೆ ಹಾಜರಾಗಿ ಹಾಡಿನ ಬಗ್ಗೆ ದಾಖಲೆಗಳನ್ನು ಮುಂದಿಟ್ಟು ವಕಾಲತ್ತು ಹಾಕಿದ್ದೆವು. ಈಗ ನಮ್ಮ ಪರವಾಗಿ ತೀರ್ಪು ಬಂದಿದೆ. ಕೋರ್ಟ್ ಮೆಟ್ಟಿಲೇರಿದವರಿಗೆ ತುಳುನಾಡಿನ ದೈವಗಳು ಕಾರಣಿಕವನ್ನು ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಈ ನಡುವೆ, ಕೋಜಿಕ್ಕೋಡ್ ಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟಿನಲ್ಲಿ ಹೊಂಬಾಳೆ ತಂಡದಿಂದ ಅರ್ಜಿ ಹಾಕಲಾಗಿತ್ತು. ಆದರೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಮಧ್ಯೆ ಮೇಲಿನ ಕೋರ್ಟಿಗೆ ಬರುವ ಅಗತ್ಯವಿಲ್ಲವೆಂದು ಹೊಂಬಾಳೆ ತಂಡದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇದರಿಂದ ಕಾಂತಾರ ಸಿನಿಮಾ ತಂಡಕ್ಕೆ ಮತ್ತೆ ಹಿನ್ನಡೆ ಅನ್ನುವ ರೀತಿ ಕೇರಳ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಕೇರಳ ಹೈಕೋರ್ಟ್ ನೀಡಿದ್ದ ಆದೇಶದ ಎರಡೇ ದಿನದಲ್ಲಿ ಕೋಜಿಕ್ಕೋಡ್ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ಕಾಂತಾರ ಸಿನಿಮಾ ತಂಡಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ. ಇದೇ ವೇಳೆ, ಹೆಸರೇ ಇಲ್ಲದ ತೈಕ್ಕುಡಂ ಬ್ರಿಡ್ಜ್ ತಂಡ ಕಾಂತಾರ ಸಿನಿಮಾದ ಬಗ್ಗೆ ಕೋರ್ಟಿನಲ್ಲಿ ಪ್ರಶ್ನೆ ಮಾಡಿ ಸಾಕಷ್ಟು ಪ್ರಚಾರವನ್ನೂ ಪಡೆಯಿತು.
Kannada Kantara movie makers bag major victory in the Kerala court against plea on Varaha Roopam song. The Kerala High Court Wednesday dismissed the petitions filed by the producer of Kantara movie, Hombale Films against ad-interim injunction orders passed by the two District Courts against the use of "Varaha Roopam" song in the movie over alleged copyright infringement Hombale Films v The Mathrubhumi Printing and Publishing Company Ltd and others
11-02-26 01:34 pm
Bangalore Correspondent
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 09:10 pm
HK News Desk
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm