ಸುರತ್ಕಲ್ ಟೋಲ್ ಹೆಜಮಾಡಿಯಲ್ಲಿ ವಸೂಲಿಗೆ ಒಪ್ಪೋದಿಲ್ಲ ; ಉಡುಪಿ ಜಿಲ್ಲೆಯ ಜನರಿಗೆ ಹೊರೆ ಯಾಕೆ ? 

27-11-22 11:17 am       Udupi Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ರಘುಪತಿ ಭಟ್ ವಿರೋಧಿಸಿದ್ದಾರೆ.

ಉಡುಪಿ, ನ.27: ಸುರತ್ಕಲ್ ಟೋಲ್ ಗೇಟ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ರಘುಪತಿ ಭಟ್ ವಿರೋಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಭಟ್ ಸುರತ್ಕಲ್ ಟೋಲ್‌ ಗೇಟ್ ಮುಚ್ಚಿ, ಅಲ್ಲಿ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ ಶುಲ್ಕಕ್ಕೆ ಸೇರಿಸುವುದು ಸರಿಯಲ್ಲ. ಏಕೆಂದರೆ ಸುರತ್ಕಲ್ ಟೋಲ್‌ಗೇಟ್‌ಗೂ, ಹೆಜಮಾಡಿ ಟೋಲ್‌ಗೂ ಯಾವುದೇ ಸಂಬಂಧವಿಲ್ಲ. ಹೆಜಮಾಡಿಯ ಟೋಲ್‌ನ್ನು ನವಯುಗ ಕಂಪೆನಿ ಸಂಗ್ರಹಿಸುತ್ತಿದೆ ಎಂದಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ಈಗ ಮೂರು ಕಡೆಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ. ಸುರತ್ಕಲ್ ಟೋಲ್‌ ಅನ್ನು ಬಂಟ್ವಾಳ ರಸ್ತೆಗೆ ಸಂಬಂಧಿಸಿದ ಕಂಪೆನಿ ಪಡೆಯು‌ತ್ತಿದ್ದು, ನವಯುಗ ಅಲ್ಲಿ ಯಾವ ಕಾಮಗಾರಿಯನ್ನೂ ಮಾಡಿಲ್ಲ. ಈಗ ನವಯುಗ ಅಲ್ಲಿನ ಟೋಲ್‌ ಅನ್ನು ಉಡುಪಿಯ ಜನತೆಯಿಂದ ಪಡೆಯುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ ಎಂದರು. 

Surathkal toll: Report on concession agreement sought | Deccan Herald

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಈ ನೀತಿಯಿಂದ ತೊಂದರೆಗೆ ಒಳಗಾಗುವುದು ಉಡುಪಿ ಜಿಲ್ಲೆಯ ಜನತೆ. ಅವರೀಗ ತಮ್ಮದಲ್ಲದ ತಪ್ಪಿಗೆ ಅಧಿಕ ಶುಲ್ಕ ಪಾವತಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರವನ್ನು ವಿರೋಧಿಸಿ ತಾನು ಕೇಂದ್ರ ಸರಕಾರಕ್ಕೆ, ನಮ್ಮ ಸಂಸದರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಿರ್ಧಾರವನ್ನು ರದ್ದು ಪಡಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

Udupi MLA Raghupathi Bhat Slams over merger of Surathkal toll to Hejamady, says wont tolerate it