ಹಿಂದು ಯುವತಿ ಮುಸ್ಲಿಂ ಆಗಿ ಮತಾಂತರಕ್ಕೆ ಯತ್ನ ಆರೋಪ ; ಮಂಗಳೂರಿನ ಖ್ಯಾತ ವೈದ್ಯೆ ಸೇರಿ ಮೂವರ ವಿರುದ್ಧ ದೂರು 

26-11-22 09:51 pm       Mangalore Correspondent   ಕರಾವಳಿ

ನಗರದ ಖ್ಯಾತ ಸ್ತ್ರೀ ವೈದ್ಯೆ ಡಾ. ಜಮೀಲಾ ವಿರುದ್ಧ ಹಿಂದು ಯುವತಿಯನ್ನು ಮತಾಂತರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಯುವತಿಯೊಬ್ಬಳು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. 

ಮಂಗಳೂರು, ನ.26 : ನಗರದ ಖ್ಯಾತ ಸ್ತ್ರೀ ವೈದ್ಯೆ ಡಾ. ಜಮೀಲಾ ವಿರುದ್ಧ ಹಿಂದು ಯುವತಿಯನ್ನು ಮತಾಂತರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಯುವತಿಯೊಬ್ಬಳು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. 

20 ವರ್ಷದ ಯುವತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾಳೆ. ಹತ್ತನೇ ಕ್ಲಾಸ್ ಬಿಟ್ಟು ಫ್ಯಾನ್ಸಿ ಅಂಗಡಿ ಸೇರಿದ್ದ ತನ್ನನ್ನು ಖಲೀಲ್ ಎಂಬಾತ ಮನವೊಲಿಸಿ ಕಲ್ಲಾಪಿನ ಆತನ ಮನೆಗೆ ಕರೆದೊಯ್ದಿದ್ದ. ಅಲ್ಲಿದ್ದ ಆತನ ಸಂಬಂಧಿಕ ಮಹಿಳೆಯರು ಕುರಾನ್ ಓದಲು ಮತ್ತು ನಮಾಜ್ ಮಾಡುವಂತೆ ಬಲವಂತ ಮಾಡಿದ್ದಾರೆ. ಹಣ ಕೊಟ್ಟು ಇಸ್ಲಾಂ ಧರ್ಮಕ್ಕೆ ಸೇರುವಂತೆ ಹೇಳಿ ನಮಾಜ್ ಮಾಡಿಸಿದ್ದಾರೆ. ನನ್ನನ್ನು ಖಲೀಲ್ ಆಟೋದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ, ಫ್ಯಾನ್ಸಿ ಅಂಗಡಿ ಬಿಟ್ಟು ಬಲ್ಮಠದ ಯೇನಪೋಯ ಆಸ್ಪತ್ರೆ ಮಾಲಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಎಂಟು ತಿಂಗಳ ಕಾಲ ಕೆಲಸ ಮಾಡಿದ್ದೇನೆ. 

ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸೈನಾಝ್ ಎಂಬವರು ಪರಿಚಯವಾಗಿ ನನ್ನನ್ನು ಡಾಕ್ಟರ್ ಜಮೀಲಾ ಮತ್ತು ಸೈಯದ್ ಅವರ ಮನೆಗೆ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದಾರೆ. ಅಲ್ಲಿ ಎಂಟು ತಿಂಗಳು ಕೆಲಸ ಮಾಡಿದ್ದೇನೆ. ಅಲ್ಲಿರುವಾಗಲೇ ಜಮೀಲಾ ಅವರು ನನಗೆ ಬುರ್ಖಾ ಧರಿಸುವಂತೆ ಹೇಳಿದ್ದು ಹೊರಗೆ ಯಾರಾದ್ರೂ ಕೇಳಿದರೆ ಮುಸ್ಲಿಂ ಎಂದು ಹೇಳುವಂತೆ ತಿಳಿಸಿದ್ದರು. ಅಲ್ಲಿ ಬಳಿಕ ಕೆಲಸದ ಒತ್ತಡ ಇದ್ದುದರಿಂದ ಅ.25ಕ್ಕೆ ಕೆಲಸ ಬಿಟ್ಟು ತನ್ನ ಮನೆಗೆ ತೆರಳಿದ್ದೆ. 

ಜಮೀಲಾ ಅವರ ಮನೆಯಲ್ಲಿದ್ದಾಗಲೇ ಭದ್ರಾವತಿ ಮೂಲದ ಐಮಾನ್ ಎಂಬಾತ ಪರಿಚಯವಾಗಿದ್ದು ಪ್ರೀತಿಸಲು ಒತ್ತಾಯ ಮಾಡಿದ್ದಾನೆ. ಅಲ್ಲದೆ, ಆಗಸ್ಟ್ 30 ರಂದು ತನ್ನ ಮನೆಗೆ ಬರುವಂತೆ ಒತ್ತಾಯ ಮಾಡಿದ್ದ. ಅದರಂತೆ, ಆತನ ಭದ್ರಾವತಿಯ ಮನೆಗೆ ಹೋಗಿ ಬಂದಿರುತ್ತೇನೆ. ನನ್ನನ್ನು ಇಸ್ಲಾಂಗೆ ಮತಾಂತರ ಆಗಲು ಪ್ರಯತ್ನ ಪಟ್ಟ ಜಮೀಲಾ, ಐಮಾನ್ ಮತ್ತು ಲೈಂಗಿಕ ಕಿರುಕುಳ ನೀಡಿದ ಖಲೀಲ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಯುವತಿ ದೂರು ನೀಡಿದ್ದಾಳೆ. 

ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದು ಐಪಿಸಿ ಸೆಕ್ಷನ್ 354, 354 ಎ, 506 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ. ‌

Mangalore Try to forcefully convert Hindu girl to Muslim, case filed against three including famous Gynecologist of city Dr Jameela at Pandeshwar Police Station. 20 year old girl who has given the complaint states that she was forcefully taken to the owners house and made her read Quran.